ಕೆಮ್ಮಂಗಿಲ್ಲ, ಸೀನಂಗಿಲ್ಲ – ಸಾಮಾನ್ಯ ಲಕ್ಷಣಗಳಿದ್ದರೆ ಜನ ನೋಡೋ ದೃಷ್ಠಿ ಹೇಗಿರುತ್ತೆ…..?

ಕೆಮ್ಮಂಗಿಲ್ಲ, ಸೀನಂಗಿಲ್ಲ. ನಗಡಿ ಜ್ವರದ ಲಕ್ಷಣ ಕಂಡು ಬಂದರೆ ಮುಗಿತು ಕಥೆ. ಮನೆ ಬಿಟ್ಟು ಹೊರಬರೋಹಾಗೇ ಇಲ್ಲ ಅಕ್ಕ ಪಕ್ಕದ ಮನೆಯವರು ನೋಡುವ ದೃಷ್ಟಿಕೋನಕ್ಕೆ ಕೆಲವರು ಸೋತು ಸುಣ್ಣವಾಗಿಬಿಟ್ಟಿದ್ದಾರೆ. ಯಾಕೆ ಗೊತ್ತಾ..? ಅದನ್ನ ಹೇಳಿದ್ರೆ ಭಯ ಪಡಬೇಕೋ..? ಬೇಡವೋ..? ಅನ್ನೋದೇ ಅರ್ಥ ಆಗೋದಿಲ್ಲ. ಅಷ್ಟಕ್ಕೂ ಕೊರೊನಾ ಒಂದು ಪದ ಹೇಗೆ ಬಳಕೆಯಾಗುತ್ತಿದೆ ಅನ್ನೋದನ್ನ ನೋಡೋಣ.

ಶತ್ರುಗಳಿದ್ದರೆ ಸೋಂಕು ತಗುಲಿರುವ ಸುಳ್ಳು ಸುದ್ದಿ –

ಎಸ್… ಯಾರಾದ್ರು ಶತ್ರುಗಳಿದ್ದರೆ ಅವರಿಗೆ ಪಾಠ ಕಲಿಸಲು ಹೋಗಿ ಅವರಿಗೇ ಕೊರೊನಾ ಸೋಂಕು ಹರಡಿದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಪ್ರಾಣ ಹೋಗೋ ವಿಚಾರ ಅಂದ್ರೆ ಯಾರು ಬೇಕಾದ್ರು ಭಯ ಪಡ್ತಾರೆ. ಅದೇ ಪ್ರಾಣಕ್ಕೆ ಕುತ್ತು ತರೋ ವೈರಸ್ ವ್ಯಕ್ತಗೆ ಇದೆ ಅಂದ್ರೆ ಆ ವ್ಯಕ್ತಿ ಬಳಿ ಯಾರೂ ಕೂಡ ಕಣ್ಣಾಯಿಸಿ ಕೂಡ ನೋಡುವುದಿಲ್ಲ. ಜನರು ಆ ವ್ಯಕ್ತಿ ಜಗತ್ತಿನಲ್ಲಿ ಮಾಡದ ಅಪರಾಧಗಳನ್ನೆಲ್ಲಾ ಮಾಡಿ ಬಂದವನಂತೆ ಬಿಂಬಸಲು ಶುರು ಮಾಡ್ತಾರೆ. ಇಂಥಹ ಕೆಂಗಣ್ಣಿಗೆ ಶತ್ರು ಎನ್ನುವ ವ್ಯಕ್ತಿಯನ್ನ ಗುರಿ ಮಾಡುವವರ ಸಂಖ್ಯೆ ಅಧಿಕವಾಗಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಜನ ಈ ರೀತಿ ಬಳಕೆ  ಮಾಡಿಕೊಳ್ಳುತ್ತಿದ್ದಾರೆ.

Image result for coronA Fake news

ಕಚೇರಿಯಲ್ಲಿ ಸೋಂಕು ಹರಡಿದೆ ಎನ್ನುವ ಸುದ್ದಿ –

ಜನ ಕಚೇರಿಗೆ ಹೋಗಿ ಕೆಲಸ ಮಾಡಲು ಮನಸ್ಸಿಲ್ಲ ಅಂತಾದರೆ ಸೋಂಕು ತಗುಲಿರುವ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅನಿವಾಋ್ಯವಾಗಿ ಕಚೇರಿಕೆ ರಜೆ ಕೊಡುವಂತೆ ಮಾಡಿರುವ ಪ್ರಕರಣಗಳು ನಮ್ಮ ಅಧಿಕ ಇವೆ. ಕಚೇರಿಗಳಲ್ಲಿ ಜೊತೆಯಾಗಿ ಕುಳಿತು ಕೆಲಸ ಮಾಡುವ ಉದ್ಯೋಗಿಗಳ ಗೋಳು ಕೇಳಲಾಗದೇ ಅದೆಷ್ಟೋ ಕಂಪನಿಗಳು ರಜೆಯನ್ನು ಘೋಷಿಸಿದೆ. ರಜೆ ಪಡೆಯುವ ನೆಪದಲ್ಲಿ ಜನ ಹೀಗೂ ಮಾಡಿರುವುದುಂಟು. ಆರಂಭದಲ್ಲಿ ಎಲ್ಲಾ ಕಂಪನಿಗಳಿಗೆ ರಜೆ ಘೋಷಿಸಲಾಗಿರಲಿಲ್ಲ. ಆಗ ಇಂಥಹ ಘಟನೆಗಳು ನಡೆದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ-

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನ ವೀಕ್ಷಣೆ ಮಾಡಬೇಕೆಂದು ಕೊರೊನಾ ವಿಚಾರವಾಗಿ ಸುಳ್ಳು ಸುದ್ದಿಗಳನ್ನ ಹರಿಬಿಟ್ಟಿದ್ದು, ಈಗಲೂ ಹರಿ ಬಿಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಜನ ಸಾಯೋ ವಿಚಾರಕ್ಕೆ ಬಂದ ಸುದ್ದಿಗಳು ಮಾತ್ರ ಸತ್ಯಕ್ಕಿಂತ ಹೆಚ್ಚು ಸುಳ್ಳು ಸುದ್ದಿಗಳೇ ಹರಿಬಿಡಲಾಗಿದೆ. ‘ಬಸ್ ಲ್ಲಿ ಕೊರೊನಾ, ರೈಲ್ವದಲ್ಲಿ ಕೊರೊನಾ, ಮೆಟ್ರೋದಲ್ಲಿ ಕರೊನಾ, ಮಾರುಕಟ್ಟೆಯಲ್ಲಿ ಕೊರೊನಾ.  ಆ ವ್ಯಕ್ತಿಗೆ ಕರೊನಾ ಇದೆ. ಈ ವ್ಯಕ್ತಿಗೆ ಕರೋನಾ ಬಂದಿದೆ. ನಾವು ನೋಡ್ವಿ.’ ಇಂಥಹ ಸುದ್ದಿಗೇ ಹೆಚ್ಚು. ಇನ್ನೂ ಔಷಧಿ ವಿಚಾರಕ್ಕಂತೂ ನಾವುಗಳು ಹೇಳೋ ಹಾಗೇ ಇಲ್ಲ. ಕೆಲವರಂತೂ ಮೆಸೇಜ್ ಮೂಲಕವೇ ಕೊರೊನಾ ಗೆ ಟ್ರೀಟ್ ಮೆಂಟ್ ಕಂಡು ಹಿಡಿದುಬಿಟ್ಟಿದ್ರು. ಹೀಗಾಗಿ ಸಾರ್ವಜನಿಕರ ಸ್ಥಳಗಳಲ್ಲಿ ಸಾಮಾನ್ಯವಾಗಿ ಕೆಮ್ಮುವ ಹಾಗಿಲ್ಲ, ಸೀನುವ ಹಾಗಿಲ್ಲ. ಯಾವುದೇ ಸೊಂಕಿಲ್ಲದವರು ಸುಳ್ಳು ಸುದ್ದಿಗಳಿಗೆ ಬಲಿಯಾಗಿದ್ದಾರೆ.

ಕೆಮ್ಮಿದವರಿಗೆ ಥಳಿತ –

ಹೌದು… ಸಾರ್ವಜನಿಕ ಸ್ಥಳದಲ್ಲಿ ಕೆಮ್ಮಿದವರಿಗೆ , ಸೀನಿದವರಿಗೆ ಸೀನಿದವರಿಗೆ ಥಳಿದ ಘಟನೆ ನಡೆದಿವೆ. ತಕ್ಷಣಕ್ಕೆ ಅನುಮಾನ ಬಂದಲ್ಲಿ ಅಂತವರನ್ನು ಆಸ್ಪತ್ರೆಗೆ ದಾಖಲಿಸುವಂತ ಘಟನೆಗಳು ನಡೆದಿವೆ.

ಕೊರೊನಾ ಗೆ ಔಷಧಿ –

ಜಗತ್ತಿನಾದ್ಯಂತ 4.69 ಲಕ್ಷ ಜನರಿಗೆ ಸೋಂಕು ಕಂಡುಬಂದಿದ್ದು, 21 ಸಾವಿರ ಜನರು ಬಲಿಯಾಗಿದ್ದಾರೆ.ಇಷ್ಟಾದರೂ ಕೊರೊನಾ ತಡೆಗೆ ಯಾವುದೇ ಔಷಧಿ ಕಂಡು ಹಿಡಿಯಲಾಗಿಲ್ಲ. ಆದರೂ ಕೆಲ ಮಂದಿ ಕೊರೊನಾಗೆ ಔಷಧಿ ಕೊಡುತ್ತೇವೆ ಎಂದು ಜನರಿಗೆ ಮೋಸ ಮಾಡಿದ ಘಟನೆಗಳು ನಡೆದಿವೆ.ಇಂಥಹ ಸಂದರ್ಭವನ್ನು ಜನ ಹಣ ಮಾಡುವ ದೃಷ್ಟಿಯಿಂದ ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಯಾರಾಧ್ರು ಸೀನಿದ್ರೆ, ಕೆಮ್ಮಿದ್ರೆ ಅಂಥವರನ್ನು ಕರೆದುಕೊಂಡು ಹೋಗಿ ಇಂತಹ ಸುಳ್ಳು ಹೇಳುವ ಕ್ಲಿನಿಕ್ ಗಳಲ್ಲಿ ಔಷಧಿ ಕೊಡಿಸಿದ್ದು ಉಂಟು ಜನ.

ಒಟ್ಟಿನಲ್ಲಿ ಜನರಿಗೆ ಸಾಮಾನ್ಯವಾಗಿ ಕೆಮ್ಮು, ನಗಡಿ,ಸೀನು ಬರೋ ಹಾಗಿಲ್ಲ. ಒಂದು ವೇಳೆ ಬಂದರೆ ಅವರು ದೇಶದಲ್ಲಿ ಯಾರೂ ಕೂಡ ಮಾಡದ ಅಪರಾಧಿಗಳಂತೆ ಜನ ಬಿಂಬಿಸುವುದು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು ನಿಜ. ಆದರೆ ಅನುಮಾನಿಸಿ ಅಪರಾಧಿಗಳಂತೆ ಶಂಕಿತರನ್ನು ಬಿಂಬಿಸುವುದು ತಪ್ಪು. ವಿದ್ಯಾವಂತರಾದ ನಾವುಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ಇಂಥಹ ಸುಳ್ಳು ಹಾಗೂ ಅಪನಂಬಿಕೆಗೆ ಜಾಗವಿರುವುದಿಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights