ಸಕ್ಕರೆನಾಡಲ್ಲಿ ಉರಳಲಿದೆಯಾ ಜೆಡಿಎಸ್ ಪಕ್ಷದ ಮತ್ತೊಂದು ವಿಕೆಟ್..?

ಮಂಡ್ಯದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ದೇವೇಗೌಡ್ರು ಕುಟುಂಬಕ್ಕೆ ಕೊಡ್ತಾರಾ ಕೈ ಅನ್ನೋ ಅನುಮಾನ ಸದ್ಯ ಸೃಷ್ಟಿಯಾಗಿದೆ. ಹೀಗಂತ ಪ್ರಶಱನೆ ಹಾಕಿದ್ರೆ  ಹೌದು ಎನ್ನುತ್ತಿದೆ ಮಂಡ್ಯದಲ್ಲಿರೋ ಮಾಜಿ ಸಚಿವ ಪುಟ್ಟರಾಜು ಅಪ್ತ ವಲಯ!

ದೇವೇಗೌಡ್ರು ಕುಟುಂಬದ ಕಿರುಕುಳಕ್ಕೆ ಬೇಸತ್ತು ಬಿಜೆಪಿಯತ್ತ ಮುಖ ಮಾಡ್ತಿದ್ದಾರಾ ಮಾಜಿ ಸಚಿವರು ಎನ್ನುವ ಗುಲ್ಲೆದ್ದಿದೆ.  ಸಮ್ಮಿಶ್ರ ಸರ್ಕಾರದ ಇದ್ದಾಗ ಬಿಎಸ್ವೈ ಬಗ್ಗೆ ಸದಾ ಕಿಡಿ ಕಾರ್ತಿದ್ದ ಮಾಜಿ ಸಚಿವ ಪುಟ್ಟರಾಜು, ಇದೀಗ ಬಿಎಸ್ವೈ ಸರ್ಕಾರ ಬರ್ತಿದ್ದಂತೆ ಬಿಎಸ್ವೈ ಪರ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ.

ಈ ಹಿಂದೆ ಮಾಜಿ ಸಚಿವ ಪುಟ್ರಾಜುಗೂ ದೇವೇಗೌಡ ಕುಟುಂಬದಿಂದ ಕಿರುಕುಳ ಆಗ್ತಿರೋ ಬಗ್ಗೆ ತಿಳಿಸಿದ್ದ ಅನರ್ಹ ಶಾಸಕ‌ ನಾರಾಯಣಗೌಡ, ಕೆ.ಆರ್.ಪೇಟೆಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮಾಚರಣೆ ವೇಳೆ ಪುಟ್ಟರಾಜು ಗೆ ದೇವೇಗೌಡ ಕುಟುಂಬದ ಕಿರುಕುಳದ ಮಾತನಾಡಿದ್ದರು.

ಇನ್ನು ಸ್ವಲ್ಪ ದಿನದಲ್ಲೇ ಪುಟ್ರಾಜಣ್ಣ ದೇವೇಗೌಡರ ಕುಟುಂಬದ ಕಿರುಕುಳದ ಬಗ್ಗೆ ಬಾಯ್ಬಿಡ್ತಾರೆಂದಿದ್ದ ಅನರ್ಹ ಶಾಸಕ ನಾರಾಯಣಗೌಡ ಹೇಳಿದಂತೆ ಆಗುತ್ತಿದೆ. ಮೈತ್ರಿ ಸರ್ಕಾರ ಬಿದ್ದ ಬಳಿಕ hdk ಯಿಂದ ಅಂತರ ಕಾಯ್ದು ಕೊಂಡಿರೋ ಮಾಜಿ ಸಚಿವ ಪುಟ್ಟರಾಜು,  ಬಿಎಸ್ವೈ ಸಿ. ಎಂ. ಆದ್ಮೇಲೆ‌ ನಮ್ಮದೇ‌ ಜಿಲ್ಲೆಯ  ಯಡಿಯೂರಪ್ಪ ಸಿ.ಎಂ.ಆಗಿದ್ದಾರೆ ಜಿಲ್ಲೆಯ ಅಭಿವೃದ್ದಿಯಾಗುತ್ತೆ ಎಂದಿದ್ದಾರೆ.

ಸಿ.ಎಂ. ಯಡಿಯೂರಪ್ಪ ಪರ ಸಾಫ್ಟ್ ಆಗಿ ಮಾತನಾಡ್ತಿರೋ ಪುಟ್ಟರಾಜು, ನಡೆಯಿಂದಾಗಿ ಬಿಜೆಪಿ ಕಡೆ ವಾಲ್ತಿರೋ ಬಗ್ಗೆ  ರಾಜಕೀಯ ಗೊಂದಲ ಮೂಡಿದೆ. ನಾಳೆ ಸಿ.ಎಂ.‌ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲೂ ಪುಟ್ಟರಾಜು ಭಾಗಿ ಸಾಧ್ಯತೆ ಇದೆ.

ಸಕ್ಕರೆನಾಡಲ್ಲಿ ಉರಳಲಿದೆಯಾ ಜೆಡಿಎಸ್ ಪಕ್ಷದ ಮತ್ತೊಂದು ವಿಕೆಟ್ ಅನ್ನೋ ಅನುಮಾನ ಗಾಢವಾಗಿ ಕಾಡುತ್ತಿದೆ. ಹೀಗಾಗಿ ನಿಜವಾಗಲಿದೆಯಾ ಅನರ್ಹ ಶಾಸಕ ನಾರಾಯಣಗೌಡರ ಹೇಳಿರೋ ಭವಿಷ್ಯ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights