ನೋಕಿಯಾ ಮೊಬೈಲ್ ನುಂಗಿದ ಭೂಪ : ಜೀವ ಉಳಿಸಲು ವೈದ್ಯರ ಹರಸಾಹಸ..!
ನೋಕಿಯಾ 3310 ಮೊಬೈಲ್ ಅನ್ನು ನುಂಗಿದ ವ್ಯಕ್ತಿಯನ್ನು ಉಳಿಸಲು ವೈದ್ಯರು ಹರಸಾಹಸಪಟ್ಟ ಘಟನೆ ಯುರೋಪ್ನ ಕೊಸೊವೊದಲ್ಲಿ ನಡೆದಿದೆ.
ಕೊಸೊವೊದ ಪ್ರಿಸ್ಟಿನಾದ 33 ವರ್ಷದ ವ್ಯಕ್ತಿ ಹಳೆಯ ನೋಕಿಯಾ 3310 ಫೋನ್ ನುಂಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಹೊಟ್ಟೆ ನೋವಿನಿಂದ ಆ ವ್ಯಕ್ತಿ ಸ್ವತಃ ಪ್ರಿಸ್ಟಿನಾದ ಆಸ್ಪತ್ರೆಗೆ ಹೋಗಿದ್ದಾನೆ. ಕೂಡಲೇ ವೈದ್ಯರು ವ್ಯಕ್ತಿಯ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ದೊಡ್ಡದಾದ ಫೋನ್ ಕಂಡು ಶಾಕ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಮಾಡದೇ ಹೋದಲ್ಲಿ ಫೋನ್ ಬ್ಯಾಟರಿಯ ಹಾನಿಕಾರಕ ರಾಸಾಯನಿಕಗಳಿಂದ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇತ್ತು. ಮಾತ್ರವಲ್ಲದೇ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೂರು ಭಾಗಗಳಾಗಿ ಫೋನ್ ವಿಭಜನೆಯಾಗಿತ್ತು.
ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯ ಹೊಟ್ಟೆಯಲ್ಲಿ ಸಿಲುಕಿಕೊಂಡ ಫೋನನ್ನು ಸುರಕ್ಷಿತವಾಗಿ ತೆಗೆಯುವಲ್ಲಿ ಡಾ. ತೇಲ್ಜಾಕು ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದ್ದಾರೆ. ಸಣ್ಣ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ ಕ್ಲಿಪ್ ನಲ್ಲಿ ವೈದ್ಯರ ತಂಡ ಎರಡು ಗಂಟೆಗಳ ನಿರಂತರ ಶಸ್ತ್ರ ಚಿಕಿತ್ಸೆ ಮೂಲಕ ವ್ಯಕ್ತಿಯ ಹೊಟ್ಟೆಯಿಂದ ಫೋನ್ ಪತ್ತೆ ಮಾಡಿ ತೆಗೆಯುವುದನ್ನು ತೋರಿಸಲಾಗಿದೆ. ಆದರೆ ಈ ವ್ಯಕ್ತಿ ಯಾಕೆ ಫೋನ್ ನುಂಗಿದನೆಂದು ಸ್ಪಷ್ಟತೆ ಇಲ್ಲ.
2014 ರ ಕೇಸ್ ಸ್ಟಡಿ ಪ್ರಕಾರ, ಜನರು ಮೊಬೈಲ್ ಫೋನ್ ನುಂಗಿದ ಅನೇಕ ಪ್ರಕರಣಗಳಿವೆ. 2016 ರಲ್ಲಿ, 29 ವರ್ಷದ ವ್ಯಕ್ತಿ ತನ್ನ ಫೋನ್ ನುಂಗಿರುವುದು ಈ ವೇಳೆ ನೆನಪಿಸಿಕೊಳ್ಳಬಹುದು.