ಅತೀ ಹೆಚ್ಚು ಡಿಸ್ಲೈಕ್ ಆದ ಮೋದಿ ಕುರಿತಾದ ಹಾಡು : ಕಮಲಕ್ಕೆ ಮುಳುವಾಯ್ತು ಸಾಂಗ್!

ತಮಿಳುನಾಡಿನಲ್ಲಿ ಮೋದಿ ಕುರಿತಾದ ಹಾಡೊಂದನ್ನ ರಚನೆ ಮಾಡಲಾಗಿದ್ದು ಈ ಹಾಡು ಬಿಜೆಪಿ ಕೈ ಹಿಡಿಯುವುದಕ್ಕಿಂತ ಭಾರಿ ಮುಖಭಂಗವಾಗುವಂತೆ ಮಾಡಿದೆ.

ಮೋದಿ ಸಾಧನೆಗಳನ್ನು ನೆನೆಯುವ, ಹೊಗಳುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಜನ ವೀಕ್ಷಣೆ ಪಡೆದಿದೆಯಾದರೂ ಲೈಕ್ ಗಿಂತ ಡಿಸೈಲ್ ಹೆಚ್ಚಾಗಿದೆ.

ಸಿನಿಮಾದಷ್ಟೇ ರಾಜಕೀಯವನ್ನು ಇಷ್ಟಪಡುವ ತಮಿಳನಾಡಿನ ಜನರನ್ನು ಸೆಳೆಯಲು ಈ ಹಾಡನ್ನು ಸೃಷ್ಟಿಸಲಾಗಿತ್ತು. ಆದರೆ ಇಲ್ಲಾಗಿದ್ದೇ ಬೇರೆ. ಮೋದಿಯವರನ್ನು ಹೊಗಳಿದ ಹಾಡಿಕೆ ಲೈಕ್ ಗಿಂತ ಡಿಸ್ಲೈಕೇ ಹೆಚ್ಚಾಗಿದ್ದು ತಮಿಳುನಾಡು ಬಿಜೆಪಿಗೆ ಪೇಚೆಗೆ ಸಿಲುಕಿದಂತಾಗಿದೆ.

ತಮಿಳರ ಸೊಗಡಿನಂತೆ ಬಿಜೆಪಿ ಪ್ರಚಾರಕ್ಕಾಗಿ ಸಿದ್ದಗೊಡಿರುವುದೇ “ವಾಂಗ ಮೋದಿ ವನಕ್ಕಂ ಮೋದಿ” (“ಕೊಂಗುನಾಡಿಗೆ ಬನ್ನಿ ಮೋದಿ ಕೋಟಿ ಜನ ಇಲ್ಲಿ ನಿಮ್ಮ ಹಿಂದೆ ಇದ್ದಾರೆ”) ಎಂಬ ಹಾಡು. ತಮಿಳರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನಾಯಕರು ಈ ಹಾಡನ್ನು ಸಿದ್ದಪಡಿಸಿ ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣದಲ್ಲಿ ತಮಿಳುನಾಡಿನ ಬಿಜೆಪಿ ಹಿರಿಯ ನಾಯಕರಲ್ಲದೆ ಕರ್ನಾಟಕದ ಮಾಜಿ ಸಚಿವ ಸಿಟಿ ರವಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಆದರೆ, ಈ ಹಾಡು ಇದೀಗ ತಮಿಳುನಾಡಿನಲ್ಲಿ ಭಾರೀ ಟ್ರೋಲ್ಗೆ ಗುರಿಯಾಗುತ್ತಿದೆ.

ಆದರೆ ತಮಿಳುನಾಡಿಗೆ ಮೋದಿ ಬಂದರೆ “ಗೋ ಬ್ಯಾಕ್ ಮೋದಿ ” ಎನ್ನುವ ಹ್ಯಾಶ್ ಟ್ಯಾಗೇ ಹೆಚ್ಚಾಗಿರುತ್ತಿತ್ತು.  ಇದುವರೆಗೂ ಒಂದೇ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸದ ಜನ “ಕೊಂಗುನಾಡಿಗೆ ಬನ್ನಿ ಮೋದಿ ಕೋಟಿ ಜನ ಇಲ್ಲಿ ನಿಮ್ಮ ಹಿಂದೆ ಇದ್ದಾರೆ” ಎನ್ನುವ ಹಾಡನ್ನು ಒಪ್ಪುವುದು ಹೇಗೆ ಸಾಧ್ಯ?  ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಮೋದಿ ವಿರುದ್ಧ ಬಹಿರಂಗವಾಗಿ ಆಕ್ರೋಶ್ ಹೊರಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights