ಬೈಕಿಗೆ ಅಡ್ಡ ಬಂದ ಕಾಡು ಕೋಣ – ನಂತರ ಕಂಡಿದ್ದು ಭೀಕರ ದೃಶ್ಯ…!
ಕಾಡು ಕೋಣವೊಂದು ಏಕಾಏಕಿ ರೋಡಿಗೆ ಓಡಿ ಬಂದ ಪರಿಣಾಮ ಕೋಣಕ್ಕೆ ಗುದ್ದಿದ ಸವಾರರಿಬ್ಬರ ಸ್ಥಿತಿ ಗಂಭೀರವಾದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ನೇರಂಕಿ ಗ್ರಾಮದ ಬಳಿ ನಡೆದಿದೆ.
ಕಾಡು ಕೋಣವೊಂದು ರಸ್ತೆಯ ಮೇಲೆ ಓಡಿ ಬಂದ ಕಾರಣ ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರವಾಹನ ಸವಾರರು ಕೋಣಕ್ಕೆ ಗುದ್ದಿ ಸ್ಥಳದಲ್ಲೇ ನರಳಾಡಿದ್ದಾರೆ. ಇವರನ್ನ ಕಂಡ ಸಾರ್ವಜನಿಕರು ಆಸ್ಪತ್ರೆಗೆ ರವಾನಿಸಿದ್ದಾರೆ.
ಬೂದಿಗುಂಡಿ ಗ್ರಾಮದ ಸಂದೀಪ್, ಮಂಗಳ ಗಾಯಾಳುಗಳು. ಗಾಯಾಳುಗಳಿಗೆ ಕಳಸ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಬಾಳೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.