ಸೆ.25ರ ಕರ್ನಾಟಕ ಬಂದ್ಗೆ ಕರವೇ ಬೆಂಬಲ
ರೈತ, ದಲಿತ, ಕಾರ್ಮಿಕ, ಜನ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಮಸೂದೆಗಳನ್ನು ವಿರೊಧಿಸಿ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಸೆ.25ರಂದು ಅಖಿಲ ಭಾರತ ಬಂದ್ಗೆ ಕರೆ ಕೊಟ್ಟಿವೆ. ಕರ್ನಾಟಕದಲ್ಲಿಯೂ ರೈತ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಶುಕ್ರವಾರದ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕ (ಕರವೇ) ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ.
ರಾಜ್ಯ ಸರ್ಕಾ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿಕ್ಷೇತ್ರಕ್ಕೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಕೃಷಿ ಪ್ರಧಾನ ದೇಶದವಾಗಿರುವ ಭಾರತದಲ್ಲಿ ಲಕ್ಷಾಂತರ ರೈತರು ಕೃಷಿಯನ್ನೇ ಅವಲಂಬಿಸಿ ಬುದುಕುತ್ತಿದ್ದಾರೆ. ಅವರಿಗೆ ಭೂಮಿಯೇ ಸರ್ವಸ್ವವಾಗಿದ್ದು, ಆ ಭೂಮಿಯನ್ನೇ ಸರ್ಕಾರ ಕಸಿದುಕೊಂಡು ಕಾರ್ಪೋರೇಟ್ ಕೂಳರಿಗೆ ಕೊಟ್ಟು, ರೈತರನ್ನು ಕೂಲಿಗಳನ್ನಾಗಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ಗೆ ಬೆಂಬಲ ನೀಡುತ್ತೇವೆ ಎಂದು ಕರವೇ ರಾಜ್ಯಾದ್ಯಕ್ಷ ಟಿ.ಎ.ನಾರಾಯಣ ಹೇಳಿದ್ದಾರೆ.
ದೇವರಾಜ್ ಅರಸು ಅವರು ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶ ನೀತಿಯನ್ನು ಈಗಿನ ಸರ್ಕಾರ ತಿರುಚಿ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ನೀತಿಯನ್ನು ತಂದು ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯಕ್ಕೆ ಸರ್ಕಾರ ಇಳಿದಿದೆ ಎಂದು ಟಿ.ಎ.ನಾರಾಯಣ ಆರೋಪಿಸಿದ್ದಾರೆ.
ಹೊಸ ಮಸೂದೆಯು ಅಂತಾರಾಜ್ಯ ಮಾರುಕಟ್ಟೆಗಳನ್ನು ಸೃಷ್ಟಿಸಲಿದ್ದು, ಕಾರ್ಪೋರೇಟ್ಗ ಶಕ್ತಿಗಳು ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿ, ಖಾಸಗೀ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಂಡು ಸುಲಿಗೆ ಮಾಡಲು ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿದೆ. ರೈತರ ಉತ್ಪನ್ನ ಧಾರಣೆ ಕುಸಿದಾಗ ಸರ್ಕಾರ ನೀಡುತ್ತಿದ್ದ ಬೆಂಬಲ ಬೆಲೆಯನ್ನೂ ಕಡಿತಗೊಳಿಸಲು ಈ ಮಸೂದೆ ದಾರಿ ಮಾಡಿಕೊಡುತ್ತದೆ. ಇದು ರೈತರಿಗೆ ಮಾರಕವಾಗಿದೆ ಎಂದು ಕರವೇ ಆರೋಪಿಸಿದೆ.
ರೈತರು, ಜನರು, ಸಂಘಟನೆಗಳ ಮಾತನ್ನು ಲೆಕ್ಕಿಸದೇ ರೈತ, ದಲಿತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಅಂಗೀಕರಿಸು ಮುಂದಾಗಿರುವ ಸರ್ಕಾರ ವಿರುದ್ಧ ರಾಷ್ಟ್ರವ್ಯಾಪಿ ಭಾರತ ಬಂದ್ಗೆ ಕರೆ ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯು ನೀಡಿದ್ದು, ಕರ್ನಾಟಕದ ಎಲ್ಲಾ ಪ್ರಮುಖ ರೈತ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಬಂದ್ಗೆ ಕರವೇ ಸಂಪೂರ್ಣ ಬೆಂಬಲಿ ನೀಡಿ ಹೋರಾಟದಲ್ಲಿ ಭಾಗಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೆ. 25ಕ್ಕೆ ಕರ್ನಾಟಕವೂ ಬಂದ್ – ಹೋರಾಟ ನಿರತ ಸಂಘಟನೆಗಳಿಂದ ಕರೆ