Lock down : ಕ್ವಾರಂಟೀನಿನಲ್ಲಿ 3 ಲಕ್ಷ ಜನ, ವಿಸ್ತರಣೆ ಹಿಂದಿನ ಕಾರಣ – details ಇಲ್ಲಿದೆ..

ದೇಶಾದ್ಯಂತ ಕೊರೋನಾ ವೈರಸ್ ತಡೆ ಸಂಬಂಧಿ ಲಾಕ್ಡೌನ್ ವಿಸ್ತರಣೆಗೆ ನಿಜವಾದ ಕಾರಣ ಏನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ನಾನಾ ಕಾರಣಗಳನ್ನು ತೇಲಿಬಿಡಲಾಗಿದೆ. ಆದರೂ ಪ್ರಧಾನಿ ಮೋದಿ ಅವರ ಈ ಕಠಿಣ ನಿಧಾರದ ಹಿಂದೆ ಒಂದು ಬಲವಾದ ಕಾರಣ ಮತ್ತು ಆತಂಕ ಇದೆ ಎಂಬುದು ಬಯಲಾಗಿದೆ.

ದೇಶದಲ್ಲಿ ಸದ್ಯ 10 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು, 300ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಆದರೆ ಇದೇ ವೇಳೆ 3 ಲಕ್ಷಕ್ಕೂ ಹೆಚ್ಚು ಮಂದಿ ತನಿ ನಿಗಾದಲ್ಲಿದ್ದು (ಕ್ವಾರಂಟೀನ್) ಅವರ ವರದಿ ಏನಾಗಬಹುದು ಎಂಬ ಆತಂಕ ಸರಕಾರವನ್ನು ಕಾಡುತ್ತಿದೆ.

ತ್ರಿವ್ರ ನಿಗಾದಲ್ಲಿರುವ ಶಂಕಿತರ ಪೈಕಿ ಎಷ್ಟು ಮಂದಿಗೆ ಸೋಂಕು ದೃಢಪಡಬಹುದು ಎಂಬುದರ ಮೇಲೆ ಕೊರೋನಾ ವಿರುದ್ಧದ ಸಮರದ ಯಶಸ್ಸು ಅಡಗಿದೆ. ಕ್ವಾರಂಟೀನ್ನಲ್ಲಿರುವವರ ಪೈಕಿ ಸೋಂಕಿತರ ಸಂಖ್ಯಾ ಸ್ಫೋಟ ಆಗದಂತೆ ತಡೆಯುವ, ಇನ್ನೂ ಹೆಚ್ಚು ಮಂದಿಯನ್ನು ತಪಾಸಣೆಗೆ ಗುರಿ ಪಡಿಸುವ ಉದ್ದೇಶದಿಂದಲೇ ಲಾಕ್ಡೌನ್ ವಿಸ್ತರಣೆ ಅನಿವಾರ್‍ಯವಾಯಿತು ಎನ್ನಲಾಗಿದೆ.

ಕ್ವಾರಂಟೀನ್ನಲ್ಲಿ ಇರುವವರ ಪೈಕಿ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಅಂದರೆ 66 ಸಾವಿರಕ್ಕೂ ಹೆಚ್ಚಿನ ಮಂದಿ ಇದ್ದಾರೆ. ನಂತರದ ಸ್ಥಾನದಲ್ಲಿ 56 ಸಾವಿರಕ್ಕೂ ಹೆಚ್ಚು ಜನರನ್ನು ಕ್ವಾರಂಟೀನ್ನಲ್ಲಿ ಇರಿಸಿರುವ ಉತ್ತರಾಖಂಡ ರಾಜ್ಯ ಇದೆ. ಇದೇ ರೀತಿ ವಿವಿಧ ರಾಜ್ಯಗಳಲ್ಲಿ ಈ ರೀತಿಯ ನಿರೀಕ್ಷಣೆಯಲ್ಲಿರುವವರ ಬಗ್ಗೆ ಕೆಂದ್ರ ಸರಕಾರ ಸಂಪೂರ್ಣ ಮಾಹಿತಿ ತರಿಸಿಕೊಂಡಿದ್ದು ಅದರ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ.

ಕಳೆದ 21 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿಉರವ ಕೊರೋನಾ ಲಾಕ್‌ಡೌನ್‌ ಅನ್ನು ಇನ್ನೂ 19 ದಿನಗಳ ಕಾಲ ವಿಸ್ಗರಿಸಲಾಗಿದೆ. ಇನ್ನೂ 19 ದಿನ ದೇಶಾದ್ಯಂತ ಲಾಕ್‌ಡೌನ್ ಇದ್ದರೂ ಕಠಿಣ ನಿಯಮಗಳನ್ನು ಪಾಲಿಸುವ ರಾಜ್ಯಗಳಲ್ಲಿ ಇದೇ 20ರ ನಂತರ ಕೊಂಚ ಸಡಿಲಿಕೆಗೆ ಅವಕಾಶ ನೀಡಲಾಗುವುದು..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights