Fact Check: ದೆಹಲಿಯ ಪತ್ಪರ್ ಗಂಜ್ ನಲ್ಲಿ ಮುಸ್ಲಿಮರು ಸಾರ್ವಜನಿಕವಾಗಿ ನಮಾಜ್ ಮಾಡುತ್ತಿರುವ ವಿಡಿಯೋ ಎಷ್ಟು ಹಳೆಯದ್ದು?

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ನಿಮಿಷದ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದು ಮುಸ್ಲಿಮರ ಗುಂಪೊಂದು ಬೀದಿಯಲ್ಲಿ ಪ್ರಾರ್ಥಿಸುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ರೆಕಾರ್ಡಿಂಗ್ ಮಾಡಿರುವ ವ್ಯಕ್ತಿ, “ಈ ಜನರು ಕೊರೊನಾಗೆ ಹೆದರುವುದಿಲ್ಲವೇ? ಇದನ್ನು ನಿಲ್ಲಿಸಬೇಕು” ಎಂದು ಹೇಳುತ್ತಾರೆ. ವಿಡಿಯೊದ ಕೊನೆಯ 20 ಸೆಕೆಂಡುಗಳಲ್ಲಿ, ಪೂರ್ವ ದೆಹಲಿ ಜಿಲ್ಲೆಯ ಪತ್ಪರ್ ಗಂಜ್ ನಲ್ಲಿರುವ ಮಸೀದಿಯ ಬಳಿ ಇದು ನಡೆದಿದೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಅವರು ಪೊಲೀಸರನ್ನು ಕೂಡ ತೋರಿಸಿ “ಪೊಲೀಸರು ಸಹ ಎಚ್ಚರದಿಂದಿದ್ದಾರೆ ” ಎಂದು ಹೇಳುತ್ತಾರೆ.

ಮೇ 13ರಂದು ಹಲವಾರು ಟ್ವಿಟ್ಟರ್ ಬಳಕೆದಾರರು ಈ ವೈರಲ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ – ‘ಹಿಂದೂ ಹೋರಾಟ ಸಮಿತಿ’ ಉಪಾಧ್ಯಕ್ಷ ದೀಕ್ಷಾ ಕೌಶಿಕ್ (ಆರ್ಕೈವ್ ಲಿಂಕ್), ಬಿಜೆವೈಎಂ ತೆಲಂಗಾಣ ವಕ್ತಾರ ರೂಪ್ ದಾರಕ್ (ಆರ್ಕೈವ್ ಲಿಂಕ್) ಮತ್ತು ಟ್ವಿಟರ್ ಹ್ಯಾಂಡಲ್ @effucktivehumor (ಆರ್ಕೈವ್ ಲಿಂಕ್).

ದಾರಕ್ ಅವರ ಟ್ವೀಟ್ ಅನ್ನು 1,500 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ ಮತ್ತು ವೀಡಿಯೊವನ್ನು 36,000 ಬಾರಿ ವೀಕ್ಷಿಸಲಾಗಿದೆ. ಕೌಶಿಕ್ ಅವರ ಟ್ವೀಟ್ ಅನ್ನು 1,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.

ಹಾಗೆಯೇ, ಹಲವಾರು ಫೇಸ್‌ಬುಕ್ ಬಳಕೆದಾರರು ಹಿಂದಿ ಸಂದೇಶದೊಂದಿಗೆ ಈ ವೈರಲ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಫೇಸ್‌ಬುಕ್ ಪುಟ ‘ಮೋದಿನಾಮಾ’ ದಲ್ಲಿ, “ಇದು ನವದೆಹಲಿಯ ಪತ್ಪರ್ ಗಂಜ್ ಮಸೀದಿಯಮ ಪರಿಸ್ಥಿತಿ. ಇಲ್ಲಿಕಾನೂನನ್ನು ಹಾಡುಹಗಲಿನಲ್ಲೇ ಮುರಿದಿದ್ದಾರೆ. ಅಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಲಹೆಗಳನ್ನು ಕೇಳುತ್ತಿದ್ದಾರೆ (ಕೊರೊನ ವೈರಸ್ ಅನ್ನು ನಿಭಾಯಿಸಲು)” ಎಂದು ಬರೆದಿದ್ದಾರೆ.

ಈ ಪೋಸ್ಟ್ಅನ್ನು 4,000 ಬಾರಿ ಹಂಚಿಕೊಳ್ಳಲಾಗಿದೆ ಮತ್ತು 1.2 ಲಕ್ಷ ಬಾರಿ ವೀಕ್ಷಿಸಲಾಗಿದೆ. (ಆರ್ಕೈವ್ಲಿಂಕ್) ವಾಟ್ಸಾಪ್ (+917600011160) ಮತ್ತು ಅಧಿಕೃತ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿ ಇದನ್ನು ಪರಿಶೀಲಿಸಲು ಆಲ್ಟ್ ನ್ಯೂಸ್ ಹಲವಾರು ವಿನಂತಿಗಳನ್ನು ಸ್ವೀಕರಿಸಿದೆ.

ಫ್ಯಾಕ್ಟ್ ಚೆಕ್:  ಹಳೆಯ ವೀಡಿಯೊವನ್ನು ಇತ್ತೀಚಿನದ್ದೆಂದು ಹೇಳಲಾಗಿದೆ

ಆಲ್ಟ್ ನ್ಯೂಸ್ ಟ್ವಿಟ್ಟರ್ ನಲ್ಲಿ ‘ಪತ್ಪರ್ ಗಂಜ್’ ಎಂಬ ಕೀವರ್ಡ್ ಹುಡುಕಾಟವನ್ನು ನಡೆಸಿತು. ಆಗ ಅದೇ ವೀಡಿಯೊದ ಪೂರ್ತಿ ಆವೃತ್ತಿಯನ್ನು ಮಾರ್ಚ್ 20 ರಂದು ಬಿಜೆಪಿ ದೆಹಲಿಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಭಿಷೇಕ್ ಧುಬೆ  ಅವರು ಪೋಸ್ಟ್ ಮಾಡಿದ್ದಾರೆ ಎಂದು ಪತ್ತೆ ಹಚ್ಚಲಾಗಿದೆ. ವಿಡಿಯೋದ 16 ನೇ ಸೆಕೆಂಡಿನಲ್ಲಿ, ಕ್ಯಾಮೆರಾ ಹಿಂದಿನ ವ್ಯಕ್ತಿ “ಇಂದು, 20ನೇ ತಾರೀಕಿನಂದು…” ಎಂದುಹೇಳುವುದನ್ನು ಕೇಳಬಹುದು.

ಕೊರೊನ ವೈರಸ್ ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 25 ರಿಂದ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸುವ ನಾಲ್ಕು ದಿನಗಳ ಮೊದಲು ಹಾಗೂ ಜನತಾ ಕರ್ಫ್ಯೂಗೆ ಒಂದು ದಿನ ಮೊದಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ, ದೆಹಲಿ ಸರ್ಕಾರ ಮಾರ್ಚ್ 16 ರಂದು 50 ಕ್ಕೂ ಹೆಚ್ಚು ಜನರ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕೂಟಗಳನ್ನು ನಿಷೇಧಿಸಿತ್ತು ಎಂಬುದು ಗಮನಿಸಬೇಕಾದ ಅಂಶ.

ವೈರಲ್ ವಿಡಿಯೊವನ್ನು ಪೋಸ್ಟ್ ಮಾಡಿದ ಟ್ವಿಟರ್ ಬಳಕೆದಾರರಿಗೆ ಮೇ 11 ರಂದು ಪೂರ್ವ ದೆಹಲಿಯ ಡಿಸಿಪಿ ಟ್ವಿಟ್ಟರ್ ಖಾತೆ  ಉತ್ತರಿಸಿದೆ. “ಇದು ಸಂಪೂರ್ಣವಾಗಿ ಸುಳ್ಳು. ವದಂತಿಯನ್ನು ಹರಡುವ ಕಾರಣಕ್ಕೆ ದುರುದ್ದೇಶದ ಹಳೆಯ ವಿಡಿಯೊವನ್ನು ಬಳಸಲಾಗುತ್ತಿದೆ” ಎಂದು ಪೊಲೀಸರು ಬರೆದಿದ್ದಾರೆ.

ಹೀಗೆ, ನವದೆಹಲಿಯಲ್ಲಿ ಮುಸ್ಲಿಮರು ಸಾರ್ವಜನಿಕವಾಗಿ ಪ್ರಾರ್ಥನೆ ಮಾಡುತ್ತಿರುವ ಸುಮಾರು 2 ತಿಂಗಳ ಹಳೆಯ ವಿಡಿಯೊವನ್ನು ಇತ್ತೀಚಿನ ಘಟನೆಯಾಗಿ ಸುಳ್ಳು ಸುಳ್ಳೇ ತೋರಿಸಲಾಗಿದೆ.

(ಕೃಪೆ): ಆಲ್ಟ್ ನ್ಯೂಸ್

(ಕನ್ನಡಕ್ಕೆ): ದಿವ್ಯ ಶರ್ಮ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights