ಮಳೆಗಾಗಿ ಹುಡುಗಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು..!

ಬರಪೀಡಿತ ಮಧ್ಯಪ್ರದೇಶದ ಹಳ್ಳಿಯಲ್ಲಿ ಮಳೆಗಾಗಿ ಹುಡುಗಿಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮನುಕುಲವೇ ತಲೆತಗ್ಗಿಸುವಂತ ಘಟನೆ ನಡೆದಿದೆ. ಮಾತ್ರವಲ್ಲದೇ ಈ ಘಟನೆಯ ಎರಡು ವಿಡಿಯೋಗಳು ಹೊರಬಂದಿವೆ.

ಹೌದು… ಮಳೆ ದೇವರನ್ನು ಮೆಚ್ಚಿಸಲು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆರು ಹುಡುಗಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಈ ರೀತಿ ಪೂಜೆಯಿಂದ ಬರ ಪರಿಸ್ಥಿತಿಯಿಂದ ಪರಿಹಾರ ಸಿಗುವ ಮೂಢ ನಂಬಿಕೆಯಿಂದ ಜನ ಈ ಆಚರಣೆ ಮಾಡಿದ್ದಾರೆ.

ಬುಂಡೇಲ್‌ಖಂಡ್ ಪ್ರದೇಶದ ದಾಮೋಹ್ ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರದಲ್ಲಿರುವ ಬನಿಯಾ ಗ್ರಾಮದಲ್ಲಿ ಭಾನುವಾರ ನಡೆದ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ದಾಮೋಹ್ ಜಿಲ್ಲಾಡಳಿತಕ್ಕೆ ವರದಿ ಕೇಳಿದೆ.

ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಡಿ.ಆರ್.ತೇನಿವಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ” ಮಳೆಯ ದೇವರನ್ನು ಮೆಚ್ಚಿಸಲು ಕೆಲವು ಯುವತಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ” ಎಂದು ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

“ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹುಡುಗಿಯರು ಬೆತ್ತಲೆಯಾಗಿರುವುದು ಬಲವಂತವಾಗಿ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಚಿಕ್ಕ ಹುಡುಗಿಯರಿಗೆ ಕಪ್ಪೆಯನ್ನು ಕಟ್ಟಿದ ಮರದ ಕೊಂಬೆಯನ್ನು ಭುಜದ ಮೇಲೆ ಇಟ್ಟುಕೊಂಡು ಬೆತ್ತಲೆಯಾಗಿ ನಡೆಯುತ್ತಾರೆ. ಈ ಹುಡುಗಿಯರ ಜೊತೆಗಿರುವ ಮಹಿಳೆಯರು ಮಳೆ ದೇವರನ್ನು ಸ್ತುತಿಸಲು ಭಜನೆಗಳನ್ನು ಹಾಡುತ್ತಾರೆ. ಈ ಘಟನೆಯಲ್ಲಿ ಈ ಹುಡುಗಿಯರ ಪೋಷಕರು ಸಹ ಭಾಗಿಯಾಗಿದ್ದಾರೆ. ಅಂತಹ ಮೂಢನಂಬಿಕೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುವುದು ಎಂದು ಡಿ.ಆರ್.ತೇನಿವಾರ್ ಅವರು ಹೇಳಿದರು.

ಇಂತಹ ಸಂದರ್ಭಗಳಲ್ಲಿ ಆಡಳಿತ ಇಂತಹ ಮೂಢನಂಬಿಕೆಯ ನಿಷ್ಪ್ರಯೋಜಕತೆಯ ಬಗ್ಗೆ ಹಳ್ಳಿಗರಿಗೆ ಅರಿವು ಮೂಡಿಸುತ್ತದೆ ಎಂದು ದಾಮೋಹ್ ಕಲೆಕ್ಟರ್ ಎಸ್ ಕೃಷ್ಣ ಚೈತನ್ಯ ಅವರು ಹೇಳಿದ್ಧಾರೆ.

ವಿಡಿಯೋ ಕ್ಲಿಪ್ ಒಂದರಲ್ಲಿ, ಬಟ್ಟೆ ಇಲ್ಲದ ಹುಡುಗಿಯರು (ಸುಮಾರು ಐದು ವರ್ಷ ವಯಸ್ಸಿನವರು) ಕಪ್ಪೆಯನ್ನು ಕಟ್ಟಿಕೊಂಡು ತಮ್ಮ ಭುಜದ ಮೇಲೆ ಮರದ ಶಾಫ್ಟ್ ಅನ್ನು ಇಟ್ಟುಕೊಂಡು ಪಕ್ಕದಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಭಜನೆ ಹಾಡುವ ಮಹಿಳೆಯರ ಗುಂಪು ಮೆರವಣಿಗೆಯಲ್ಲಿ ಭಾಗಿಯಾಗಿದ್ಧಾರೆ.

ಇನ್ನೊಂದು ವಿಡಿಯೋದಲ್ಲಿ, ಮಳೆಯ ಅನುಪಸ್ಥಿತಿಯಲ್ಲಿ ಭತ್ತದ ಬೆಳೆ ಒಣಗುತ್ತಿರುವುದರಿಂದ ಈ ಆಚರಣೆಯನ್ನು ಮಾಡಲಾಗುತ್ತಿದೆ ಎಂದು ಕೆಲವು ಮಹಿಳೆಯರು ಹೇಳುವುದನ್ನು ಕೇಳಬಹುದು. “ಇದು ಮಳೆಯನ್ನು ತರುತ್ತದೆ ಎಂದು ನಾವು ನಂಬುತ್ತೇವೆ” ಎಂದು ಅವರು ಘಟನೆಯನ್ನು ದಾಖಲಿಸಿದ ವ್ಯಕ್ತಿಗೆ ಹೇಳುವುದನ್ನು ಕೇಳಬಹುದು.

ಮಹಿಳೆಯರು ಈ ಮೆರವಣಿಗೆಯಲ್ಲಿ ಗ್ರಾಮಸ್ಥರಿಂದ ಹಸಿ ಆಹಾರ ಧಾನ್ಯವನ್ನು ಸಂಗ್ರಹಿಸಿ ನಂತರ ಸ್ಥಳೀಯ ದೇವಸ್ಥಾನದಲ್ಲಿ ‘ಭಂಡಾರ’ (ಗುಂಪು ಔತಣ) ಕ್ಕೆ ಆಹಾರವನ್ನು ತಯಾರಿಸುತ್ತಾರೆ ಎಂದು ಹೇಳಿದರು.

Spread the love

Leave a Reply

Your email address will not be published. Required fields are marked *