ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಿದ್ದರಾಮಯ್ಯ ಹೇಳಿದ್ದೇನು..?

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಸಿದ್ದರಾಮಯ್ಯ.. ಸುಪ್ರೀಂಕೋರ್ಟ್, ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲವೆಂಬ ಆದೇಶವನ್ನ ಭಾಗಶಃ ಎತ್ತಿಹಿಡಿದಿದೆ ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕರ್ನಾಟಕದ ಸ್ಪೀಕರ್ ಅವರ ಆದೇಶವನ್ನ ಭಾಗಶಃ ಎತ್ತಿ ಹಿಡಿದಿದ್ದಾರೆ. ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ, ಅನರ್ಹ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದರು, ನಾವು ಪೆಟಿಷನ್ ಹಾಕಿದ್ದೆವು, ಅದರ ಆಧಾರದ ಮೇಲೆ ವಿಚಾರಣೆ ನಡೆಸಿ ಇಂದು ತೀರ್ಪು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.

ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲ ಎಂದು 17 ಜನರನ್ನೂ ಅನರ್ಹರನ್ನಾಗಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ, ಮೊದಲನೆಯದಾಗಿ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗಿದ್ದರಿಂದ ಅನರ್ಹರರಾಗಿದ್ದಾರೆ. ಎರಡನೆಯದ್ದು ಈ ಅವಧಿಗೆ ಚುನಾವಣೆಗೆ ನಿಲ್ಲಲು ಹೇಳಿದ್ದಾರೆ. ಡೆಮಾಕ್ರಸಿ ಮತ್ತು ಟೆನ್ತ್ ಶೆಡ್ಯೂಲ್​​ನಲ್ಲಿ ರಾಜೀನಾಮೆ ಕೊಡಬಾರದು ಅಂತಿಲ್ಲ, ಆದರೆ ಬಾಹ್ಯ ಒತ್ತಡವಿಲ್ಲದಿದ್ದರೆ ಅವರ ರಾಜೀನಾಮೆಯನ್ನ ಒಪ್ಪುವಂತಿಲ್ಲ ಎಂಬುದನ್ನ ಕೋರ್ಟ್ ಎತ್ತಿಹಿಡಿದಿದೆ ಎಂದಿದ್ದಾರೆ.

ಮನಸೋ ಇಚ್ಛೆ ನಡೆದುಕೊಳ್ಳೋ ಹಾಗಿಲ್ಲ, ಹೀಗಾಗಿ ಸುಪ್ರೀಂ ಕೋರ್ಟ್ ನೈತಿಕತೆ ಪದವನ್ನ ಬಳಸಿದೆ. ನಾನು ಸುಪ್ರೀಂ ಕೋರ್ಟ್​ನ ತೀರ್ಪನ್ನ ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗಡ್ಡ  ಬಿಟ್ಟಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಈ ಹಿಂದೆಯೂ ಬಿಟ್ಟಿದ್ದೆ, ಈಗಲೂ ಬಿಡಬೇಕು ಎನ್ನಿಸಿತು ಅದಕ್ಕೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ನಕ್ಕರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights