ಕೆಲಸದ ಬೇಡಿಕೆ ಇಟ್ಟ ಕಿರುತೆರೆಯ ಪುಟ್ಟಗೌರಿ : ಸಖತ್ ವೈರಲ್ ಆಯ್ತು ಪೋಸ್ಟ್..

ಲಾಕ್ ಡೌನ್ ನಿಂದಾಗಿ ಸಿನಿಮಾ ರಂಗಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಸಿನಿಮಾ, ಶೂಟಿಂಗ್ ಹೀಗೇ ಅನೇಕ ಕೆಲಸಗಳನ್ನು ನೆಚ್ಚಿಕೊಂಡಿದ್ದ ಜನರ ಆರ್ಥಿಕ ಸ್ಥಿತಿ ಹೇಳತೀರದಂತಾಗಿದೆ. ಸಿನಿಮಾಗಳು ಮಾತ್ರವಲ್ಲದೇ ಕಿರುತೆರೆ ಧಾರವಾಹಿಗಳು ಕೂಡ ಶೂಟಿಂಗ್ ನಿಲ್ಲಿಸಿ ಧಾರವಾಹಿಗಳನ್ನು ಮರುಪ್ರಸಾರ ಮಾಡುತ್ತಿದ್ದಾರೆ. ಹೀಗಾಗಿ ಕಲಾವಿದರಿಗೀಗ ಯಾವುದೇ ಕೆಲಸವಿಲ್ಲ. ಕಿರುತೆರೆಯ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಇದ್ದಕ್ಕಿದ್ದಂತೆ ಕೆಲಸ ಕೇಳಿಕೊಂಡು ಪೋಸ್ಟ್‌ ಮಾಡಿದ್ದಾರೆ.

ಹೌದು… ಕಿರುತೆರೆಯ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‌ ಬಳಿಕ ರಾಜಹಂಸ ಚಿತ್ರದ ಮೂಲಕ ಹಿರಿತೆರೆಗೂ ನಾಯಕ ನಟಿಯಾಗಿ ಪರಿಚಯವಾಗಿದ್ದರು. ಲಾಖ್ ಡೌನ್ ನಿಂದಾಗಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ನಟಿ ರಂಜನಿ ರಾಘವನ್‌ ಇದೀಗ ಮೆನಯಲ್ಲೇ ಕಾಲ ಕಳೆಯುವಂತಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟಿಟಿವ್‌ ಆಗಿರುವ ರಂಜನಿ, ಆಗಾಗ ಪೋಸ್ಟ್‌ ಹಾಕುತ್ತಿರುತ್ತಾರೆ. ಇದೀಗ ರಂಜನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್‌ ಒಂದಷ್ಟು ಸದ್ದು ಮಾಡುತ್ತಿದೆ. ಹೌದು, ರಂಜನಿ ಇದ್ದಕ್ಕಿದ್ದಂತೆ ಕೆಲಸ ಕೇಳಿಕೊಂಡು ಪೋಸ್ಟ್‌ ಮಾಡಿದ್ದಾರೆ.

ಈ ಹಿಂದೆ ಪದವಿ ಮುಗಿಯುತ್ತಿದ್ದಂತೆ ರಂಜನಿ ರಾಘವನ್‌ ಅವರು ತಮ್ಮ ಪದವಿ ಪ್ರಮಾಣ ಪತ್ರವನ್ನು ಫೇಸ್ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರಂತೆ. ಇದೀಗ ಅದನ್ನು ಎಫ್‌ಬಿ ನೆನಪಿಸಿದೆ. ಮೂರು ವರ್ಷಗಳ ಹಿಂದಿನ ಪೋಸ್ಟ್‌ ನ್ನು ಎಫ್‌ಬಿ ನೆನಪಿಸಿತು. ನಾನು ಕಾನ್ವಕೇಶನ್‌ ಪಡೆದು ಮೂರು ವರ್ಷಗಳಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲಿ ಯಾವ್ದಾದ್ರೂ ಕೆಲಸ ಖಾಲಿ ಇದ್ಯಾ? ಎಂದು ಕೇಳಿದ್ದಾರೆ. ಸದ್ಯ ರಂಜನಿ ಹಾಕಿರುವ ಪೋಸ್ಟ್‌ಗೆ ಅಭಿಮಾನಿಗಳು ಹತ್ತಾರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights