ಕೊರೊನಾ 2ನೇ ಅಲೆ ಆತಂಕ : ಬೆಳಗಾವಿ ಗಡಿ ಭಾಗದಲ್ಲಿ ‘ಮಹಾ’ ಕಂಟಕ..!

ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿ ಕೊರೊನಾ ಭೀತಿ ಅಧಿಕವಾಗಿದೆ. ಬೆಳಗಾವಿ ಚೆಕ್ ಪೋಸ್ಟ್ ಗಳಲ್ಲಿ ಕೊರೊನಾ ಟೆಸ್ಟ್ ಆಗುತ್ತಿಲ್ಲ. ಸಾವಿರಾರು ವಾಹನಗಳು, ಜನರು ರಾಜ್ಯಕ್ಕೆ ತಪಾಸಣೆ ಇಲ್ಲದೆ ಎಂಟ್ರಿ ಕೊಡುತ್ತಿರುವುದು ಭಾರಿ ಆತಂಕವನ್ನು ಸೃಷ್ಟಿ ಮಾಡಿದೆ. ಹೀಗಾಗಿ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಬರುವ ಜನರಿಂದಲೇ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.

ಹಾದು.. ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಸಲೀಸಾಗಿ ಮಹಾರಾಷ್ಟ್ರ ಪ್ರಯಾಣಿಕರು ಎಂಟ್ರಿ ಕೊಡುತ್ತಿದ್ದಾರೆ. ಕೇವಲ ನಾಮಕಾವಾಸ್ತೆ ಅವರನ್ನು ಟೆಸ್ಟ್ ಮಾಡಲಾಗುತ್ತಿದ್ದು, ಕೆಲವು ಚೆಕ್ ಪೋಸ್ಟ್ ಗಳಲ್ಲಿ ಅವರ ದೂರವಾಣಿ ಸಂಖ್ಯೆ ಹಾಗೂ ವಿಳಾಸವನ್ನು ಪಡೆಯಲಾಗುತ್ತಿದೆ. ಆದರೆ ಯಾವುದೇ ಕೊರೊನಾ ಟೆಸ್ಟಿಂಗ್ ರಿಪೋರ್ಟ್ ಆಗಲಿ ಪರೀಕ್ಷೆಯಾಗಲಿ ಮಾಡುತ್ತಿಲ್ಲ. ಬೆಳಗಾವಿಯಲ್ಲಿ 14 ಚೆಕ್ ಪೋಸ್ಟ್ ಗಳಿವೆ. ಈ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿಲ್ಲ. ಹೀಗಾಗಿ ರಾಜ್ಯಕ್ಕೆ ಕೊರೊನಾ ಸಲೀಸಾಗಿ ಎಂಟ್ರಿ ಕೊಡುತ್ತಿರುವ ಭಯ ಶುರುವಾಗಿದೆ.

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ರು ಅನ್ನೋ ಹಾಗೆ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದಲ್ಲಿ ಸಿನಿಮಾ, ಸಾಭೆ-ಸಮಾರಂಭ, ಪಾರ್ಕ್, ಕಚೇರಿಗಳಲ್ಲಿ ಪ್ರವೇಶದ ಮಿತಿ ನಿಗಧಿ ಮಾಡುವುದಕ್ಕಿಂತ ರಾಗ್ಯದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಇನ್ನೂ ರಾಜ್ಯದ ದಕ್ಷಿಣ ಕನ್ನಡ –ಕೇರಳ ಗಡಿಯಲ್ಲಿ ಗೊಂದಲ ಇದೆ. ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜನರನ್ನು ಪ್ರವೇಶಿಸಲು ತಪಾಸಣೆ ಮಾಡಿದರೆ ಕೇರಳ ಗಡಿ ಭಾಗ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಿನ್ನೆ ರಾಜ್ಯದಲ್ಲಿ 1587 ಪ್ರಕರಣ ವರದಿ ಆಗಿದ್ದು, 10 ಮಂದಿ ಬಲಿ ಆಗಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ 1037 ಮಂದಿ ಸೋಂಕು ಬಾಧಿತರಾಗಿದ್ದಾರೆ. 6 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವವರು ಕೊರೊನಾ ರೂಲ್ಸ್ ಬ್ರೇಕ್ ಮಾಡೋದು ಕಾಮನ್ ಆಗಿದೆ. ಪ್ರಾಥಮಿಕ ಸಂಪರ್ಕಿತರಲ್ಲೇ ಶೇ50ರಷ್ಟು ಮಂದಿಗೆ ಸೋಂಕು ಹೆಚ್ಚಿರುವುದು ಗಾಬರಿ ಮೂಡಿಸಿದೆ. ಹೀಗಾಗಿ ಒಂದು ಕೇಸ್ ನಲ್ಲಿ ಕನಿಷ್ಠ 15 ಮಂದಿ ಸಂಪರ್ಕಿತರನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆ ನೌಕರರು, ಎಂಜಿನೀಯರ್ಗಳು ಮತ್ತು ಶಿಕ್ಷಕರನ್ನು ಬಿಬಿಎಂಪಿ ಬಳಸಿಕೊಳ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights