ಕೊರೊನಾ ಕುರಿತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಕಿವಿಮಾತು

ಜಗತ್ತಿನಾದ್ಯಂತ ವ್ಯಾಪಿಸಿಸಿರುವ, ಜನರನ್ನು ಭಯಭೀತರನ್ನಾಗಿಸಿರುವ ಕೊರೋನಾವೈರಸ್ ಗೆ ಭಾರತದಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.  ಕರೋನಾ ವೈರಸ್‌ ಹರಡುವಿಕೆಗೆ ತಡೆ ಹಾಕಲು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಮಾರ್ಚ್ ಅಂತ್ಯದವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದೆ. ಮೊನ್ನೆ ಪ್ರಧಾನಿ ನೀಡಿದ್ದ ಜನತಾ ಕರ್ಫ್ಯೂಗೆ ಜನರು ಬೆಂಬಲ ನೀಡಿದ್ದರು, ಕೆಲವು ಅಜ್ಙಾನಿಗಳು ಗುಂಪುಗೂಡಿ ರಸ್ತೆಗಳಲ್ಲಿ ತಟ್ಟೆ, ಜಾಗಟೆ, ಗಂಟೆ ಹಿಡಿದು ಕುಣಿದು ಮೋದಿಯವರ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ.

ಜನತಾ ಕರ್ಪ್ಯೂ ನಂತರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ಈ ಕುರಿತು ಸ್ಯಾಂಡಲ್ ವುಡ್  ದರ್ಶನ್ ದೇಶದ ಜನತೆಗೆ ಕರೋನಾ ವೈರಸ್ ನಿಂದ ಜಾಗೃತವಾಗಿರಿ ಎಂದು ಮನವಿ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ದರ್ಶನ್ ಕೊರೋನಾ ವಿರುದ್ಧ ಹೋರಾಡಲು ತಮ್ಮ ಅಭಿಮಾನಿಗಳೂ ಸೇರಿದಂತೆ ದೇಶದ ಜನರಿಗೆ ಕಿವಿ ಮಾತುಹೇಳಿದ್ದಾರೆ.

ಫೇಸ್ ಬುಕ್‌ನಲ್ಲಿ ದರ್ಶನ್‌ ಹೇಳಿರುವ ಕಿವಿ ಮಾತು ಹೀಗಿದೆ!

“ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕರೋನ ವೈರಸ್ ಇಂದ ಪಾರಾಗುವುದು ನಮ್ಮ ಮೊದಲ ಆಧ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಗವರ್ನಮೆಂಟ್, ಡಾಕ್ಟರ್ಸ್, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ನಿಮ್ಮ ಫ್ಯಾಮಿಲಿ ಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ. ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ. ಇಟಲಿ ಸ್ಪೇನ್ ದೇಶಗಳಲ್ಲಿ ಜಾಗೃತಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ.’Common sense is not common’ ಎನ್ನುವ ಹಾಗೆ ಮಾಡಬೇಡಿ.”

Please behave like a responsible citizen of the country.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights