ಬಾಲಿವುಡ್ಗೆ ಲಾಕ್​ಡೌನ್ನಿಂದ 5000 ಕೋಟಿ ಖೋತಾ : ಸಿನಿಮಾ ಮಂದಿ ಕಂಗಾಲು!

ಕೊರೊನಾ ಲಾಕ್ ಡೌನ್ ಅಕ್ಷರಶ: ಬಾಲಿವುಡ್ ನನ್ನು ಲಾಕ್ ಮಾಡಿದೆ. ಬಾಲಿವುಡ್ ಸ್ಟಾರ್ ಗಳಿಗೆ ಈ ಬಾರಿ ಕರಾಳ ದೀಪಾವಳಿಯಾಗಲಿದೆ. ಅಂದುಕೊಳ್ಳುವ ಹಾಗೆ ಆಗಿದ್ದರೆ ಬಾಲಿವುಡ್ ಕೋಟಿ ಕೋಟಿ ಲಾಭ ಪಡೆಯಬೇಕಿತ್ತು. ಆದ್ರೆ ಕೊರೊನಾ ಲಾಕ್ ಡೌನ್ ನಿಂದಾಗಿ ಇದು ತಲೆ ಕೆಳಗಾಗಿಸಿದೆ.

ಕೊರೊನಾದಿಂದಾಗಿ 7ವರೆ ತಿಂಗಳು ಬಾಲಿವುಡ್ ಲಾಕ್ ಆಗಿದೆ. ಸಿನಿಮಾ ಮಂದಿ ಕಂಗಾಲಾಗಿದ್ದಾರೆ. ಬಾಲಿವುಡ್ ಗೆ ಏನಿಲ್ಲಾ ಅಂದ್ರು 5000 ಕೋಟಿ ನಷ್ಟು ಆಗಿದೆ. ಇದರಲ್ಲಿ ಯಾರಿಗೆ ಎಷ್ಟೆಷ್ಟು ನಷ್ಟವಾಗಿದೆ ಗೊತ್ತಾ? ಸಿನಿಮಾ ತಯಾರಿಕೆಗೆ ನೂರಾರು ಕೋಟಿ ಹೂಡಿಕೆ ಮಾಡಿದವರಿಗೆ ಅಧಿಕ ಲಾಸ್ ಆಗಿದೆ. ಬಾಲಿವುಡ್ ಪ್ರದರ್ಶಕರಿಗೆ 1500 ಕೋಟಿ ನಷ್ಟ ಆಗಿದೆ. ಮಾತ್ರವಲ್ಲದೇ ದೊಡ್ಡ ಸ್ಟಾರ್ ಗಳಿಂದ ಸಣ್ಣ ಪುಟ್ಟ ನಟ ನಟಿಯರಿಗೂ ಭಾರೀ ಹೊಡೆತ ಬಿದ್ದಿದೆ.

6000 ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಗಳಿವೆ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಇದರಲ್ಲಿ ಬಿಡುಗಡೆಗೊಳ್ಳುತ್ತವೆ.  ಪ್ರತಿ ಸ್ಕ್ರೀನ್ ನಿಂದ 100 ಕೋಟಿ ಲಾಭವಿದೆ. ತಿಂಗಳಿಗೆ ಏನಿಲ್ಲಾ ಅಂದ್ರು 1000 ಕೋಟಿ ವ್ಯವಹಾರ ಮಾಡಲಾಗುತ್ತದೆ. ಆದರೆ 2020 ರಲ್ಲಿ ಬಾಲಿವುಡ್ ಗಳಿಕೆ ಮಾಡಿದ್ದು ಕೇವಲ 780 ಕೋಟಿ ಮಾತ್ರ.

ಹೌದು… ಬಾಲಿವುಡ್ ನಲ್ಲಿ 50 ಕೋಟಿ ಯಿಂದ 500 ಕೋಟಿ ಯವರೆಗೆ ಸಿನಿಮಾ ತಯಾರುತ್ತೆ. ಹೀಗಾಗಿ ಬಾಳಿವುಡ್ ಅಂದ್ರೆ ಸಿನಿಮಾಗಳು ಸಕತ್ ಪವರ್ ಫುಲ್ ಆಗಿರುತ್ತವೆ. ಕಳೆದ 3 ತಿಂಗಳಿನಿಂದ ರಿಲೀಸ್ ಆದ 36 ಸಿನಿಮಾಗಳಿಂದ 780 ಕೋಟಿ ಗಳಿಸಿದೆ. ತಾನಾಜಿ ಮಾತ್ರ ಇದರಲ್ಲಿ ಕೊಂಚ ಸುಧಾರಿತ ಹಣ ಗಳಿಸಿದೆ.

ನಷ್ಟದಿಂದ ಹೊರಬರಲು ಚಿತ್ರರಂಗ ತಯಾರಿ ನಡೆಸುತ್ತದೆ. ಆದರೂ ಸೂಪರ್ ಸ್ಟಾರ್ ಗಳ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ಹೀಗಾಗಿ ಸಿನಿಮಾ ಸ್ಟಾರ್ ಗಳಿಗೂ ಈ ಬಾರಿ ಕರಾಳ ದೀಪಾವಳಿ ಆಚರಿಸುವಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights