ಮೊದಲ ಬಾರಿಗೆ ಭಾರತದಲ್ಲಿ ಕೊರೋನ ವಿರುದ್ಧ ಎಚ್ ಐ ವಿ ರೋಗನಿರೋಧಕ ಔಷದಿ ಪ್ರಯೋಗ

ಭಾರತಕ್ಕೆ ಪ್ರವಾಸ ಬಂದಿದ್ದ ಇಟಲಿಯ ದಂಪತಿಗಳು ಕರೋನ ವೈರಸ್ ನಿಂದ ಬಳಲುತ್ತಿದ್ದು, ಅವರ ಸುಶ್ರೂಷೆಗೆ ಎಚ್ ಐ ವಿ ರೋಗನಿರೋಧಕ ಔಷದಿ ಬಳಸಲಾಗಿದೆ. ಜೈಪುರದ ಆಸ್ಪತ್ರೆಯಲ್ಲಿ ದಾಖಲಾಗಿರುವ ಈ ಇಬ್ಬರು ರೋಗಿಗಳಿಗೆ ಎಚ್ ಐ ವಿ ಎರಡನೇ ಸಾಲಿನ ಔಷಧಿ ಎನ್ನಲಾಗುವ ಲೋಪಿನಾವಿರ್/ರಿಟೋನಾವಿರ್ ಬಳಸಲಾಗಿದೆ. ರೋಗಿಗಳ, ಅಧಿಕಾರಿಗಳ ಪೂರ್ವ ಸಮ್ಮತಿಯನ್ನು ಪಡೆದಿರುವುದಾಗಿ ವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸದ್ಯಕ್ಕೆ ಕೊರೊನಾ ಸೋಂಕಿಗೆ ಬೇರೆ ಯಾವ ಮದ್ದು ಇಲ್ಲ.

ಕೋವಿದ್ ರೋಗಿಗಳ ಮೇಲೆ ತುರ್ತು ಸಮಯದಲ್ಲಿ ಎರಡನೆ ಸಾಲಿನ ಎಚ್ ಐ ವಿ ರೋಗನಿರೋಧಕ ಮದ್ದುಗಳಾದ ಲೋಪಿನಾವಿರ್/ರಿಟೋನಾವಿರ್ ಪ್ರಯೋಗಿಸಲು  ಭಾರತೀಯ ವೈದ್ಯಕೀಯ ಸಂಶೋಧನ ಸಮಿತಿ ( ಐ ಸಿ ಎಂ ಆರ್) ಪರವಾನಗಿ ಪಡೆದಿರುವುದಾಗಿ ವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಔಷಧಿಯನ್ನು ಚೈನಾದಲ್ಲಿ ಈಗಾಗಲೇ ಬಲಸಲಾಗಿದೆ. ಆದರೂ ರೋಗಿಗಳ ಅನುಮತಿಯನ್ನು ಪಡೆಯಲಾಗಿದೆ. ಇದರಿಂದ ಅನ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕೂಡ ಇದೆ ಮತ್ತು ಇದರ ಉಪಯುಕ್ತತೆ ಬಗ್ಗೆ ತಿಳಿಯಲು ಇನ್ನು ಹೆಚ್ಚಿನ ಸಮಯ ಅವಶ್ಯಕ ಎಂದಿದ್ದಾರೆ.

ಇಟಲಿಯ 69 ವರ್ಷದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಅವರಲ್ಲಿ ಕಾಣಿಸಿಕೊಂಡಿದ್ದ ನ್ಯುಮೋನಿಯಾ ಇಳಿಮುಖವಾಗುತ್ತಿದೆ. ಸಂಪೂರ್ಣ ಚೇತರಿಸೊಂಡ ನಂತರ ಇನ್ನು ಮುಂದಿನ 10 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights