Cricket: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ತನಿಖೆ!

Cricket ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ತನಿಖೆಯೊಂದು ಶುರುವಾಗಲಿದೆ. ರನ್ ಮಷಿನ್ ವಿರುದ್ಧ ಸ್ವ-ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ನಡೆಸುತ್ತೇವೆ ಎಂದು ಬಿಸಿಸಿಐ ಹೇಳಿದೆ.

ವಿರಾಟ್ ಕೊಹ್ಲಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷದ ದೂರು ದಾಖಲಾಗಿದೆ. ಮಧ್ಯ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸದಸ್ಯ ಸಂಜೀವ್​ ಗುಪ್ತಾ, ಬಿಸಿಸಿಐ ಎಥಿಕ್ಸ್ ಅಧಿಕಾರಿ​ ಡಿಕೆ ಜೈನ್​ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಸಿಇಒ ರಾಹುಲ್ ಜೊಹ್ರಿಗೆ ಇ-ಮೇಲ್​ ಮೂಲಕ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಎಲ್​ಎಲ್​ಪಿ ಮತ್ತು ಕಾರ್ನರ್​ಸ್ಟೋನ್​ ವೆಂಚರ್ಸ್​ ಪಾರ್ಟನರ್ಸ್‌ ಎಲ್​ಎಲ್​ಪಿ​ ಈ ಎರಡು ಕಂಪನಿಗಳಿಗೆ ಕೊಹ್ಲಿ, ಡೈರೆಕ್ಟರ್ ಆಗಿದ್ದಾರೆ.

ಆ ಸಂಸ್ಥೆಗಳಲ್ಲಿ ಸಹ ನಿದೇರ್ಶಕರಾಗಿರುವ ಕೆಲವರು, ಟೀಮ್ ಇಂಡಿಯಾ ಆಟಗಾರರ ವ್ಯವಹಾರ ನೋಡಿಕೊಳ್ಳುವ ಕಾರ್ನರ್​ಸ್ಟೋನ್ ಆ್ಯಂಡ್​ ಎಂಟರ್​ಟೇನ್​ಮೆಂಟ್ ಪ್ರೈವೇಟ್​ ಲಿಮಿಟೆಡ್​ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಜೀವ್ ಗುಪ್ತಾ ಆರೋಪಿಸಿದ್ದಾರೆ.

ಒಂದೇ ಬಾರಿ ಎರಡು ಪದವಿ ಹೊಂದಿರುವ ಕೊಹ್ಲಿ, ಸುಪ್ರೀಂ ಕೋರ್ಟ್ ಅನುಮೋದಿಸಿರುವ ಬಿಸಿಸಿಐ ಸಂವಿಧಾನದ 38(4) ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಒಂದು ಪದವಿ ತ್ಯಜಿಸಬೇಕು ಅನ್ನೋದು ದೂರಿನಲ್ಲಿ ಉಲ್ಲೇಖವಾಗಿದೆ. ಬಿಸಿಸಿಐ ನಿಯಮ 38(4) ಪ್ರಕಾರ ಆಟಗಾರರಾಗಲಿ ಅಥವಾ ಅಧಿಕಾರಿಗಳಾಗಲಿ ಒಂದೇ ಬಾರಿ ಎರಡು ಪದವಿಯಲ್ಲಿರಬಾರದು.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಎಥಿಕ್ಸ್ ಆಫೀಸರ್​ ಡಿಕೆ ಜೈನ್​ ಅವರು, ಕೊಹ್ಲಿ ವಿರುದ್ಧ ದೂರು ಬಂದಿದೆ. ಆ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೋ, ಬೇಡವೋ ಎಂದು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ ಪರಿಗಣಿಸಬೇಕಾದಲ್ಲಿ ಈ ಬಗ್ಗೆ ಸ್ಪಂದಿಸಲು ಕೊಹ್ಲಿಗೆ ಅವಕಾಶ ನೀಡುತ್ತೇವೆ ಎಂದು ಜೈನ್​ ತಿಳಿಸಿದ್ದಾರೆ.


ಇದನ್ನೂ ಓದಿಅನುಷ್ಕಾ ಶರ್ಮಾಗೆ ಕೊಹ್ಲಿ ಡಿವೊರ್ಸ್ ಕೊಡಬೇಕು ಎಂದ ಬಿಜೆಪಿ ಶಾಸಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights