ಕಲಬುರಗಿಯಲ್ಲಿ ಭಾರೀ ಮಳೆ : ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸಾವು…!

ಕಲಬುರಗಿಯಲ್ಲಿ ಭಾರೀ ಮಳೆಯಿಂದಾಗಿ ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಹಲವೆಡೆ ರಾತ್ರಿ ಭಾರೀ ಮಳೆಯಾಗಿದ್ದು ಭಾರೀ ಮಳೆಗೆ ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಬಾಲಕಿ ನೀಲಮ್ಮ ತಳವಾರ ಎಂದಿನಂತೆ ಮನೆಯಲ್ಲಿ ತಮ್ಮ ಪೋಷಕರ ಜೊತೆ ಮಲಗಿದ್ದಳು. ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಭಾರೀ ಮಳೆ ಮತ್ತು ಗಾಳಿ ಹಿನ್ನೆಲೆ ಮನೆ ಗೋಡೆ ಬಾಲಕಿ ಮೇಲೆ ಕುಸಿದಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಅದೃಷ್ಠವಶಾತ್ ಬಾಲಕಿಯ ಪೋಷಕರು ಪಾರಾಗಿದ್ದಾರೆ. ಈ ಕುರಿತು ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights