Cricket SA vs India : ‘ವಿರಾಟ್’ ದ್ವಿಶತಕ, ಯಾದವ ಮತ್ತು ಶಮಿ ದಾಳಿಗೆ ತತ್ತರಿಸಿದ ಆಫ್ರಿಕಾ
ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ದ್ವಿಶತಕದ ವೇಗದ ಬೌಲರ್ ಉಮೇಶ್ ಯಾದವ ಮತ್ತು ಮೊಹಮ್ಮದ ಶಮಿ ಅವರ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ನಲ್ಲು ತತ್ತರಿಸಿ ಹೊಗಿದೆ…
ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಅಬ್ಬರಿಸಿರುವ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕೊಹ್ಲಿ ಗಳಿಸಿದ ಅಜೇಯ 254 ರನ್ ಹಾಗೂ ಕೇವಲ 9 ರನ್ನುಗಳಿಮದ ಶತಕದ ಗೌರವ ತಪ್ಪಿಸಿಕೊಂಡ ಜಡೇಜಾ ಅವರ ನೆರವಿನಿಂದ ಭಾರತ ತನ್ನ ಮೊದಲ ಸರದಿಯಲ್ಲಿ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಪಂದ್ಯದ 2ನೇ ದಿನದಾಟದ ಕೊನೆಗೆ ಆಫ್ರಿಕೆಯ 36 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿತ್ತು. ಡಿಬ್ರುಯಿನ್ 20 ರನ್ ಗಳಿಸಿ ಆಡುತ್ತಿದ್ದಾರೆ. ಉಮೇಶ್ ಯಾದವ್ 2 ಹಾಗೂ ಮೊಹಮದ್ ಶಮಿ ಒಂದು ವಿಕೆಟ್ ಕಿತ್ತರು.
ವಿರಾಟ್ ಕೊಹ್ಲಿ 81ನೇ ಟೆಸ್ಟ್ ನಲ್ಲಿ ತಮ್ಮ 7ನೇ ದ್ವಿಶತಕ ಬಾರಿಸಿದರು. ವೀರೇಂದ್ರ ಸೆಹ್ವಾಗ್ 104 ಪಂದ್ಯಗಳಲ್ಲಿ 6 ದ್ವಿಶತಕ ಬಾರಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯದಲ್ಲಿ 6ನೇ ದ್ವಿಶತಕ ಬಾರಿಸಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ದ್ವಿಶತಕ ಸಿಡಿಸಿದ ಸಾಧನೆ ಮಾಡಿರುವ ಅಗ್ರ ಆಟಗಾರರ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್(12), ಕುಮಾರ ಸಂಗಕ್ಕಾರ(11) ಮತ್ತು ಬ್ರಿಯಾನ್ ಲಾರಾ(9) ಮೊದಲ ಮೂರು ಸ್ಥಾಣ ಅಲಂಕರಿಸಿದ್ದಾರೆ.