ಕಾರವಾರ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ : ನಾಳೆ ಕಾರವಾರ ಬಂದ್…!

ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವಿರೋದ ಇನ್ನಷ್ಟು ತೀವ್ರವಾಗುತ್ತಿದೆ..ಇಷ್ಟು ದಿನ ರವೀಂದ್ರನಾಥ ಕಡಲತೀರಕ್ಕೆ ಮತ್ತು ಮೀನುಗಾರಿಕೆಗೆ ಹಾನಿಯಾಗಲ್ಲ ಎಂದು ಹೋರಾಟದ ದಿಕ್ಕುತಪ್ಪಿಸುತ್ತಿದ್ದ ಬಂದರು ಇಲಾಖೆ ಕೊನೆಗೂ ಇವತ್ತು ಕಡಲತೀರದ ಮದ್ಯೆಯೇ ಕಲ್ಲು ಹಾಕಿ ಕಾಮಗಾರಿ ಆಂರಂಭ ಮಾಡಿದೆ..ಬಂದರು ಇಲಾಖೆಯ ಈ ಧೋರಣೆಗೆ ಮೀನುಗಾರರ ಹೋರಾಟ ಇನ್ನಷ್ಟು ಬಲಗೊಳ್ಳುತ್ತಿದೆ..

  

ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧದ ಹೋರಾಟ ದಿನೆದಿನೆಕ್ಕೂ ಬಳಗೊಳ್ಳುತ್ತಿದೆ..ಇಷ್ಟು ದಿನ ಬಂದರು ಇಲಾಖೆ ಮೀನುಗಾರರ ಹೋರಾಟವನ್ನ ಹತ್ತಿಕ್ಕಲು ಮೀನುಗಾರಿಕೆಗೆ ಮತ್ತು ರವೀಂದ್ರನಾಥ ಕಡಲತೀರಕ್ಕೆ ಹಾನಿಯಾಗಲ್ಲ ಎಂದು ಬಹಿರಂಗ ಹೇಳಿಕೆ ನೀಡಿತ್ತು..ಆದ್ರೆ ಈ ಮದ್ಯೆ ಇವತ್ತು ಬಂದರು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೆ ಕಾರವಾರ ರವೀಂದ್ರನಾಥ ಕಡಲತೀರದಲ್ಲೆ ಕಲ್ಲು ಹಾಕಿ ಕಾಮಗಾರಿ ವೇಗ ಇನ್ನಷು ಹೆಚ್ಚಿಸಿದ್ದಾರೆ..ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಮೀನುಗಾರರು ಇವತ್ತು ಕಾಮಗಾರಿಯನ್ನ ತಾತ್ಕಾಲಿಕವಾಗಿ ನಿಲ್ಲಿಸಿ ಆಕ್ರೋಷ ವ್ಯಕ್ತ ಪಡಿಸಿದ್ರು..ಜೊತೆಗೆ ಕಾಮಗಾರಿ ಜಾಗದಲ್ಲೇ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ಸಮಸ್ಯೆ ತೋರಿಸಿದ್ರು…

ಮೀನುಗಾರರ ದಿಕ್ಕು ತಪ್ಪಿಸುತ್ತಿರುವ ಬಂದರು ಇಲಾಖೆ

ಇನ್ನೂ ಕಳೆದ ಎರಡು ದಿನದಿಂದ ಬಂದರು ವಿಸ್ತರಣೆ ವಿರೋಧಿಸಿ ಕಡಲತೀರದ ರಕ್ಷಣೆಗಾಗಿ ಮೀನುಗಾರರು ತಮ್ಮ ಮೀನುಗಾರಿಕೆ ಸ್ಥಗಿತಗೊಳಿಸಿ ಮತ್ತು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿದ್ದಾರೆ..ಈ ತೀವ್ರ ಹೋರಾಟದ ಮದ್ಯೆಯೂ ಬಂದರು ಇಲಾಖೆ ತನ್ನ ಕಾಮಗಾರಿಯ ವೇಗ ಹೆಚ್ಚಿಸಿಕೊಂಡಿದ್ದು ಮೀನುಗಾರರ ಆಕ್ರೋಷಕ್ಕೆ ಕಾರಣವಾಯ್ತು..ಈಗಾಗಲೆ 12 ಮೀನುಗಾರಿಕಾ ಕಡಲತೀರವನ್ನ ಕೇಂದ್ರಕ್ಕೆ ಬಿಟ್ಟುಕೊಟ್ಟ ಮೀನುಗಾರರು ಸಾಗರಾಮಾಲ ಯೋಜನೆಯಡಿ ಈ ಕಡಲತೀರವನ್ನ ಯ್ಯಾವುದೆ ಕಾರಣಕ್ಕೂ ಬಿಡಬಾರದೆಂದು ಹೋರಾಟದ ಕಿಚ್ಚು ಬಲಗೊಳಿಸುತ್ತಿದ್ದಾರೆ..ಇಷ್ಟು ದಿನ ಕಡಲತೀರಕ್ಕೆ ಸಮಸ್ಯೆ ಆಗಲ್ಲ ಎನ್ನುತ್ತಿದ್ದ ಬಂದರು ಇಲಾಖೆ ಇವತ್ತು ಕಡಲತೀರದಲ್ಲೆ ಹಾನಿ ಆಗುವ ಹಾಗೆ ಕಾಮಗಾರಿ ಪ್ರಾರಂಭಿಸಿದ್ದು ಕಡಲತೀರ ಕಳೆದುಕೊಳ್ಳುವ ಆತಂಕ ಗಟ್ಟಿ ಆಗುತ್ತಿದೆ..

ನಾಳೆ ಕಾರವಾರ ಬಂದ್

ಒಟ್ಟಾರೆ ದಿನೆದಿನೆಕ್ಕೂ ಹೋರಾಟದ ಕಿಚ್ಚನ್ನ ಬಲಗೊಳಿಸುತ್ತಿರುವ ಕಾರವಾರದ ಮೀನುಗಾರರು ಕಡಲತೀರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ..ನಾಳೆ ಕಾರವಾರ ಬಂದ್ ಮಾಡಲಿದ್ದು ಹೋರಾಟದ ಕಿಚ್ಚು ಇನ್ನಷ್ಟು ಬಲವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights