ಇಲ್ಲಿ ಕಿಟಕಿ ಗೋಡೆಗಳೆ ಪುಸ್ತಕ : ಶಾಲಾ ವಿದ್ಯಾರ್ಥಿಗಳೆ ಶಿಕ್ಷಕರು – ವಿಶಿಷ್ಠವಾದ ಸರ್ಕಾರಿ ಶಾಲೆ

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದ್ರೆ ನೆನಪಾಗೋದು ಒಡೆದ ಹೆಂಚು,ಮುರಿದ ಕಿಟಕಿ,ಮತ್ತು ಬಿರುಕು ಬಿಟ್ಟ ಗೋಡೆ.ಆದ್ರೆ ಇಲ್ಲೊಂದು ಶಾಲೆ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ನಿತ್ಯವೂ ಕಂಗೊಳಿಸುತ್ತದೆ. ಅರೆ ಅದ್ಯಾವ ಶಾಲೆ ಎಲ್ಲಿದೆ ಅಂತೀರಾ? ಅದಕ್ಕುತ್ತರ ಇಲ್ಲಿದೆ ನೋಡಿ.

ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಡಕಂಬಿ ತೋಟದ ಶಾಲೆ. ಗಡಿಭಾಗದ ತಾಲ್ಲುಕು ಕೇಂದ್ರದಲ್ಲಿ ಇರುವ ಈ ಕನ್ನಡ ಶಾಲೆಯಲ್ಲಿ ಗೋಡೆಯ ಮೇಲೆಲ್ಲಾ ರಾಜ್ಯ,ಜಿಲ್ಲೆ, ಮತ್ತು ತಾಲ್ಲೂಕಿನ ಹೆಸರುಗಳು, ಕಾಲ ಚಕ್ರ,ರಾಷ್ಟ್ರೀಯ ಲಾಂಛನಗಳು, ಮತ್ತು ರಾಷ್ಟ್ರ ಪುರುಷರ ಚಿತ್ರಗಳು. ಶಾಲೆಯ ಪ್ರತಿ ಕಿಟಕಿಗಳ ಮೇಲೆ ಹರಡಿಕೊಂಡಿರುವ ಕನ್ನಡದ ವರ್ಣಮಾಲೆ,ಇಂಗ್ಲಿಷ್ ವರ್ಣಮಾಲೆ, ಕನ್ನಡ ,ಹಿಂದಿ, ಇಂಗ್ಲೀಷ್, ಮತ್ತು ರೋಮನ್ ಅಕ್ಷರಗಳು. ಒಟ್ಟಾರೆ ಯಾಗಿ ಈ ಶಾಲೆಯೇ ತೆರೆದಿಟ್ಟ ಪುಸ್ತಕದಂತೆ ಕಾಣಿಸುತ್ತದೆ.

ಒಂದೊಮ್ಮೆ ಶಿಕ್ಷಕರು ಕಾರಣಾಂತರಗಳಿಂದ ಶಾಲೆಗೆ ಬರುವದು ವಿಳಂಬವಾದಾಗ ಈ ಶಾಲೆಯ ಗೋಡೆ ಕಿಟಕಿಗಳು ಇಲ್ಲಿನ ಮಕ್ಕಳಿಗೆ ಪಾಠ ಹೇಳುತ್ತವೆ.
ಇಲ್ಲಿನ ಇನ್ನೊಂದು ವಿಶೇಷ ಎಂದರೆ ಸುತ್ತ ಮುತ್ತಲಿನ ತೋಟದ ವಿದ್ಯಾರ್ಥಿಗಳು ಸೇರಿದಂತೆ ಅಥಣಿ ಪಟ್ಟಣದಿಂದ ಕೂಡ ಮಕ್ಕಳು ಈ ಶಾಲೆಗೆ ದಾಖಲಾಗಿರುವದು.

ವಿದ್ಯಾದಾನ ಶ್ರೇಷ್ಠ ದಾನ ಎನ್ನುವ ಮಾತನ್ನು ಮನವರಿಕೆ ಮಾಡಿಕೊಂಡಿರುವ ಸಮಾನ ಮನಸ್ಕ ಶಿಕ್ಷಕ ರಿಂದ ಕೂಡಿರು ಸರ್ಕಾರಿ ಕನ್ನಡ ಶಾಲೆಯೊಂದು ಕಾನ್ವೆಂಟ್ ಮತ್ತು ಖಾಸಗಿ ಶಾಲೆಗಳನ್ನು ಮೀರಿಸುತ್ತಿದ್ದು ಒಂದರಿಂದ ಎಂಟನೆ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಎರಡುನೂರಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.

ಇನ್ನೂ ಶಾಲೆಯಲ್ಲಿ ನಾವು ಸೇವೆ ಸಲ್ಲಿಸಿ ನಿವೃತ್ತರಾದರು ಕೂಡ ಶಾಲೆಯ ಮಕ್ಕಳಿಗೆ ನಮ್ಮ ನೆನಪು ಉಳಿಯಬೇಕು,ಈ ಶಾಲೆ ಮಾದರಿ ಶಾಲೆ ಆಗಬೇಕು ಅನ್ನುವ ನಿಟ್ಟಿನಲ್ಲಿ ಇಂತಹದ್ದೊಂದು ವಿಚಾರ ಇಟ್ಟುಕೊಂಡು ಶಾಲೆಯ ಅನುದಾನದ ಜೊತೆಗೆ ನಮ್ಮ ಸಂಬಳ ಮತ್ತು ಮಕ್ಕಳ ಪೋಷಕರ ಸಹಕಾರದಿಂದ ಇದನ್ನೆಲ್ಲ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights