ಆಕ್ಸಿಮೀಟರ್ ಇಲ್ಲದೇ ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

ಕೊರೊನಾ ಹೆಚ್ಚಾಗುತ್ತಿದ್ದಂತೆ ಎಲ್ಲೆಡೆ ಆಕ್ಸಿಮೀಟರ್ ಸಾಧನದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾದಂತೆ ಇದರ ಬೆಲೆ ಕೂಡ ಹೆಚ್ಚಾಗಿದ್ದು, ಬೇಡಿಕೆಗನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಹಲವೆಡೆ ಸ್ಟಾಕ್ ಖಾಲಿಯಾಗಿ ಜನರಿಗೆ ಇದರ ಖರೀದಿ ಸಾಧ್ಯವಾಗುತ್ತಿಲ್ಲ. ಆದರೆ ಇದಕ್ಕೊಂದು ಪರ್ಯಾಯ ಮಾರ್ಗ ಕಂಡುಹಿಡಿಯಲಾಗಿದೆ. ನೀವು ಮೆಡಿಕಲ್ ಶಾಪ್ ಗೆ ಹೋಗಿ ದುಬಾರಿ ಹಣ ಖರ್ಚು ಮಾಡಿ ಆಕ್ಸಿಮೀಟರ್ ಖರೀದಿ ಮಾಡಬೇಕಿಲ್ಲ. ಬದಲಾಗಿ ನಿಮ್ಮ ಮೊಬೈಲ್ ನಲ್ಲೇ ಆಕ್ಸಿಜನ್ ಲೆವಲ್ ತಿಳಿಯಬಹುದು.

ಹೌದು… ಕೊಲ್ಕಾತ್ತಾ ಮೂಲದ ಹೆಲ್ತ್ ಸ್ಟಾರ್ಟಪ್ ಕಂಪನಿಯೊಂದು ಕೇರ್ ಪ್ಲಿಕ್ಸ್ ವೈಟಲ್ಸ್(CarePlix Vital’s) ಎಂಬ ಆ್ಯಪ್ ಡೆವಲಪ್ ಮಾಡಿದೆ. ಇದನ್ನು ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ರಕ್ತದಲ್ಲಿ ಆಕ್ಸಿಜನ್ ಲೆವೆಲ್ , ಪಲ್ಸ್ ಲೆವೆಲ್ ಮತ್ತು ಉಸಿರಾಟದ ಲೆವೆಲ್ ಮಾನಿಟರ್ ಮಾಡಬಹುದು.

ಹಾಗಾದ್ರೆ ಈ ಆ್ಯಪ್ ನ್ನು ಬಳಸಿ ಆಕ್ಸಿಜನ್ ಲೆವೆಲ್ ತಿಳಿಯುವುದು ಹೇಗೆ..?

ಸ್ಮಾರ್ಟ್ ಫೋನ್ ಹಿಂಬದಿ ಕೆಮೆರಾ ಮತ್ತು ಫ್ಲ್ಯಾಶ್ ಲೈಟ್ ಇರುವ ಕಡೆ ಬೆರಳು ಇಡಬೇಕು. ಕೆಲವೇ ಕ್ಷಣಗಳಲ್ಲಿ ನಿಮ್ಮ ಆಕ್ಸಿಜನ್ ಸಾಚ್ಯುರೇಶನ್ ಲೆವೆಲ್, ಪಲ್ಸ್ ಲೆವೆಲ್ ಮತ್ತು ಉಸಿರಾಟದ ದರ ಆ್ಯಪ್ ನಲ್ಲಿ ಡಿಸ್ ಪ್ಲೆ ಆಗುತ್ತದೆ BGR.in ಎಂದು ನಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ.

ಇದು 96ರಷ್ಟು ನಿಖರವಾದ ಹಾರ್ಟ್ ರೇಟ್ ಮತ್ತು ಶೇ 98ರಷ್ಟು ನಿಖರವಾದ ಆಕ್ಸಿಜನ್ ಸ್ಯಾಚುರೇಶನ್ ರೇಟ್ ತೋರಿಸುತ್ತದೆ ಎಂದು CarePlix Vital’s  ಕಂಪನೀಯ ಅಧಿಕಾರಿಗಳು ಹೇಳುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights