ಕೊರೊನಾ ಬಗ್ಗೆ ಮತ್ತೊಂದು ಆತಂಕಕಾರಿ ವಿಚಾರ ಬಯಲು ಮಾಡಿದ WHO…!
ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕೋವಿಡ್-19 ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ವಿಚಾರವನ್ನು ಬಯಲು ಮಾಡಿದೆ.
ಹೌದು… ಇಡೀ ಪ್ರಪಂಚವನ್ನೇ ಬುಡಮೇಲು ಮಾಡಿದ ಕೊರೊನಾ ವೈರಸ್ ಯಾವ ನಿಯಂತ್ರಣಕ್ಕೆ ಬರುತ್ತದೆ ಎಂದು ಯಾರಿಂದಲೂ ಹೆಳಲು ಸಾಧ್ಯವಿಲ್ಲ ೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
WHO ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೈಕಲ್ ರಯಾನ್ ಇಡೀ ಜಾಗತಿಕ ವಲಯವನ್ನು ಸಂಕಷ್ಟಕ್ಕೀಡು ಮಾಡಿರುವ ಕೊರೊನಾ ವೈರಸ್ ಅಂತ್ಯವಾಗುವ ಬಗ್ಗೆ ಮಾತನಾಡಿ, ಕೊರೊನಾ ಸೋಂಕು ಇತರೆ ಸಾಂಕ್ರಾಮಿಕ ರೋಗಗಳಂತೆ ಮತ್ತೊಂದು ಸ್ಥಳೀಯ ವೈರಸ್ ಆಗಿ ಇಲ್ಲಿಯೇ ಉಳಿದುಕೊಳ್ಳಬಹುದು. ಇದು ಯಾವಾಗ ಅಂತ್ಯವಾಗುತ್ತೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಡಾ. ಮೈಕಲ್ ಹೇಳಿಕೆ ಪ್ರಕಾರ, ಕೊರೊನಾ ವೈರಸ್ ನಾಶ ಮಾಡಲು ಔಷಧಿಯಿಂದ ಮಾತ್ರ ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಔಷಧಿ ಇಲ್ಲದೇ ಇದ್ದರೂ ಸೋಂಕು ಹರಡಿರುವ ಪ್ರಮಾಣ ಕಡಿಮೆ ಇದೆ. ವಾಸ್ತವದಲ್ಲಿ ಈ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸಶಕ್ತ ಜೀವನ ಪುನಾರಂಭಿಸಲು ಕೆಲವು ವರ್ಷಗಳೇ ಬೇಕಾಗಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್, ಹಲವು ದೇಶಗಳು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಆರಂಭಿಕ ಹಂತದಲ್ಲಿರುವುದಾಗಿ ಹೇಳಿವೆ. ಆದರೆ ಈ ಮಹಾಮಾರಿ ಜಗತ್ತಿನಲ್ಲಿ ಇನ್ನೂ ದೀರ್ಘಕಾಲ ಇರುತ್ತದೆ ಎಂದು ತಿಳಿಸಿದ್ದರು.
ಮತ್ತೊಂದು ಆತಂಕಕಾರಿ ವಿಚಾರ ಅಂದರೆ ಕೆಲವೊಂದು ದೇಶಗಳು ನಮ್ಮಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ತಿಳಿದಿವೆ. ಆದರೆ ಹಾಗಂದುಕೊಂಡ ಪ್ರದೇಶದಲ್ಲಿ ಕೂಡ ಸೋಂಕುಗಳು ಮತ್ತೆ ಕಂಡುಬರುತ್ತಲೇ ಇವೆ. ಇತ್ತ ಆಫ್ರಿಕಾ ಮತ್ತು ಅಮೆರಿಕದಲ್ಲಿಯೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳು ಎಚ್ಚರದಿಂದಿದ್ದು, ಜಾಗ್ರತೆ ವಹಿಸುವುದೊಂದೇ ನಮ್ಮನ್ನ ಕಾಪಾಡುವುದು ಎಂದು ಭಾವಿಸಿದ್ದಾರೆ.

