ಕೊರೊನಾ ಎಫೆಕ್ಟ್ : ಸತತ ಎರಡನೇ ದಿನವೂ ಪೆಟ್ರೋಲ್​-ಡೀಸೆಲ್ ದರ ಏರಿಕೆ…!

ಕೊರೊನಾ ಲಾಕ್ ಡೌನ್ ನಿಂದಾಗಿ ಇಳಿಕೆ ಕಂಡಿದ್ದ ಪೆಟ್ರೋಲ್-ಡಿಸೇಲ್ ದರ ಸತತ ಎರಡನೇ ದಿನವೂ ಏರಿಕೆಯಾಗಿದೆ.

ದೇಶದಲ್ಲಿ ಲಾಕ್ ಡೌನ್ 5.0 ಜಾರಿಯಲ್ಲಿದ್ದು ಕೆಲ ಸ್ಥಳಗಳನ್ನು ತೆರೆಯಲು ಷರತ್ತು ಬದ್ಧ ಒಪ್ಪಿಗೆ ನೀಡಲಾಗಿದೆ. ಹೀಗಾಗಿ ಜನರ ಓಡಾಟ ಹೆಚ್ಚಾಗುತ್ತಿದ್ದಂತೆ ಪೆಟ್ರೋಲ್​-ಡೀಸೆಲ್ ದರ ಏರಿಕೆಯಾಗಿದೆ. ಭಾನುವಾರ 60 ಪೈಸೆ ಇದ್ದ ಏರಿಕೆಯಾಗಿದ್ದ ಪೆಟ್ರೋಲ್ ದರ, ಸೋಮವಾರವೂ ಏರಿಕೆಯಾಗಿದೆ. ಜೂನ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಠ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆಗುತ್ತಲೇ ಇದೆ. ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೈಲ ಬೆಲೆ ಪಾತಾಳಕ್ಕೆ ಕುಸಿದಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ವರ್ಗಾಣೆ ಮಾಡುತ್ತಿಲ್ಲ.

ಈ ಮೊದಲು ಮಾರ್ಚ್​ 16ರಂದು ಪೆಟ್ರೋಲ್​ ದರ ಕೊನೆಯದಾಗಿ ಏರಿಕೆ ಕಂಡಿತ್ತು. ಲಾಕ್ ಡೌನ್ ನಿಂದಾಗಿ ಬೆಲೆ ಕುಸಿದಿತ್ತು ಆದರೆ ಲಾಕ್ ಡೌನ್ ಸಡಿಲಗೊಂಡ ನಂತರ ಸತತ ಎರಡು ದಿನವೂ ದರ ಏರಿಕೆ ಕಂಡಿದೆ.ಸೋಮವಾರ ದೇಶಾದ್ಯಂತ ಪೆಟ್ರೋಲ್​-ಡೀಸೆಲ್​ ದರದಲ್ಲಿ 60 ಪೈಸೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ 74.79 ರೂಪಾಯಿ ಇದೆ. ಇನ್ನು ಡೀಸೆಲ್​ ದರ 67.14 ರೂಪಾಯಿ ಇದೆ.

ಪ್ರತಿ ಲೀಟರ್​ ಪೆಟ್ರೋಲ್​ಗೆ ಹೈದರಾಬಾದ್ ದಲ್ಲಿ 75.22, ದೆಹಲಿ 72.46, ಚೆನ್ನೈ 76.60, ಮುಂಬೈ, 79.49, ಮೈಸೂರು 74.43, ನೋಯ್ಡಾ 74.97 ರೂಪಾಯಿ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights