ಕ್ಯಾನ್ಸರ್ ನಿಂದಾಗಿ ಮಲಯಾಳಂ ನಟಿ ಶರಣ್ಯ ಶಶಿ ನಿಧನ..!

ಕ್ಯಾನ್ಸರ್ ನಿಂದ ಮಲಯಾಳಂ ನಟಿ ಶರಣ್ಯ ಶಶಿ ನಿಧನರಾಗಿದ್ದಾರೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದ ಮಲಯಾಳಂ ನಟಿ ಶರಣ್ಯ 35 ನೇ ವಯಸ್ಸಿನಲ್ಲಿ ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಶರಣ್ಯ ಶಶಿಗೆ ಹಲವು ವರ್ಷಗಳ ಹಿಂದೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು ಮತ್ತು ಚಿಕಿತ್ಸೆಯ ಭಾಗವಾಗಿ ಆಕೆ ಹಲವಾರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷ ಮೇ ತಿಂಗಳಲ್ಲಿ ನಟಿ ಕೋವಿಡ್ -19 ಗೆ ತುತ್ತಾಗಿದ್ದರು. ಜೊತೆಗೆ ಮೆದುಳಿನ ಗೆಡ್ಡೆಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಕೆಲ ದಿನಗಳ ಬಳಿಕ ಕೊರೋನವೈರಸ್‌ನಿಂದ ಚೇತರಿಸಿಕೊಂಡಿದ್ದರಾದರೂ ಕೋವಿಡ್ ಸಂಬಂಧಿತ ತೊಡಕುಗಳಿಂದಾಗಿ ಆಕೆಯ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತು.

ಮತ್ತೆ ನ್ಯುಮೋನಿಯಾ ಕಾಣಿಸಿಕೊಂಡು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಮಯದಲ್ಲು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಶರಣ್ಯಾ ತನ್ನ ಸ್ನೇಹಿತರ ಸಹಾಯವನ್ನು ಕೇಳಿದ್ದಳಂತೆ. ಆಕೆಯ ಸಹನಟರು, ಸ್ನೇಹಿತರು ಮತ್ತು ಹಿತೈಷಿಗಳು ಆಕೆಯ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಿದ್ದರು. ಆದರೆ ವಿಧಿ ಆಕೆಯ ಕೈ ಬಿಡದೆ ಕರೆದುಕೊಂಡುಬಿಡ್ತು.

ಕಣ್ಣೂರು ಜಿಲ್ಲೆಯ ಹಳೆಯಂಗಡಿ ಎಂಬ ಸಣ್ಣ ಪಟ್ಟಣದಿಂದ ಬಂದಿರುವ ಶರಣ್ಯ ಶಶಿ, ಮಲಯಾಳಂನ ಕರುತಮುತ್ತು ಮತ್ತು ಹರಿಚಂದನಂ ನಂತಹ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರು ರಿಣಿ ರಾಜ್, ದರ್ಶನ್ ದಾಸ್, ಪ್ರೇಮಿ ವಿಶ್ವನಾಥ್, ಕಿಶೋರ್ ಸತ್ಯ ಮತ್ತು ಶ್ರೀಲತಾ ನಂಬೂತಿರಿ ಇತರರೊಂದಿಗೆ ಕರುತಮುತ್ತಿನಲ್ಲಿ ನಟಿಸಿದ್ದಾರೆ.

2007 ರಲ್ಲಿ ಚೋಟಾ ಮುಂಬೈ ಚಿತ್ರದಲ್ಲಿ ಮೋಹನ್ ಲಾಲ್, ಕಲಾಭವನ್ ಮಣಿ, ಭಾವನಾ, ಜಗತಿ ಶ್ರೀಕುಮಾರ್, ಸಾಯಿಕುಮಾರ್ ಮತ್ತು ಮಣಿಕುಟ್ಟನ್ ಜೊತೆ ನಟಿಸಿದ್ದಾರೆ. ಪೃಥ್ವಿರಾಜ್ ಅವರ 2008 ರ ಚಲನಚಿತ್ರ ತಾಳಪ್ಪವು ಮತ್ತು ಕಲಾಭವನ್ ಮಣಿಯ 2006 ರ ಚಲನಚಿತ್ರ ಚಾಕೋ ರಂದಮಾನ್ ಸೇರಿದಂತೆ ಇತರ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights