ನಾನು ಸೋತಿದ್ದೇನೆ ಕನಸು ಸೋಲೋಲ್ಲ : ಮತ್ತೆ ಪ್ರತ್ಯೇಕ ಜಿಲ್ಲೆ ಧ್ವನಿ ಎತ್ತಿದ ಹೆಚ್‌.ವಿಶ್ವನಾಥ್‌

ನಾನು ಸೋತಿರಬಹುದು ಆದ್ರೆ ನನ್ನ ಕನಸುಗಳು ಸೋತಿಲ್ಲ ಈ ಮಾತನ್ನ ಹುಣಸೂರು ಉಪಚುನಾವಣೆಯಲ್ಲಿ ಸೋತು ಜನರಿಂದಲೂ ಅನರ್ಹತೆ ಶಿಕ್ಷೆಗೆ ಒಳಗಾಗಿರುವ ಹಳ್ಳಿಹಕ್ಕಿ ಖ್ಯಾತಿಯ ಹೆಚ್‌.ವಿಶ್ವನಾಥ್‌ ಹೇಳುತ್ತಿದ್ದು, ಹುಣಸೂರು ಪ್ರತ್ಯೇಕ ಜಿಲ್ಲೆಯ ನನ್ನ ಕನಸು ಇನ್ನು ಜೀವಂತವಾಗಿದೆ ಎಂದು ಹೇಳಿದ್ದಾರೆ. ಹುಣಸೂರು ಉಪಚುನಾವಣೆಯಲ್ಲಿ ಸೋತ ನಂತರ ಆತ್ಮವಲೋಕನ ಸಭೆ ಹಾಗೂ ಮತದಾರರಿಗೆ ಕೃತಜ್ಞತಾ ಸಭೆ ನಡೆಸಿರುವ ಅಡಗೂರು ಹೆಚ್.ವಿಶ್ವನಾಥ್‌ ಹುಣಸೂರನ್ನ ಪ್ರತ್ಯೇಕ ಜಿಲ್ಲೆ ಮಾಡುವ ನನ್ನ ಕನಸು ಇನ್ನು ಜೀವಂತವಾಗಿದೆ ಎಂದು ಹೇಳಿದ್ದಾರೆ.

ಹುಣಸೂರು ಉಪಚುನಾವಣೆ ಸಂದರ್ಭದಲ್ಲಿ ಟ್ರಂಪ್ ಕಾರ್ಡ್‌ ಆಗಿ ಪ್ರತ್ಯೇಕ ಜಿಲ್ಲೆ ವಿಚಾರ ಕೈಗೆತ್ತಿಕೊಂಡಿದ್ದ ಅನರ್ಹ ಶಾಸಕರಾಗಿದ್ದ ಹೆಚ್‌.ವಿಶ್ವನಾಥ್‌. ಹುಣಸೂರು ತಾಲ್ಲೂಕು ಸೇರಿದಂತೆ 6 ತಾಲ್ಲೂಕುಗಳನ್ನೊಳಗೊಂಡ ಡಿ.ದೇವರಾಜ ಅರಸು ಹೆಸರಿನಲ್ಲಿ ಹೊಸ ಜಿಲ್ಲೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ ಇದನ್ನ ತಮ್ಮ ಪ್ರಚಾರ ಸಭೆಗಳಲ್ಲಿ ಮಂಡಿಸುತ್ತಾ, ಹುಣಸೂರು ಜಿಲ್ಲೆಯಾದರೆ ತಾಲ್ಲೂಕಿನ ಜನರು ಆರ್ಥಿಕವಾಗಿ ಸದೃಢವಾಗ್ತಾರೆ, ಹುಣಸೂರಿಗೆ ಪ್ರತ್ಯೇಕ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸೇರಿದಂತೆ ಜಿಲ್ಲಾಮಟ್ಟದ ಕಚೇರಿಗಳು ಹುಣಸೂರಿಗೆ ಬರಲಿದೆ.

ತಂಬಾಕು ಬೆಳೆಗೆ ಚಿನ್ನದ ರೇಟು ಸಿಗಲಿದೆ ಅಂತ ಹುಣಸೂರಿನ ಜನರಿಗೆ ಕರಪತ್ರ ಮಾಡಿ ಹಂಚಿದ್ದರು. ಆದರೂ ಹುಣಸೂರಿನ ಜನರು ಹೆಚ್‌.ವಿಶ್ವನಾಥ್ ಕೈ ಹಿಡಿಯದೆ ಮಾಜಿ ಶಾಸ ಹೆಚ್‌.ಪಿ.ಮಂಜುನಾಥ್‌ರನ್ನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಸುಪ್ರೀಕೋರ್ಟ್‌ನಲ್ಲಿ ಅನರ್ಹತೆ ಶಿಕ್ಷೆಗೆ ಒಳಗಾಗಿ ಜನತಾ ನ್ಯಾಯಾಲಯದಲ್ಲು ತಿರಸ್ಕಾರಕ್ಕೆ ಒಳಗಾಗಿರುವ ವಿಶ್ವನಾಥ್‌ ಸೋತರು ತನ್ನ ನಿಲುವಿನಿಂದ ಹೊರಬಂದಿಲ್ಲ. ತಾನು ಕಟ್ಟಿಕೊಂಡಿದ್ದ ಹುಣಸೂರು ಪ್ರತ್ಯೇಕ ಜಿಲ್ಲೆಯ ಕನಸು ಇನ್ನು ಸತ್ತಿಲ್ಲ ಎಂದಿರುವ ವಿಶ್ವನಾಥ್ ಮುಂದೆ ಹುಣಸೂರನ್ನ ಪ್ರತ್ಯೇಕ ಜಿಲ್ಲೆ ಮಾಡೇ ಮಾಡ್ತೇನೆ ಎಂದು ಹೇಳಿದ್ದಾರೆ.

ಎಂಎಲ್‌ಸಿ ಆಗ್ತಿನಿ ಮೈಸೂರಿಗೆ ಉಸ್ತುವಾರಿ ಆಗಿ ಬರ್ತಿನಿ -ಹೆಚ್‌.ವಿಶ್ವನಾಥ್‌

ಹೆಚ್‌.ವಿಶ್ವನಾಥ್‌ ತನ್ನ ಹುಣಸೂರು ಪ್ರತ್ಯೇಕ ಜಿಲ್ಲೆ ಕನಸು ನನಸು ಮಾಡೋದಕ್ಕೆ ಎಂಎಲ್‌ಸಿ ದಾಳ ಉರುಳಿಸಿದ್ದಾರೆ. ಕೃತಜ್ಞತಾ ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುತ್ತ ಹೇಳಿರುವ ಹೆಚ್‌.ವಿಶ್ವನಾಥ್‌. ನಾನು ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಬರ್ತಿನಿ ಆದ್ರೆ ಸ್ವಲ್ಪ ಸಮಯ ಹಿಡಿಯಲಿದೆ ಎಂದು ನಗುತ್ತಲೆ ಮಂತ್ರಿಗಿರಿಯ ಆಸೆ ಬಿಚ್ಚಿಟ್ಟಿದ್ದಾರೆ. ಸದ್ಯ ಉಪಚುನಾವಣೆ ಎದುರಿಸಿದ ಅನರ್ಹರಲ್ಲಿ ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಬಿಟ್ಟರೆ ಇನ್ನೆಲ್ಲರು ಗೆಲುವು ಸಾಧಿಸಿದ್ದಾರೆ.

ಆದ್ರೆ ಅನರ್ಹರ ಟೀಂ ಲಿಡ್‌ ಮಾಡಿದ್ದು ಇದೆ ವಿಶ್ವನಾಥ್‌ ಅನ್ನೋದು ಎಲ್ಲರಿಗು ತಿಳಿದಿರುವ ವಿಷಯ. ಜೊತೆಗೆ ಎಂಟಿಬಿ ನಾಗರಾಜ್‌ ಆರ್ಥಿಕವಾಗಿ ಅತ್ಯಂತ ಪವರ್‌ಪುಲ್ ಅನ್ನೋದು ಹಾಗೂ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಸ್ಥಾನ ಬಿಟ್ಟು ಬಂದಿರೋದು ಸಹ ಇಲ್ಲಿ ಗಣೆನೆಗೆ ಬರುವ ವಿಚಾರ. ಈ ಎಲ್ಲ ಕಾರಣದಿಂದ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ಹೆಚ್‌.ವಿಶ್ವನಾಥ್‌ರನ್ನ ಎಂಎಲ್‌ಸಿ ಮಾಡಿ ಮಂತ್ರಿ ಮಾಡುವ ಬಗ್ಗೆ ಮಾತಕತೆ ನಡೆದಿದೆ ಎನ್ನಲಾಗಿದೆ. ಆ ಮಾತುಕತೆ ಯಶಸ್ವಿಯಾದರೆ ಇನ್ನು ಮೂರು ಅಥವ ನಾಲ್ಕು ತಿಂಗಳಲ್ಲಿ ಸೋತಿರುವ ಮಾಜಿ ಶಾಸಕ ಹೆಚ್‌.ವಿಶ್ವನಾಥ್‌ ಮಂತ್ರಿಯಾಗುವ ಸಾಧ್ಯತೆಗಳನ್ನ ತಳ್ಳಿಹಾಕುವಂತಿಲ್ಲ.

ಇದೆ ವಿಚಾರವನ್ನ ತನ್ನ ಕಾರ್ಯಕರ್ತರಿಗು ಹೇಳುತ್ತಿರುವ ಹಳ್ಳಿಹಳ್ಳಿ ವಿಶ್ವನಾಥ್‌. ಮುಂದೆ ನಾನು ಮಂತ್ರಿ ಆಗ್ತಿನಿ ಹೇಳಿದಂತೆ ಹುಣಸೂರನ್ನ ಪ್ರತ್ಯೇಕ ಜಿಲ್ಲೆ ಮಾಡೇ ಮಾಡ್ತಿನಿ ಎನ್ನುತ್ತಿದ್ದಾರಂತೆ. ಹಳ್ಳಿಹಕ್ಕಿ ವಿಶ್ವನಾಥ್ ಒಬ್ಬ ಕನಸುಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ ಹಿಂದೆ ಸಚಿವರಾಗಿದ್ದಾಗ ಒಳ್ಳೆಯ ಯೋಜನೆಗಳನ್ನು ನೀಡಿ ಖ್ಯಾತಿಗಳಿರುವ ವಿಶ್ವನಾಥ್ ಈಗ ಹುಣಸೂರು ಜಿಲ್ಲೆ ಮಾಡುವ ಕನಸನ್ನ ಈಡೇರಿಸಿಕೊಳ್ಳುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ವಿಶ್ವನಾಥ್ ಅವರ ರಾಜಕೀಯ ಗುರುಗಳಾದ ಡಿ.ದೇವರಾಜ ಅರಸು ಹೆಸರಿನ ಜಿಲ್ಲೆ ಹುಟ್ಟುತ್ತಾ ಅಥವ ಹಳ್ಳಿಹಕ್ಕಿಯ ಕನಸು ಹಾಗೇಯೆ ಉಳಿಯುತ್ತಾ ಅನ್ನೋದೆ ಸದ್ಯಕ್ಕಿರುವ ಕುತೂಹಲವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights