ಕಾಂಗ್ರೆಸ್‌ ಕಿರಕಿರ ಎನ್ನುವ ಹಳೆಯ ಮಂಚ ಎಂದ ಶಿವಸೇನಾ: ಮಹಾರಾಷ್ಟ್ರ ಸರ್ಕಾರಕ್ಕಿದೆಯಾ ಸಂಚಕಾರ!

ದೇಶದಲ್ಲಿಯೇ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿರುವ ರಾಜ್ಯ ಮಹಾರಾಷ್ಟ್ರ. ಅಲ್ಲಿನ ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಜನಾಭಿಪ್ರಾಯ ಮೂಢಿಸಲು ಹಾಗೂ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹವಣಿಸುತ್ತಿದೆ.

ಇದಕ್ಕೆ ಪೂರಕವೆಂಬಂತೆ ಶಿವಸೇನೆ – ಕಾಂಗ್ರೆಸ್‌ – ಎನ್‌ಸಿಪಿಯ ಮೈತ್ರಿಕೂಟ ಸರಕಾರದಲ್ಲಿ ಭಿನ್ನಮತ ಬುಸುಗುಡುತ್ತಿದೆ ಎಂದು ಕಂಡುಬರುತ್ತಿದೆ. ಕಾಂಗ್ರೆಸ್‌ನ್ನು ಕಿರುಗುಟ್ಟುವ ಹಳೆಯ ಮಂಚಕ್ಕೆ ಹೋಲಿಸುವ ಮೂಲಕ ಶಿವಸೇನೆ ಭಿನ್ನಮತವನ್ನು ಬಯಲು ಮಾಡಿದೆ.  ಆದರೆ, ಸರಕಾರ ಸುಭದ್ರವಾಗಿದೆ ಎಂದು ಹೇಳಿಕೊಂಡಿದೆ.

‘ಕಾಂಗ್ರೆಸ್‌ ಕಿರುಗುಟ್ಟುವ ಹಳೆಯ ಮಂಚವಿದ್ದಂತೆ, ಹಳೆಯ ಮಂಚವು ಕಿರಕಿರ ಎಂದು ಸದ್ದು ಮಾಡುವಂತೆ, ಕಾಂಗ್ರೆಸ್‌ ಯಾವಾಗಲೂ ಕಿರಿಕಿರಿಯನ್ನು ಉಂಟುಮಾಡುತ್ತಿರುತ್ತದೆ. ಆ ಮಂಚ ತುಂಬಾ ಹಳೆಯದು. ಆದರೆ ಅದಕ್ಕೆ ಐತಿಹಾಸಿಕ ಪರಂಪರೆಯಿದೆ. ಮಂಚದ ಮೇಲೆ ಹಲವು ನಾಯಕರಿದ್ದಾರೆ, ಅವರು ಪದೇಪದೆ ತಮ್ಮ ನಿಲುವು ಬದಲಿಸುತ್ತಿರುತ್ತಾರೆ. ಕಾಂಗ್ರೆಸ್‌ ಇರಲಿ, ಎನ್‌ಸಿಪಿ ಇರಲಿ ಎರಡೂ ಪಕ್ಷಗಳು ಸಾಂದರ್ಭಿಕ ರಾಜಕಾರಣಿಗಳನ್ನು ಹೊಂದಿವೆ. ಅವರಿಗೆ ಯಾವಾಗ ಮುನಿಸು ತೋರಬೇಕು ಮತ್ತು ಯಾವಾಗ ನಿಲುವು ಬದಲಿಸಬೇಕು ಎಂಬುದು ಚೆನ್ನಾಗಿ ಗೊತ್ತು. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮೈತ್ರಿಕೂಟದಲ್ಲಿ ಇದನ್ನೆಲ್ಲಾ ಸಹಿಸಲು ಸಿದ್ಧರಾಗಬೇಕು” ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

Making an ideological compromise: How Maharashtra's Shiv Sena ...

ಕಾಂಗ್ರೆಸ್‌ ಪಕ್ಷವನ್ನು ಮೈತ್ರಿ ಸರಕಾರದ ‘ಮೂರನೇ ಸ್ತಂಭ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದ್ದು, ಮೈತ್ರಿಕೂಟದಲ್ಲಿ ಪಕ್ಷವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾಂಗ್ರೆಸ್ಸಿಗರ ಅಸಮಾಧಾನದ ಬಗ್ಗೆ ಸೇನೆ ಕಿಡಿಕಾರಿದೆ. ”ಕಾಂಗ್ರೆಸ್‌ ನಾಯಕರು ಗೊಣಗಲು ಕಾರಣವಾರೂ ಏನು? ಕಾಂಗ್ರೆಸ್‌ ನಾಯಕರು ಮತ್ತು ಸಚಿವರಾದ ಬಾಲಾಸಾಹೇಬ್‌ ತೋರಟ್‌ ಮತ್ತು ಅಶೋಕ್‌ ಚೌಹಾಣ್‌ ಸುದೀರ್ಘ ಆಡಳಿತದ ಅನುಭವ ಹೊಂದಿದ್ದಾರೆ. ಅದೇ ರೀತಿ ಎನ್‌ಸಿಪಿ ವರಿಷ್ಠ ಶರದ ಪವಾರ್‌ ಸಹ ಉತ್ತಮ ಆಡಳಿತದ ಅನುಭವ ಹೊಂದಿದ್ದಾರೆ. ಶರದ್‌ ಪವಾರ್‌ ಪಕ್ಷದಿಂದ ಇಲ್ಲದ ಆಕ್ಷೇಪ ಕಾಂಗ್ರೆಸ್‌ನಿಂದ ಏಕೆ..? ಪದೇ ಪದೆ ಗೊಣಗುಡುವುದು ಏಕೆ..?,” ಎಂದು ಪ್ರಶ್ನಿಸಲಾಗಿದೆ.

 

Maharashtra Crisis: Shiv Sena, NCP, Congress approach Supreme Court

ಕೊರೊನಾ ನಿಯಂತ್ರಣ ಕ್ರಮಗಳ ವಿಚಾರದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿತ್ತು. ನಂತರ ವಿಧಾನ ಪರಿಷತ್‌ ಚುನಾವಣೆ ವಿಚಾರದಲ್ಲಿಯೂ ಕಾಂಗ್ರೆಸ್‌ ಕ್ಯಾತೆ ತೆಗೆದಿದೆ. ಒಟ್ಟು 12 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ತಲಾ ನಾಲ್ಕು ಸ್ಥಾನ ನೀಡಬೇಕು ಎನ್ನುವುದು ಕಾಂಗ್ರೆಸ್‌ ಬೇಡಿಕೆ ಇಟ್ಟಿತ್ತು. ವಿಧಾನಸಭೆ ಸಂಖ್ಯಾಬದಲ ಆಧಾರದಲ್ಲಿಯೇ ಸೀಟು ಹಂಚಿಕೆ ಆಗಬೇಕು. ಅದರಂತೆ ಶಿವಸೇನೆಗೆ ಐದು, ಎನ್‌ಸಿಪಿಗೆ ನಾಲ್ಕು ಹಾಗೂ ಕಾಂಗ್ರೆಸ್‌ಗೆ ಮೂರು ಸ್ಥಾನ ನೀಡಬೇಕು ಎನ್ನುವುದು ಶಿವಸೇನೆ ಪಟ್ಟುಹಿಡಿದ್ದಿತ್ತು.

ಇದೆಲ್ಲದರ ನಡುವೆ, ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿಯವರು, “ನಾವು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಬೆಂಬಲಿಸುತ್ತೇವೆ. ಸರ್ಕಾರದ ನಿರ್ಧಾರಗಳಲ್ಲಿ ಭಾಗಿಯಾಗುವುದಿಲ್ಲ. ಬೆಂಬಲಿಸುವದಕ್ಕೂ, ಆಡಳಿತದಲ್ಲಿ, ನೀತಿ-ನಿರ್ಧಾರಗಳಲ್ಲಿ ಭಾಗಯಾಗುವುದಕ್ಕೂ ವ್ಯತ್ಯಾಸವಿದೆ” ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights