ಚೀನಾಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ: ಮೋದಿ ಸರ್ಕಾರ

ಜೂನ್‌ 15 ರಂದು ಚೀನಾದೊಂದಿಗೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ದಿನೇದಿನೇ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿದ್ದು, ಚೀನಾ ಕಡೆಯಿಂದ ಆಕ್ರಮಣ ಧೋರಣೆ ಹೆಚ್ಚಾದಲ್ಲಿ ‘ಸೂಕ್ತವಾದ ಉತ್ತರ ನೀಡಿ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಿಲಿಟರಿ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಭೆಯಲ್ಲಿ, ಬಂದೂಕುಗಳ ಬಳಕೆಯ ಕುರಿತು ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ ಮತ್ತು ಬದಲಾದ ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಲಾಗಿದೆ.

“ಭಾರತವು ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ. ಆದರೆ ಚೀನಾದಿಂದ ಯಾವುದೇ ರೀತಿಯ ದುರ್ವತೆನೆಗಳು ಎದುರಾದಲ್ಲಿ, ಸೂಕ್ತವಾದ ಪ್ರತ್ಯುತ್ತರವನ್ನು ನೀಡಲು ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ” ಎಂದು  ರಾಜ್‌ನಾಥ್‌ಸಿಂಗ್‌ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Defence Minister Rajnath Singh reviews Ladakh situation with CDS ...

ರಾಜ್‌ನಾಥ್‌ ಸಿಂಗ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್.ಬದೌರಿಯಾ ಅವರೊನ್ನೊಳಗೊಂಡ ಸಭೆಯಲ್ಲಿ ಲಾಡಾಕ್‌ ಸೇರಿದಂತೆ ಚೀನಾದೊಂದಿಗೆ ಸಂಪೂರ್ಣ 3,488 ಕಿ.ಮೀ ಗಡಿ ಪ್ರದೇಶದಲ್ಲಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದ್ದಾರೆ.

“ಎಲ್ಲಾ ಪಡೆಗಳು ಈಗಾಗಲೇ ಸನ್ನದ್ಧತೆಯನ್ನು ಹೆಚ್ಚಿಸಿವೆ.” ಭೂಸೇನಾ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಜಾಕರೂಕರಾಗಿರಲು ಸೂಚಿಸಲಾಗಿದೆ. ಚೀನಾ ಆಕ್ಷೇಪಿಸಿರುವ ಪೂರ್ವ ಲಡಾಖ್‌ನಲ್ಲಿ ಮೂಲಸೌಕರ್ಯಗಳ ನಿರ್ಮಾಣವು ಮುಂದುರೆಯಲಿದೆ ಎಂದು ತಿಳಿಸಲಾಗಿದೆ.

ಚೀನಾವು ಘರ್ಷಣೆಯನ್ನುಮತ್ತಷ್ಟು ಹೆಚ್ಚಿಸುವಂತಹ ಧೋರಣೆಗಳನ್ನು ಪ್ರದರ್ಶಿಸುತ್ತಿದ್ದು, ಭಾರತವು ಚೀನಾದೊಂದಿಗಿನ ಗಡಿ ಭಾಗದ ಎಲ್ಲಾ ವಲಯಗಳಲ್ಲಿ ಮಿಲಿಟರಿ ಬಲವನ್ನು ಹೆಚ್ಚಿಸಿದೆ.

ಜೂನ್‌ 15ರ ಘರ್ಷಣೆಯ ನಂತರ ಸೇನಾ ನಾಯಕರೊಂದಿಗೆ ಬ್ರೀಫಿಂಗ್‌ ನಡೆಸುತ್ತಿರುವ ರಾಜ್‌ನಾಥ್‌ಸಿಂಗ್‌ “ಚೀನಾ ಗಡಿಯಲ್ಲಿ ಯಾವುದೇ ಪರಿಸ್ಥಿತಿ ನಿರ್ಮಾಣವಾಗಬಹುದು. ಅದನ್ನು ಎದುರಿಸಲು ಸಿದ್ದವಾಗಿದೆ. ಪರಿಸ್ಥಿತಿ ಕೇವಲ ಲಡಾಖ್‌ಗೆ ಸೀಮಿತವಾಗಿರದು, ಗಡಿಯುದ್ದಕ್ಕೂ ಜಾಗರೂಕತೆವಹಿಸಿ” ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights