ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆಗೆ ಡಿಜಿಟಲ್ ಪ್ರದರ್ಶನ…

ಭಾರತ ಸರ್ಕಾರದ ಲೋಕಸಂಪರ್ಕ ಮತ್ತು ಸಂವಹನ ಕಾರ್ಯಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಹಂಪಿ ಉತ್ಸವದ ಅಂಗವಾಗಿ‌ ಹಂಪಿಯ ಗಜಶಾಲೆ ಆವರಣದ ಬಳಿ‌ ಸ್ವಚ್ಛ ಭಾರತ, ಸಶಕ್ತ ಭಾರತ, ಬಾಪುವಿನ ಕನಸಿನ ಭಾರತ ಎಂದು‌ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ ಸಾಧನೆ ಕುರಿತ ಡಿಜಿಟಲ್ ಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.

ಇಂದಿನಿಂದ ಜನವರಿ 14 ರವರೆಗೆ ಇದನ್ನು‌ ಆಯೋಜಿಸಿದ್ದು ಇಂದು ಬೆಳಿಗ್ಗೆ  ವಾರ್ತಾ ಮತ್ತು ಪ್ರಸಾರ ಸಚಿವಲಾಯದ ಹೆಚ್ವುವರಿ‌ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ‌ಮಾತನಾಡಿದ ಅವರು ಹಂಪಿ ಉತ್ಸವದ ವೇಳೆ ಬರುವ ಲಕ್ಷಾಂತರ ಪ್ರವಾಸಿಗರಿಗೆ ಮಹಾತ್ಮ ಗಾಂಧೀಜಿ ಅವರ ಜೀವನ‌ ಮತ್ತು ಹೋರಾಟ ಹಾಗೂ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಜನತೆಗೆ ತಿಳಿಸುವ ಉದ್ದೇಶವಾಗಿದೆಂದರು.

ಲೋಕಜನ ಸಂಪರ್ಕ  ಮತ್ತು ಸಂವಹನ ಕಾರ್ಯಾಲಯದ ಮಹಾ ನಿರ್ದೇಶಕ ಸತ್ಯೇಂದ್ರ ಪ್ರಕಾಶ್  ಅವರು ಮಾತನಾಡಿ, ಗಾಂಧೀಜಿ ಅವರ ತತ್ವಾದರ್ಶಗಳನ್ನು‌ ಪಾಲಿಸಲು ಅವರ ಜೀವನಗಾಥೆಯನ್ನು ಈ‌ ಪ್ರದರ್ಶನದ ಮೂಲಕ ಶಾಲಾ ಮಕ್ಕಳು, ಪ್ರವಾಸಿಗರಿಗೆ ಪರಿಚಯಿಸುತ್ತಿದೆ. ಇದನ್ನು ವೀಕ್ಷಿಸಿ ಜನತೆ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಲು‌ ಮುಂದಾಗಬೇಕೆಂದರು.

ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯದ ‌ಕರ್ನಾಟಕ ಹೆಚ್ವುವರಿ ಮಹಾನಿರ್ದೇಶಕ‌ರಾದ ನಾಗೇಂದ್ರಸ್ವಾಮಿ, ನಿರ್ದೇಶಕರಾದ ನತಾಷಾ ಎಸ್, ಡಿಸೋಜ, ಉಪ ನಿರ್ದೇಶಕರಾದ
ಡಾ. ಜಿ.ಡಿ.ಹಳ್ಳಿಕೇರಿ ಮೊದಲಾದವರು ಇದ್ದರು.ಪ್ರದರ್ಶನ ವೀಕ್ಷಿಸಿದ ಕಮಲಾಪುರದ ವಿದ್ಯಾರ್ಥಿನಿ ಅರ್ಚನಾ ಈ ಡಿಜಿಟಲ್ ಪ್ರದರ್ಶನದ ಮೂಲಕ ಗುಜರಾತ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಆ ಸ್ಥಳದಲ್ಲೇ ನಿಂತು‌ ನೋಡಿದ ಅನುಭವ ಆಯ್ತು ಎಂದರು ಪ್ರವಾಸಿ‌ ಮಹಿಳೆ ಸರಿತಾ ಅವರು‌ ಮಾತನಾಡಿ ಕೇಂದ್ರ ಸರಕಾರ ಈ ಉತ್ಸವದ ಸಂದರ್ಭದಲ್ಲಿ ಇಂತಹ ಪ್ರದರ್ಶನದ ಮೂಲಕ‌ ನಮಗೆಲ್ಲ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಮತ್ತಿತರ ವಿಷಯಗಳನ್ನು ಡಿಜಿಟಲ್ ಚಿತ್ರಣದ ಮೂಲಕ ತಿಳಿಸುತ್ತಿರುವುದು ಬಹು ಉಪಕಾರಿಯಾಗಿದೆ.

ಕೇವಲ ಕಾಗದದಲ್ಲಿ ನೋಡುತ್ತಿದ್ದ, ಓದುತ್ತಿದ್ದ ನಮಗೆ ಡಿಜಿಟಲ್ ತಂತ್ರಜ್ಣಾನದಲ್ಲಿ ತಿಳಿಸಿದ್ದು ಹೆಚ್ಚು ಮನವರಿಕೆ ಆಯ್ತು ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights