ಬುದ್ಧನ ಸಂದೇಶಗಳನ್ನು ಪಾಲಿಸಿ : ದೇಶವನ್ನುದ್ದೇಶಿಸಿ ಮೋದಿ ಮಾತು…!

ಇಂದು ದೇಶ ಕಷ್ಟದಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. 24 ಗಂಟೆ ಶ್ರಮಿಸುತ್ತಿರುವ ವಾರಿಯರ್ಸಗೆ ಗೌರವ ಕೊಡಿ ಎಂದು ಬೌದ್ಧ ಪೂರ್ಣಿಮೆಯ ಶುಭಕೋರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಹೌದು…  ಇಂದು ಬೌದ್ಧ ಪೂರ್ಣಿಮೆ ಈ ಹಿನ್ನಲೆಯಲ್ಲಿ ಆಯೋಜಿಸಿರುವ ವೇಸಾಕ್​ ಗ್ಲೋಬಲ್​ ಸೆಲಬ್ರೇಷನ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾದರು.   ಈ ವೇಳೆ ಮಾತನಾಡಿದ  ಮೋದಿ , ಸದಾ ಮಾನವೀಯತೆ ಮೆರೆಯುವವರು ಬುದ್ಧನ ನಿಜವಾದ ಶಿಷ್ಯರು ಎಂದು ಹೊಗಳಿದರು.

ಇಡೀ ವಿಶ್ವದಲ್ಲಿ ಹತಾಶೆ, ದುಃಖ, ಸೋಲು ಕಾಣುತ್ತಿದೆ. ಇವೆಲ್ಲವೂಗಳಿಂದ ಹೊರ ಬಂದ್ರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಾವು ಸಹ ಬದಲಾದ ಜೀವನಕ್ಕೆ ಹೊಂದಿಕೊಳ್ಳಬೇಕು. ಬುದ್ಧ ಹೇಳಿದಂತೆ ದಯೆ, ಕರುಣೆ, ಸುಖದುಃಖ, ಮೂಲ ರೂಪದಲ್ಲಿರೋದನ್ನು ಸ್ವೀಕರಿಸೋದನ್ನು ನಾವು ಕಲಿಯೋಣ.ಬುದ್ಧನ ಸಂದೇಶಗಳು ಇಂದಿಗೂ ನಮ್ಮ ಜೊತೆಯಲ್ಲಿವೆ.

ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡುವ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶನ ನೀಡಿದೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದರು. ಬುದ್ಧನು ತನ್ನದೇ ಆದ ಬೆಳಕಾಗಿ ಮಾರ್ಪಟ್ಟು ತನ್ನ ಜೀವನ ಪಯಣದಲ್ಲಿ ಇತರರ ಜೀವನವನ್ನು ಬೆಳಗಿದವನು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಈಗಾಗಲೇ ಹಲವು ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿದೆ. ಅಮೆರಿಕ ಸೇರಿ ಅನೇಕ ರಾಷ್ಟ್ರಗಳಿಗೆ ಔಷಧ ರಫ್ತು ಮಾಡಿದೆ. ಈ ವಿಚಾರ ಉಲ್ಲೇಖಿಸಿ ಮಾತನಾಡಿದ ಮೋದಿ, “ನಮ್ಮ ಸಹಾಯ ಕೇಳಿ ಬಂದ ಎಲ್ಲರಿಗೂ ನಾವು ಸಹಾಯ ಮಾಡಿದ್ದೇವೆ. ಇದು ಹೀಗೆಯೇ ಮುಂದುವರಿಯಲಿದೆ. ಕೊರೋನಾ ಭೀತಿ ನಡುವೆಯೂ ಬುದ್ಧನ ತತ್ವವನ್ನು ಅಳವಡಿಸಿಕೊಂಡು ನಾವು ವಿಶ್ವದ ಅಭಿವೃದ್ಧಿಗೆ ನಾವು ನೀಡುತ್ತಿರುವ ಬೆಂಬಲವನ್ನು ಮುಂದುವರಿಸುತ್ತೇವೆ,” ಎಂದು ಮೋದಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights