24 ಗಂಟೆಯಲ್ಲಿ ಬೆಂಗಳೂರಿನ 3 ಜನರಿಗೆ ದೃಢಪಟ್ಟ ಕೊರೊನಾ ಸೋಂಕು…!

ಬೆಂಗಳೂರಿನ ಟೆಕ್ಕಿಗೆ ಕೊರೊನಾ ಹರಡಿದ ಬೆನ್ನಲ್ಲೆ ಇಂದು ಆತಂಕಕಾರಿಯಾದ ಬೆಳವಣಿಗೆಯೊಂದು ರಾಜ್ಯದಲ್ಲಿ ತಲೆಯತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ ಮೂವರಿಗೆ ಕೊರಾನಾ ವೈರಸ್ ತಗುಲಿದೆ ಎನ್ನುವ ಆತಂಕಕಾರಿಯಾದ ವಿಷಯ ತಿಳಿದುಬಂದಿದೆ.

ಹೌದು… ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಕರ್ನಾಟಕದಲ್ಲಿ ಒಟ್ಟು ನಾಲ್ಕು ಜನರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇದನ್ನ ದೃಢಪಡಿಸಿದೆ. ನೆನ್ನೆ ಓರ್ವ ಟೆಕ್ಕಿಯಲ್ಲಿ ಕೊರೊನಾ ಕಂಡುಬಂತು. ಕಳೆದ 24 ಗಂಟೆಯಲ್ಲಿ ಟೆಕ್ಕಿ, ಪತ್ನಿ, ಮಗು ಹಾಗೂ ಸಹೋದ್ಯೋಗಿಯಲ್ಲಿ ಕೊರೊನಾ ದೃಢಪಟ್ಟಿರಬಹುದು ಎಂದೇಳಲಾಗುತ್ತಿದೆ.

ರಾಜ್ಯದಲ್ಲಿ 3,800 ಸಾಂಪೆಲ್ ಟೆಸ್ಟ್ ಆಗಿದೆ. 24 ಗಂಟೆಯಲ್ಲಿ 1 ಕೇರಳ, 2 ಪುಣೆ, ಬೆಂಗಳೂರಿನಲ್ಲಿ 3 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲೇ ಅಧಿಕ ಜನರಿಗೆ ಸೋಂಕು ಹರಡಿರುವುದು ತಿಳಿದು ಬಂದಿದೆ.

ಈಗಾಗಲೇ 5 ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ನೋ ಶೇಕ್ ಹ್ಯಾಂಡ್ ಓನ್ಲಿ ನಮಸ್ತೆ ಅನ್ನೋ ಸಂದೇಶ ರವಾನೆ ಮಾಡಲಾಗುತ್ತಿದೆ. ಕೊರೊನಾ ಬಂದರೆ ಹೋಗೋದು ಕಷ್ಟ ತಡೆಯೋದು ಕಷ್ಟವಾಗಿದೆ. ಹೀಗಾಗಿ ಮಾರುಕಟ್ಟೆ ಲಾಸ್ ಅನುಭವಿಸುತ್ತಿದೆ. ಕಚೇರಿಗಳೆಲ್ಲವೂ ಖಾಲಿ ಹೊಡೆಯುತ್ತಿವೆ. ವಿದೇಶಕ್ಕೆ ಹೋಗುವವರು ಎಚ್ಚರ ವಹಿಸಬೇಕಾಗಿದೆ.

ಹೀಗಾಗಿ ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದು, ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಯೊಂದಿಗೆ ಸಚಿವ ಡಾ.ಕೆ. ಸುಧಾಕರ್ ಸಭೆ ಕರೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights