ಇಂದು ಮಹಾರಾಷ್ಟ್ರ ಫಲಿತಾಂಶ : ಬಿಜೆಪಿ ಜಯಗಳಿಸುವ ವಿಶ್ವಾಸದಲ್ಲಿ ಲಡ್ಡುಗಳು, ಹೂವು ಮಾಲೆಗಳಿಗೆ ಆರ್ಡರ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸದಲ್ಲಿರುವುದರಿಂದ ಬುಧವಾರವೇ ಅಲ್ಲಿನ ರಾಜ್ಯ ಬಿಜೆಪಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 5 ಸಾವಿರಕ್ಕೂ ಅಧಿಕ ಲಡ್ಡುಗಳು ಹಾಗೂ ಅನೇಕ ಹೂವಿನ ಮಾಲೆಗಳಿಗೆ ಆರ್ಡರ್ ನೀಡಿದೆ.

ಅಲ್ಲದೆ ಚುನಾವಣಾ ಫಲಿತಾಂಶ ವೀಕ್ಷಣೆಗೆ ಮುಂಬೈನಲ್ಲಿರುವ ರಾಜ್ಯ ಬಿಜೆಪಿಯ ಕೇಂದ್ರ ಕಚೇರಿ ಬಳಿ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ಫಲಿತಾಂಶ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮತ ಎಣಿಕೆ ಒಂದು ಹಂತ ತಲುಪುವ ಹೊತ್ತಿಗೆ ಅಂದರೆ ಬೆಳಗ್ಗೆ 10 ಗಂಟೆಯ ನಂತರ ದಕ್ಷಿಣ ಮುಂಬೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಮತ ಎಣಿಕೆಯ ಫಲಿತಾಂಶಕ್ಕನುಗುಣವಾಗಿ ಮಧ್ಯಾಹ್ನದ ಹೊತ್ತಿಗೆ ಸಂಭ್ರಮಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ನಾವು ಅಧಿಕಾರಕ್ಕೇರುತ್ತೇವೆ ಎಂಬುದು ನಮಗೆ ತಿಳಿದಿದೆ. ಆದರೆ ಸಂಖ್ಯೆಗಳ ಬಗ್ಗೆ ಮಾತ್ರ ಕುತೂಹಲವಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Mumbai: BJP state office decorated ahead of counting of votes for
Mumbai: Counting of votes for starts soon, ladoos ready at BJP state office
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights