ಸಾರ್ವಜನಿಕ ಸಾರಿಗೆ, ಮಾಲ್, ಥಿಯೇಟರ್ ಆರಂಭಕ್ಕೆ ಅಸ್ತು ಎಂದ ಸರ್ಕಾರ!

ಹಲವಾರು ದಿನಗಳಿಂದ ಲಾಕ್‌ ಆಗಿದ್ದ ದೇಶದಲ್ಲಿಇಂದು ಕೊಂಚ ರಿಲೀಫ್‌ ಸಿಕ್ಕಿದೆ. ಜನರು ಜೈಲಿಂದ ತಪ್ಪಿಸಿಕೊಂಡವರಂತೆ ಸುತ್ತಾಡ ಆರಂಭಿಸಿದ್ದಾರೆ. ಅದರಲ್ಲೂ ಮದ್ಯದ ಅಂಗಡಿಯ ಮುಂದೆ ಸರದಿ ಸಾಲುಗಟ್ಟಿ ಮದ್ಯ ಕರೀದಿ ಮುನ್ನುಗ್ಗುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಸ್ವಲ್ಪ ರಿಲೀಫ್‌ ಕೊಟ್ಟಿರುವ ಸರ್ಕಾರ ಲಾಕ್‌ಡೌನ್‌ನಿಂದಾದ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳನ್ನು ನಿಭಾಯಿಸಲು ರೂಪುರೇಷೆಗಳನ್ನು ತಯಾರಿಸುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ 2 ದಿನಗಳೊಳಗೆ ಕೇಂದ್ರ ಸರ್ಕಾರ ಎರಡನೇ ಹಣಕಾಸು ಪ್ರೋತ್ಸಾಹಕ ಪ್ಯಾಕೆಜ್ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಆರು ಸುತ್ತುಗಳ ಸಭೆ ನಡೆಸಿದ್ದು ಪ್ರಧಾನ ಮಂತ್ರಿ ಕಾರ್ಯಾಲಯ ಇಂದು ಕರಡು ಪ್ರಸ್ತಾವನೆ ಸಿದ್ದಪಡಿಸುವ ಸಾಧ್ಯತೆಯಿದೆ.

ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ಪ್ಯಾಕೇಜ್‌ ರೂಪುರೇಷೆ ಅಂತ್ಯಗೊಳಿಸಿದರೆ ಸರ್ಕಾರ ಪ್ರೋತ್ಸಾಹಕ ಹಣಕಾಸು ಪ್ಯಾಕೇಜ್ ನ್ನು ಇನ್ನು ಕೆಲ ದಿನಗಳಲ್ಲಿಯೇ ಘೋಷಿಸಲಿದೆ.

ಸರ್ಕಾರದ ಇನ್ನೊಂದು ಮೂಲದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೋವಿಡ್-19 ನಿಯಮಗಳೊಂದಿಗೆ ಬಸ್ಸು, ಟ್ಯಾಕ್ಸಿ, ರೈಲು, ಆಟೋರಿಕ್ಷಾಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇ 20ರಿಂದ ಮೆಟ್ರೊ ನಗರಗಳಲ್ಲಿ ಆರಂಭವಾಗಲಿದ್ದು ಜನರಿಗೆ ಈ ಸುದ್ದಿ ಸಮಾಧಾನ ತರಬಹುದು ಎಂದಿವೆ.

ಜೂನ್ 1ಕ್ಕೆ ಮಾಲ್ ಗಳ ತೆರೆಯುವಿಕೆ, ಸಾರ್ವಜನಿಕ ಸಭೆ, ಸಮಾರಂಭಗಳು, ವಿವಾಹ ಕಾರ್ಯಕ್ರಮಗಳು, ಸಿನೆಮಾ ಮಂದಿರಗಳು, ಧಾರ್ಮಿಕ ಕೇಂದ್ರಗಳ ತೆರೆಯುವಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಲಿದೆ. ಈ ಬಗ್ಗೆ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸುವ ಕಾರ್ಯ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights