ಶಾಲೆಯಲ್ಲಿ ಮೂವರಿಗೆ ಶೂಟ್‌ ಮಾಡಿದ 6ನೇ ತರಗತಿ ವಿದ್ಯಾರ್ಥಿನಿ; ಬಂಧನ!

ವಿದ್ಯಾರ್ಥಿಯೊಬ್ಬಳು ತನ್ನ ಬ್ಯಾಗ್‌ನಲ್ಲಿ ಬಂದೂಕು ತಂದು ಶಾಲೆಯಲ್ಲಿ ಸಿಬ್ಬಂದಿಗಳ ಮೇಲೆ ಶೂಟ್‌ ಮಾಡಿರುವ ಘಟನೆ ಅಮೆರಿಕಾದ ಡಾಹೋ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇಡಾಹೋ ಜಲಪಾತದ ಬಳಿಯಿರುವ ರಿಗ್‌ಬಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿನಿಯು, ತನ್ನ ಬ್ಯಾಕ್​​ಪ್ಯಾಕ್​ನಿಂದ ಹ್ಯಾಂಡ್​ಗನ್​ ತೆಗೆದು ಶಾಲೆಯ ಒಳಭಾಗದಲ್ಲಿ ಮತ್ತು ಆವರಣದಲ್ಲಿ ಹಲವು ರೌಂಡ್​ ಗುಂಡು ಹಾರಿಸಿದಳು. ಶಿಕ್ಷಕರೊಬ್ಬರು ಆಕೆಯಿಂದ ಬಂದೂಕು ಕಿತ್ತುಕೊಂಡು ಆಕೆಯನ್ನು ಹಿಡಿದಿಟ್ಟರು. ನಂತರ ಪೊಲೀಸರು ಬಂದು ಆಕೆಯನ್ನು ವಶಕ್ಕೆ ಪಡೆದರು ಎಂದು ತಿಳಿದು ಬಂದಿದೆ.

ಈ ಶೂಟ್​ಔಟ್​ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮತ್ತು ಒಬ್ಬ ಸಿಬ್ಬಂದಿಗೆ ಗುಂಡೇಟು ಬಿದ್ದಿದೆ. ಆದರೆ ಯಾರ ಜೀವಕ್ಕೂ ಅಪಾಯವಾಗಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಎಫ್​ಬಿಐ ತನಿಖೆ ಆರಂಭಿಸಿದೆ.

ಇದನ್ನೂ ಓದಿ: ಬೆಡ್‌ ದಂದೆಗೆ ಕೋಮು ಬಣ್ಣ; BBMP ವಾರ್‌ ರೂಮ್‌ಗೆ ತೆರಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಸುಳ್ಳು ಎಂದ BJP ಸಂಸದ ತೇಜಸ್ವಿ ಸೂರ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.