ವಿಶ್ವದ ಒಟ್ಟು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತಕ್ಕೆ 10ನೇ ಸ್ಥಾನ : ಆಕ್ಟೀವ್ ಕೇಸ್ ನಲ್ಲಿ 5ನೇ ಸ್ಥಾನ!

ಜಗತ್ತಿನಾದ್ಯಂತ ಕೊರೊನಾ ವೈರಸ್ ತನ್ನ ಬಾಹುಗಳನ್ನ ವೇಗವಾಗಿ ಚಾಚಿಕೊಳ್ಳುತ್ತಿರುವ ಬೆನ್ನಲ್ಲೇ ಅಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ವಿಶ್ವದ ಒಟ್ಟು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತಕ್ಕೆ 10ನೇ ಸ್ಥಾನ ಪಡೆದಿದ್ದು, ಆಕ್ಟೀವ್ ಕೇಸ್ ನಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ಹೌದು.. ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇಳಿಕೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ. ದಿನಕಳೆದಂತೆ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ ನಾಲ್ಕೈದು ದಿನಗಳಿಂದ ಭಾರತದಲ್ಲಿ ಪ್ರತಿನಿತ್ಯ 6000 ಕ್ಕೂ ಅಧಿಕ ಸೋಂಕಿತರು ದಾಖಲಾಗುತ್ತಿದ್ದಾರೆ. ವಿಶ್ವದಲ್ಲಿರುವ ಒಟ್ಟು ಕೊರೊನಾ ಪೀಡಿತರು 54 ಲಕ್ಷ ಜನ. ಈವರಲ್ಲಿ ಭಾರತದ ಪಾಲು 1.38 ಲಕ್ಷ ಇದೆ. ಈ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು, 16 ಲಕ್ಷ ಸೋಂಕಿತರನ್ನು ಒಳಗೊಂಡಿದೆ. 2ನೇಯದು ಬ್ರೇಜಿಲ್​ ನಲ್ಲಿ 3.63 ಲಕ್ಷ ಸೋಂಕಿತರಿದ್ದಾರೆ. ಮೂರನೇಯದು ರಷ್ಯಾದಲ್ಲಿ 3.44 ಲಕ್ಷ  ಸೋಂಕಿತರು ದಾಖಲಾಗಿದ್ದಾರೆ.

ಇನ್ನೂ ವಿಶ್ವದಲ್ಲಿ ಕೊರೊನಾ ಆಸ್ಟೀವ್ ಕೇಸ್ ಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ 28 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳಿವೆ. ಅಮೆರಿಕ ಒಂದರಲ್ಲೇ 11 ಲಕ್ಷ ಆಕ್ಟಿವ್ ಪ್ರಕರಣಗಳಿವೆ. ಅಮೆರಿಕ, ರಷ್ಯಾ, ಬ್ರೆಜಿಲ್, ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತ ಇದೆ. ಈವರೆಗೆ ಭಾರತದಲ್ಲಿ 1.38 ಲಕ್ಷ ಸೋಂಕಿತರಿದ್ದಾರೆ. ಇವರಲ್ಲಿ 4 ಸಾವಿರ ಮಂದಿ ಮೃತಪಟ್ಟಿದ್ದಾರೆ. 75,700 ಆಕ್ಟೀವ್ ಪ್ರಕರಣಗಳಿವೆ.

ಲಾಕ್ ಡೌನ್ 4.0 ಸಡಿಲಗೊಂಡ ನಂತರದಿಂದ ಬೇರೆ ಬೇರೆ ರಾಜ್ಯಗಳಿಂದ ಜನ ಓಡಾಟ ಹೆಚ್ಚಾದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಸೋಂಕಿತರು ಹೆಚ್ಚಿರುವ ರಾಜ್ಯಗಳಿಮದ ವಲಸಿಗರು ಅಧಿಕ ಪ್ರಮಾಣದಲ್ಲಿ ಪ್ರಯಾಣ ಬೇಳಸುತ್ತಿರುವುದರಿಂದ ಕೊರೊನಾ ವೈರಸ್ ವೇಗವಾಗಿ ದೇಶವನ್ನು ವ್ಯಾಪಿಸುತ್ತಿದೆ. ಇನ್ನೂ ಕೆಲ ವಾರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಪರಿಸ್ಥಿತಿ ಮಿತಿ ಮೀರಿ ಹೋಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights