ಚಳಿಗಾಲದಲ್ಲಿಯೇ ಶಾಖೋತ್ಪನ್ನ ಸ್ಥಾವರಗಳ ಮೇಲೆ ವಿದ್ಯುತ್ ಒತ್ತಡ..!

ಸಾಮಾನ್ಯವಾಗಿ ಮಳೆಗಾಲ ಹಾಗು ಚಳಿಗಾಲದಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇರದ ಹಿನ್ನೆಲೆ ‌ಶಾಖೋತ್ಪನ್ನ ಸ್ಥಾವರಗಳಿಗೆ ರೆಸ್ಟ್ ನೀಡುತ್ತಿದ್ದರು, ಆದರೆ ಈ‌ ಬಾರಿ ಚಳಿಗಾಲದಲ್ಲಿ ಅಧಿಕ ವಿದ್ಯುತ್ ಬೇಡಿಕೆ ಉಂಟಾಗಿದ್ದರಿಂದ ಶಾಖೋತ್ಪನ್ನ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ, ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಶೇ ೪೦ ರಷ್ಟು ವಿದ್ಯುತ್ ರಾಯಚೂರು ಶಾಖೋತ್ಪನ್ನ ಸ್ಥಾವರದಿಂದ ಉತ್ಪಾದನೆಯಾಗುತ್ತಿದೆ, ಆರ್ ಟಿಪಿಎಸ್ ನಿಂದ‌ ಬೇಸಿಗೆಯಲ್ಲಿ ಅಧಿಕ ವಿದ್ಯುತ್ ಉತ್ಪಾದಿಸುತ್ತಿದ್ದರು, ಆದರೆ ಈಗಲೇ ಸ್ಥಾವರದ ೭ ಘಟಕಗಳಿಂದ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.

ಆರ್ ಟಿಪಿಎಸ್ ನ ೮ ಘಟಕಗಳಿಂದ ಒಟ್ಟು ೧೭೨೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ, ಈಗ ೭ ಘಟಕಗಳಿಂದ ೧೩೨೯ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ, ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲಿ ೨ ಘಟಕಗಳಿಂದ ೧೬೦೦ ಮೆಗಾವ್ಯಾಟ ವಿದ್ಯುತ್ ಉತ್ಪಾದನೆ ಮಾಡುವ ಸಾಮಾರ್ಥ್ಯವಿದ್ದು ಈಗ ಒಂದು ಘಟಕದಿಂದ ೫೨೩ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಈಗ ರಾಜ್ಯದಲ್ಲಿ ಒಟ್ಟು ೯೧೮೨ ಮೆಗಾವ್ಯಾಟ ವಿದ್ಯುತ್ ಬೇಡಿಕೆ ಇದೆ, ಕಳೆದ ಎರಡು ದಿನಗಳ ಹಿಂದೆ ೧೦೧೨೧ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಚಳಿಗಾಲದಲ್ಲಿ ಬೇಡಿಕೆ ಕಡಿಮೆ ಇರುತ್ತದೆ ಎನ್ನಲಾಗಿತ್ತು, ಆದರೆ ಚಳಿಗಾಲದಲ್ಲಿಯೇ ಅಧಿಕ ಬೇಡಿಕೆ ಇದೆ, ಇದಕ್ಕೆ ಕಾರಣ ಐಪಿ ಸೆಟ್ಟುಗಳಿಂದ ನೀರೆತ್ತುತ್ತಿದ್ದು ಇದಕ್ಕಾಗಿ ವಿದ್ಯುತ್ ಬೇಡಿಕೆ ಅಧಿಕವಾಗಿದೆ ಎನ್ನಲಾಗುತ್ತದೆ.

ಕಲ್ಲಿದ್ದಿಲು: ಕಳೆದ ವರ್ಷ ಕಲ್ಲಿದ್ದಿಲು ಕೊರತೆ ಇತ್ತು ಆದರೆ ಈಗ ಆರ್ಟಿಪಿಎಸ್ ಹಾಗು ಬಿಟಿಪಿಎಸ್ ನಲ್ಲಿ ಕಲ್ಲಿದ್ದಿಲು ಕೊರತೆ ಇಲ್ಲ, ಆರ್ಟಿಪಿಎಸ್ ನಲ್ಲಿ ೧೨೧ ಮೆಟ್ರಿಲ್ ಟನ್ ಕಲ್ಲಿದ್ದಿಲು ಸಂಗ್ರಹವಿದೆ, ಈ ಭಾರಿ ಕಲ್ಲಿದ್ದಿಲು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಲ್ಲಿದ್ದಿಲು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ, ಆದರೂ ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಅಧಿಕವಾಗುವ ಲಕ್ಷಣವಿದ್ದು ಕಲ್ಲಿದ್ದಿಲು ಕೊರತೆಯಾಗುವ ಸಂಭವವಿದೆ, ಅದಕ್ಕಾಗಿ ಮುಂಜಾಗ್ರತಾ ವಾಗಿ ಈಗಲೇ ಕಲ್ಲಿದ್ದಿಲು ಸಂಗ್ರಹಿಸಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights