ಕೆ.ಆರ್ ಪೇಟೆಯಲ್ಲಿ ಜೋರಾದ ಬೆಟ್ಟಿಂಗ್ ಭರಾಟೆ : ಹಣದ ಜೊತೆಗೆ ವಾಹನ, ಸಾಕು ಪ್ರಾಣಿಗಳು ಪಣಕ್ಕೆ..!

ಮಂಡ್ಯ ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆ ಮತದಾನ ಮುಗಿದ ಹಿನ್ನೆಲೆಯಲ್ಲಿ  ಬೆಟ್ಟಿಂಗ್ ಭರಾಟೆ ಜೋರಾಗಿದೆ.

ಹೌದು.. ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪರ ಬೆಟ್ಟಿಂಗ್ ಆಡಲಾಗುತ್ತಿದೆ.  ಅರಳಿಕಟ್ಪೆ, ಟೀ ಸ್ಟಾಲ್, ಹೋಟೆಲ್ ಗಳಲ್ಲಿ ರಾಜಕೀಯದ್ದೇ ಚರ್ಚೆ ಮಾಡುತ್ತಿರುವ ಬೆಟ್ಟಿಂಗ್ ಪ್ರೇಮಿಗಳು  ಜೆಡಿಎಸ್ ಪರ 1000 ರೂ. ಕಟ್ಟಿದ್ರೆ, ಬಿಜೆಪಿ ಅಭ್ಯರ್ಥಿ ಪರ 700 ರೂಪಾಯಿ ಹಣ ಕಟ್ಟುತ್ತಿದ್ದಾರೆ. ಹಣದ ಜೊತೆಗೆ ವಾಹನ, ಸಾಕು ಪ್ರಾಣಿಗಳು ಪಣಕ್ಕೆ ಇಡಲಾಗುತ್ತಿದೆ. ಕಾರು, ಬೈಕ್, ಟ್ರ್ಯಾಕ್ಟರ್, ಕುರಿ, ಕೋಳಿ, ಎಮ್ಮೆ, ಹಸುಗಳನ್ನ ಕೂಡ ಪಣಕ್ಕಿಟ್ಟು ಬೆಟ್ಟಿಂಗ್ ಆಡಲಾಗುತ್ತಿದೆ.

ಪೊಲೀಸರ ಕಣ್ತಪ್ಪಿಸಿ ವ್ಯವಸ್ಥಿತವಾಗಿ ಬಾಜಿ ಕೆ ಆರ್ ಪೇಟೆಯಲ್ಲಿ ನಡೆಯುತ್ತಿದೆ.  ಬಾಜಿ ಕಟ್ಟೋದು ಕಾನೂನು ಬಾಹಿರವಾಗಿದ್ರು ಕೆ.ಆರ್.ಪೇಟೆಯಲ್ಲಿ ಬಾಜಿ ಭರಾಟೆ ಜೋರಾಗಿದೆ. ಮಂಡ್ಯ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಗೆಲ್ಲೋ ವಿಶ್ವಾಸದಲ್ಲಿ ಬಿಜೆಪಿ ಇರೋದ್ರಿಂದ ಜೊತೆಗೆ ಮೊದಲ ಬಾರಿಗೆ ಜೆಡಿಎಸ್, ಕಾಂಗ್ರೆಸ್ ಗೆ ಸಮಾನವಾಗಿ ಬಿಜೆಪಿ ಫೈಟ್ ನಡೆಸುತ್ತಿದ್ದರಿಂದ  ಗೆಲ್ಲೋ ಅಭ್ಯರ್ಥಿ ಯಾರೆಂಬ ಚರ್ಚೆ ಬಲು ಜೋರಾಗಿದೆ.

ಜೆಡಿಎಸ್, ಬಿಜೆಪಿ ಅಭ್ಯರ್ಥಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮಂಕಾದ ಕಾಂಗ್ರೆಸ್ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟೋರ ಸಂಖ್ಯೆ ವಿರಳವಾಗಿದೆ. ಜೆಡಿಎಸ್- ಬಿಜೆಪಿ ಪರವೇ ಬೆಟ್ಟಿಂಗ್ ಫೈಟ್ ಹೆಚ್ಚಾಗಿದೆ. ಒಟ್ಟಿನಲ್ಲಿ ಇಷ್ಟೆಲ್ಲಾ ಬೆಟ್ಟಿಂಗ್ ಸದ್ದು ಮಾಡುತ್ತಿರುವ ಕೆ.ಆರ್ ಪೇಟೆಯಲ್ಲಿ ಕಮಲ ಅರಳುತ್ತಾ ಇಲ್ಲಾ…? ಅಥವಾ ತೆನೆ ಹೊತ್ತು ಮಹಿಳೆ ಮುಂದೆ ಬರ್ತಾಳಾ..? ಕೈ ಜಾದು ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights