ಜಮ್ಮು-ಕಾಶ್ಮೀರದ ಮೂವರು ಫೋಟೋಗ್ರಾಫರ್ಸ್ ಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ!
ಕಾಶ್ಮೀರದ ಮೂವರು ಅಮೆರಿಕಾದ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಲಿಟ್ಜರ್ ಅಮೆರಿಕಾ ಮೂಲದ ಪತ್ರಕರ್ತರು ಮತ್ರು ಸಂಸ್ಥೆಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಅಸೋಸಿಯೇಟ್ ಪ್ರೆಸ್‌ನ ಫೋಟೋಗ್ರಾಫರ್‌ಗಳಾದ ಚನ್ನಿ ಆನಂದ್, ದರ್ ಯಾಸೀನ್, ಮುಖ್ತಾರ್ ಖಾನ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್‌ಗಳಾಗಿದ್ದಾರೆ.
ಸಂವಿಧಾನದ ವಿಧಿ 371 ರದ್ದತಿ ನಂತರ ಲಾಕ್ ಡೌನ್ , ಪ್ರತಿಭಟನೆ, ಪೊಲೀಸರು ಮತ್ತು ಅರೆ ಸೈನಿಕ ಪಡೆಗಳ ಕಾರ್ಯಾಚರಣೆಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಕುರಿತ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಣೆಯ ಈ ಹಿಂದೆಯೇ ಮೂವರಿಗೂ ಅಭಿನಂದನೆಯ ಸುರಿಮಳೆಯಾಗುತ್ತಿದೆ.ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೋಮವಾರ ಪುಲಿಟ್ಜರ್ ಪ್ರಶಸ್ತಿಗಳನ್ನು ಆನ್‌ಲೈನ್ ಮೂಲಕ ಘೋಷಣೆ ಮಾಡಲಾಯಿತು. ಪ್ರಶಸ್ತಿಯು 15,000 ಡಾಲರ್ (11.36 ಲಕ್ಷ ರೂ.)ನಗದು ಬಹುಮಾನವನ್ನು ಒಳಗೊಂಡಿದೆ.
‘ ಕಾಶ್ಮೀರದಲ್ಲಿ ಪತ್ರಕರ್ತರಿಗೆ ಇದು ಕಷ್ಟದ ವರ್ಷ. 30 ವರ್ಷಗಳಲ್ಲಿ ಇಂಥ ದಿನಗಳನ್ನು ನೋಡಿರಲಿಲ್ಲ. ನಿಮ್ಮ ಕ್ಯಾಮೆರಾಗಳಲಿಗೆ ಇನ್ನಷ್ಟು ಶಕ್ತಿ ಬಂದಿದೆ. ಅಭಿನಂದನೆಗಳು’ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಹಾ ಟ್ವೀಟ್ ಮಾಡಿದ್ದಾರೆ.
It’s been a difficult year for journalists in Kashmir & that’s saying something considering the last 30 years haven’t exactly been easy. Congratulations to @daryasin, @muukhtark_khan & @channiap on this prestigious award. More power to your cameras. https://t.co/A7SH5hUEGZ
— Omar Abdullah (@OmarAbdullah) May 5, 2020
ಪ್ರಶಸ್ತಿ ವಿಜೇತರಾದ ಚನ್ನಿ ಆನಂದ್, ಕಳೆದ 21 ವರ್ಷಗಳಿಂದ ಅವರು ಎಪಿ ಸಂಸ್ಥೆಗೆ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಎಪಿ ಸಂಸ್ಥೆಯ ಸ್ಟ್ರಿಂಜರ್ ಆಗಿದ್ದ ಇವರು ಕಳೆದ ನಾಲ್ಕು ವರ್ಷಗಳಿಂದ ಪೂರ್ಣ ಪ್ರಮಾಣದ ಉದ್ಯೋಗಿಯಾಗಿದ್ದಾರೆ. ‘ಹೀಗೊಂದು ಪ್ರಶಸ್ತಿ ಇದೆ ಎಂದು ತಿಳಿದಿತ್ತು. ಆದರೆ ಆ ಪ್ರಶಸ್ತಿ ನನಗೆ ನೀಡಲಾಗುತ್ತದೆ ಎಂದುಕೊಂಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲು ಆಗಲಿಲ್ಲ.’ ಎಂದು ಚನ್ನಿ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಜೊತೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ನಡುವೆಯೂ ಅಪರಿಚಿತರ ಮನೆಗಳಲ್ಲಿ ಉಳಿದುಕೊಂಡು, ಎಲ್ಲೆಲ್ಲಿಗೋ ತೆರಳಿ, ತರಕಾರಿ ಚೀಲದಲ್ಲಿ ಕ್ಯಾಮೆರಾಗಳನ್ನು ಸಾಗಿಸಿ ಈ ಮೂವರು ಚಿತ್ರಗಳನ್ನು ಸೆರೆ ಹಿಡಿದಿದ್ದರು. ನಂತರ ವಿಮಾನ ನಿಲ್ದಾಣಕ್ಕೆ ಹೋಗಿ ದಿಲ್ಲಿಗೆ ತೆರಳುತ್ತಿದ್ದವರ ಮೂಲಕ ಈ ಚಿತ್ರಗಳನ್ನು ದಿಲ್ಲಿಯ ಎಪಿ ಕಚೇರಿ ತಲುಪಿಸಿದ್ದರು. ‘ಇದು ಯಾವತ್ತೂ ಬೆಕ್ಕು ಮತ್ತು ಇಲಿಯ ಆಟದಂತಿತ್ತು’ ಎಂಬುದಾಗಿ ದರ್ ಯಾಸೀನ್ ವಿವರಿಸಿದ್ದಾರೆ.
ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್‌ಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದಿಸಿದ್ದು, “ನೀವು ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ” ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, “ನಿಮ್ಮ ಕ್ಯಾಮೆರಾಗೆ ಈಗ ಮತ್ತಷ್ಟು ಶಕ್ತಿ ಬಂದಿದೆ,” ಎಂದು ಬಣ್ಣಿಸಿದ್ದಾರೆ. ‘ಇವರ ಕೆಲಸ ಪ್ರಮುಖವಾದುದು ಮತ್ತು ಅಧ್ಭುತ’ ಎಂದು ಎಪಿ ಅಧ್ಯಕ್ಷ ಮತ್ತು ಸಿಇಒ ಗ್ಯಾರಿ ಪ್ರುಯಿಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

