Covid 19 : ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿಭತ್ಯೆ, ಪಿಂಚಣಿದಾರರಿಗೆ ಡಿಎ ಇಲ್ಲ…

ಕೇಂದ್ರ ಸರಕಾರಿ ನೌಕರರಿಗೆ ಕೋವಿಡ್ 19 ಶಾಕ್ ಕೊಟ್ಟಿದೆ..  ಕೊರೋನಾ ಲಾಕ್‌ಡೌನಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲಯಲ್ಲಿ ತನ್ನ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಹೆಚ್ಚುವರಿ ತುಟ್ಟಿಭತ್ಯೆ ನೀಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. ಮುಂದಿನ ವರ್ಷ ಜೂನ್‌ವರೆಗೆ ನೌಕರರು ಮತ್ತು ಪಿಂಚಣಿದಾರರಿಗೆ ಯಾವುದೇ ಹೆಚ್ಚುವರಿ ತುಟ್ಟಿಭತ್ಯೆ ನೀಡದಿರಲು ಕೇಂದ್ರ ಸರಕಾರ ತೀರ್ಮಾಣ ತೆಗೆದುಕೊಂಡಿದೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಈಗಾಗಲೇ ಎಲ್ಲ ಸಂಸದರು ಮತ್ತು ಉನ್ನತಾಧಿಕಾರಿಗಳ ವೇತನ ಕಡಿತ ಮಾಡಲಾಗಿದ್ದು, ಸಂಸದರ ಕ್ಷೇತ್ರಾಭಿವೃದ್ಧ ನಿಧಿಯನ್ನು ಕೂಡ ಕೇಂದ್ರ ಸ್ಥಗಿತಗೊಳಿಸಿದೆ. ಕೇಂದ್ರ ಸರಕಾರಿ ನೌಕರರಿಗೆ ಕಳೆದ ಜನವರಿಯಿಂದ ಈ ಕಂತಿನ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು.

ಹೆಚ್ಚುವರಿ ಭತ್ಯೆಯನ್ನಷ್ಟೇ ತಡೆ ಹಿಡಿಯಲಾಗಿದ್ದು ಅದರ ಹೊರತಾಗಿ ಈಗ ಕೊಡಮಾಡಲಾಗುತ್ತಿರುವ ಭತ್ಯೆಯಲ್ಲಿ ಯಾವುದೇ ಕಡಿ ಇರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈ ಸಂಬಂಧ ಕೇಂದ್ರ ಹಣಕಾಸು ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ಇದೇ ವೇಳೆ ಕೊರೋನಾ ಸಂಕಷ್ಟಕ್ಕೆ ಮಿಡಿಯುವ ಆರ್ಥಿಕ ಪರಿಹಾರ ಒಸಗಿಸುವ ನಿಟ್ಟಿನಲ್ಲಿ ಕೇಂದ್ರ ನಿರತವಾಗಿದೆ.

ಕಳೇದ ತಿಂಗಳು ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಆರೋಗ್ಯ ಕಾರ್‍ಯಕರ್ತರು, ಕೃಷಿಕರು ಹಾಗೂ ಬಡ ಕಾರ್ಮಿಕರಿಗಾಗಿ ಕೇಂದ್ರ ಸರಕಾರ ವಿಶೇಷ ಆರ್ಥಿಕ ನೆರವಿನ ಬುಟ್ಟಿ ನೀಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights