ದೇಶದಲ್ಲಿ ಒಂದೇ ದಿನ 1.34 ಲಕ್ಷ ಹೊಸ ಕೊರೊನಾ ಕೇಸ್ : 2,887 ಜನ ಬಲಿ!

ದೇಶದಲ್ಲಿ ಒಂದೇ ದಿನ 1.34 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 2,887 ಜನ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 24 ಗಂಟೆಗಳಲ್ಲಿ 1,34,154 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 2,887 ಸಾವುಗಳು ದಾಖಲಾಗಿವೆ. ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸುವ ರಾಜ್ಯಗಳಾಗಿ ತಮಿಳುನಾಡು ಮತ್ತು ಕೇರಳ ಮುಂದುವರೆದಿದೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ ತಮಿಳುನಾಡು 25,317 ಪ್ರಕರಣಗಳು, ಕೇರಳದಲ್ಲಿ 19,661 ಪ್ರಕರಣಗಳು, ಕರ್ನಾಟಕದಲ್ಲಿ 16,387 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 15,169 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 12,768 ಪ್ರಕರಣಗಳು ದಾಖಲಾಗಿವೆ.

ಭಾರತದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 2,84,41,986 ರಷ್ಟಿದೆ. ಒಟ್ಟು ಕೋವಿಡ್ -19 ಸಾವಿನ ಸಂಖ್ಯೆ ಈಗ 3,37,989 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಭಾರತವು ದೇಶಾದ್ಯಂತ 2,887 ಸಾವುಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ ಬುಧವಾರ 553 ಮಂದಿ ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ 483 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 2,11,499 ರೋಗಿಗಳು ಚೇತರಿಸಿಕೊಂಡಿದ್ದಾರೆ, ದೇಶಾದ್ಯಂತ ಒಟ್ಟು ಚೇತರಿಕೆಗಳ ದರ 2,63,90,584 ಕ್ಕೆ ತಲುಪಿದೆ.  ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 17,13,413 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 80,232 ರಷ್ಟು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತ ಒಟ್ಟು 24,26,265 ಲಸಿಕೆ ಪ್ರಮಾಣವನ್ನು ನೀಡಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 21,59,873 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights