ಕೊರೊನಾ ಆಕ್ರಮಣ: SSLC ಪರೀಕ್ಷೆ ಮುಂದೂಡಿಕೆ; ಸಾಧ್ಯವಾದರೆ ಜುಲೈ ತಿಂಗಳಿನಲ್ಲಿ ನಡೆಯಲಿವೆ ಪರೀಕ್ಷೆಗಳು!

ಕೊರೊನಾ ಎರಡನೆ ಅಲೆಯ ಹಿನ್ನಲೆಯಲ್ಲಿ ಜೂನ್ ೨೧ರಿಂದ ನಡೆಬೇಕಿದ್ದ ಎಸ್‌ಎಸ್‌ಎಲ್‌ಸಿ ಪರಿಕ್ಷೆಗಳನ್ನು ಮುಂದುಡಲಾಗಿದೆ. ಈ ಪರೀಕ್ಷೆಗಳನ್ನು ಸಾಧ್ಯವಾದರೆ ಜುಲೈ ತಿಂಗಳಲ್ಲಿ ನಡೆಸಲಾಗುವುದು ಮತ್ತು ಆಗಸ್ಟ್‌ನಲ್ಲಿ ಪರೀಕ್ಷಾ ಫಲಿತಾಂಶ ಘೋಷಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಭಾಗವಹಿಸಿ ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್ ದ್ವಿತೀಯ ಪಿಯು ಪರೀಕ್ಷಗಳಿಗೆ ಇಗಾಗಲೆ ಪ್ರಶ್ನೆ ಪತ್ರಿಕೆಗಳು ಸಿದ್ದಗೊಂಡಿವೆ.

ಭಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಎಲ್ಲಾ ಪೂರ್ವ ಸಿದ್ಧತೆಗಳೋಂದಿಗೆ, ಅಗತ್ಯ ಸುರಕ್ಷಕ್ರಮಗಳನ್ನು ಮಾಡಿಕೊಳ್ಳಲಾಗಿದೆ.

ಕೊರೊನಾದ ಎರಡನೆ ಅಲೆ ತಗಿದ ಕೂಡಲೆ ೧೫-೨೦ ದಿನಗಳ ಕಾಲಾವಕಾಶ ನೀಡಿ ಮುಂಚೇಯೇ ಪರೀಕಾ ದಿನಾಂದವನ್ನು ಪ್ರಕಟಿಸಲಾಗುವುದ ಎಂದು ಸದ್ಯದ ತೀರ್ಮಾನವಾಗಿದೆ. ಕೊರೊನಾ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ಬರಯಲಾಗದಿದ್ದಲಿ ಇನ್ನೊಮ್ಮೆ ಪರೀಕೆ ನಡೆಸಲಾಗುವುದು ಆಗ ಮತ್ತೆ ಅವಕಾಶ ಕಲ್ಪಿಸಲು ಸಹ ರಾಜ್ಯಸರ್ಕಾರದ ತಿರ್ಮಾನಿಸಿ ಎಂದು ಸುರೇಶ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಆಗಸ್ಟ್‌ನಲ್ಲಿ ಬಂದರೆ, ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್‌ನಲ್ಲಿ ಆಯೋಜಿಸಬಹುದು ಎಂದು ಸಚಿವ ಸುರೇಶ್ ಕುಮಾರ್ ಸಭೆಯಲ್ಲಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಜುಲೈ ವೇಳೆಗೆ ಇಳಿಕೆಯಾಗಲಿದೆ ಕೊರೊನಾ 2ನೇ ಅಲೆ; ಫೆಬ್ರವರಿಯಂತೆ ಯಥಾಸ್ಥಿತಿಯತ್ತ ದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights