ಅಕ್ರಮ ಬೆಡ್ ಬುಕ್ಕಿಂಗ್ ಮಾಫಿಯಾ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ!

ಕೊರೊನಾದಿಂದಾಗಿ ಅದೆಷ್ಟೋ ಜನರಿಗೆ ಸಮಯಕ್ಕೆ ಸರಿಯಾಗಿ ಬೆಡ್ ಸಿಗುತ್ತಿಲ್ಲ, ಪ್ರಾಣ ಉಳಿಸಿಕೊಳ್ಳಲು ಆಕ್ಸಿಜನ್ ಸಿಗುತ್ತಿಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಇದೆಲ್ಲದರಿಂದ ಜನ ರೋಸಿ ಹೋಗಿರುವಾಗ ಸಂಸದ ತೇಜಸ್ವಿ ಸೂರ್ಯ ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಫಿಯಾ ಬಯಲಿಗೆಳೆದಿದ್ದಾರೆ.

ಹೌದು… ಕೊರೊನಾ ಬಿಕ್ಕಟ್ಟಿನ ಮಧ್ಯೆ ಜನರ ಜೀವನದ ಜೊತೆ ಆಟಾಡುತ್ತಿರುವ ಅಕ್ರಮ ಬೆಡ್ ಬುಕ್ಕಿಂಗ್ ಮಾಫಿಯಾ ಬಯಲಿಗೆಳೆದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಬಿಎಂಪಿ ಬೆಡ್ ಬುಕ್ಕಿಂಗ್ ವೆಬ್ ಸೈಟ್ ಗಳಲ್ಲಿ ಬೆಡ್ ಗಳು ಭರ್ತಿಯಾಗಿರುವುದು ತೋರಿಸುತ್ತಿದೆ. ಆದರೆ ಬೆಡ್ ಅಗತ್ಯವಿಲ್ಲದೇ ಇರುವ ಮನೆಯಲ್ಲಿಯೇ ಐಸೊಲೇಷನ್ ಆಗಿರುವವರ, ಮೃತಪಟ್ಟವರ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವವರ ಹೆಸರಿನಲ್ಲಿ ಹಣ ಪಡೆದು ತಮಗೆ ಬೇಕಾಗಿರುವವರಿಗೆ ಅಕ್ರಮವಾಗಿ ಬೆಡ್ ಬುಕ್ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಮಾಫಿಯಾ” ಎಂದು ತೇಜಸ್ವಿ ಸೂರ್ಯ ಸಾಕ್ಷ್ಯ ಸಮೇತವಾಗಿ ಬಹಿರಂಗಗೊಂಡಿದೆ.

ಈ ಮಾಫಿಯಾದಿಂದ ನಿಜವಾಗಿಯೂ ಅಗತ್ಯವಿರುವ ಜನರಿಗೆ ಬೆಡ್ ಸಿಗುತ್ತಿಲ್ಲ. ಇದರಿಂದಾಗಿ ಜನ ಸಾಯುತ್ತಿದ್ದಾರೆ. ಇದರಿಂದ ಕ್ಷಮೆ ಕೇಳಿದ್ದಾರೆ. ಬಿಬಿಎಂಪಿಯಲ್ಲಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿಯನ್ನು ಭೇಟಿಯಾಗುವುದಾಗಿ ಚರ್ಚಿಸುವುದಾಗಿ ಹೇಳಿದ್ದಾರೆ.

ನಗರದಲ್ಲಿ ಈವರೆಗೆ ಪ್ರಭಾವಿಗಳಿಮದಲೇ 4,065 ಬೆಡ್ ಬುಕ್ ಆಗಿದೆ. ಇದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮಿಲಾಗಿದ್ದಾರೆ. ಈ ವಾರ್ ರೂಮ್ ಗಳಿಗೆ ಇಲ್ಲಿಯವರೆಗೂ ಪ್ರವೇಶಿಸಲು ಅವಕಾಶ ನೀಡಲ್ಲ. ತಪಾಸಣೆಗೂ ಬಿಡದಂತಹ ವಾತಾವರಣವಿದೆ ಎಂದು ತೇಜಸ್ವಿ ಗಂಭೀರ ಆರೋಪ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights