ಉಪ ಮೇಯರ್ಗೆ ಕೊರೊನಾ ಎಂದು ಸುಳ್ಳು ಸುದ್ದಿ ಹರಡಿದ್ದ ಪತ್ರಕರ್ತರ ವಿರುದ್ಧ FIR
ಇಬ್ಬರು ಪತ್ರಕರ್ತರು ತಮ್ಮ ಬಗ್ಗೆ ಸುಳ್ಳುಸುಳ್ಳು ಹರಡಿದ್ದಾರೆ ಆರೋಪಿಸಿ ಗ್ರೇಟರ್ ಹೈದರಾಬಾದ್ ಉಪ ಮೇಯರ್ ಮೊಹಮ್ಮದ್ ಬಾಬಾ ಫಾಸಿಯುದ್ದೀನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಪ ಮೇಯರ್ ಮತ್ತು ಇಬ್ಬರು ಕಾರ್ಪೋರೇಟರ್ಗಳನ್ನು ಕೊರೊನಾ ಸೋಂಕಿನ ಪರೀಕ್ಷಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿದೆ. ಹಾಗಾಗಿ ಇತರ 23 ಕಾರ್ಪೊರೇಟರ್ಗಳನ್ನು ಪರೀಕ್ಷಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ವಸ್ತುನಿಷ್ಟ ಪರಿಶೀಲನೆ ಇಲ್ಲದೆ ವರದಿ ಮಾಡಿರುವ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಇಬ್ಬರು ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಬಾ ಫಾಸಿಯುದ್ದೀನ್ ಪೊಲೀಸರಿಗೆ ಮನವಿ ಮಾಡಿ, ಹೈದರಾಬಾದ್ ಪೊಲೀಸ್ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಅಪರಿಚಿತ ವರದಿಗಾರರ ವಿರುದ್ಧ ಹೈದರಾಬಾದ್ ಸೈಬರ್ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟಿಎನ್ಸಿ ನ್ಯೂಸ್ನ ಅಪರಾಧ ವರದಿಗಾರ ಮೊಹಮ್ಮದ್ ಇಮ್ರಾನ್, ಆನ್ಲೈನ್ ನ್ಯೂಸ್ ವೆಬ್ಸೈಟ್ ಮತ್ತು ಡೆಕ್ಕನ್ ಟುಡೆ ನ್ಯೂಸ್ ಎಂಬ ಸಾಮಾಜಿಕ ಮಾಧ್ಯಮ ಆಧಾರಿತ ಸುದ್ದಿ ಚಾನೆಲ್ನ ಅಪರಿಚಿತ ವರದಿಗಾರರು ಫಾಸಿಯುದ್ದೀನ್ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ ಎಂದು ಉಪ ಮೇಯರ್ ಆರೋಪಿಸಿದ್ದಾರೆ.
“ಜಿಎಚ್ಎಂಸಿ ಉಪ ಮೇಯರ್ ಬಾಬಾ ಫಾಸಿಯುದ್ದೀನ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿಗಳನ್ನು ಡೆಕ್ಕನ್ ಟುಡೆ ನ್ಯೂಸ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದೆ. ವದಂತಿಗಳನ್ನು ನಂಬಬೇಡಿ ಉಪ ಮೇಯರ್ ಬಾಬಾ ಫಾಸಿಯುದ್ದೀನ್ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಲಾಗಿದೆ.
ಉಪಮೇಯರ್ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ಅಪರಿಚಿತ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಹೈದರಾಬಾದ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸುತ್ತಿರುವ ವೈದ್ಯರು ಮತ್ತು ದಾದಿಯರ ಬಗ್ಗೆ ಸುಳ್ಳು ಸುದ್ದಿ ಹರಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಸೈಬರ್ ಕ್ರೈಮ್ ವಿಭಾಗದ ಡಿಸಿಪಿ ಕೆವಿಎಂ ಪ್ರಸಾದ್ ತಿಳಿಸಿದ್ದಾರೆ.

