ಲವ್‌ ಜಿಹಾದ್ ಆರೋಪ: ಹಿಂದೂ ಬಾಲಕನ ಮೇಲೆ ಅಮಾನುಷ ಹಲ್ಲೆ!

ಉತ್ತರ ಪ್ರದೇಶ ಮೂಲದ 16 ವರ್ಷ ಹಿಂದೂ ಬಾಲಕನನ್ನು ಮುಸ್ಲಿಂ ಸಮುದಾಯದವನು ಎಂದು ಭಾವಿಸಿ, ಲವ್‌ ಜಿಹಾದ್‌ ಆರೋಪ ಹೊರಿಸಿ ಬಾಲಕನ ಮೇಲೆ ಅಮಾನುಷವಾಗಿ ಗುಂಪು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ದೇವಾಸ್‌‌ನಲ್ಲಿ ನಡೆದಿದೆ.

ಬಾಲಕ ಮತ್ತು ಆತನ 12 ವರ್ಷದ ಸ್ನೇಹಿತೆ ಉತ್ತರ ಪ್ರದೇಶದಿಂದ ತಪ್ಪಿಸಿಕೊಂಡು ಮಧ್ಯಪ್ರದೇಶಕ್ಕೆ ಬಂದಿದ್ದರು. ಅವರನ್ನು ಮಧ್ಯಪ್ರದೇಶದಲ್ಲಿ ದುಷ್ಕರ್ಮಿಗಳು, ಲವ್‌ ಜಿಹಾದ್‌ ಆರೋಪ ಹೊರೆಸಿ ಬಾಲಕನ ಮೇಲೆ ಪೊಲೀಸರ ಸಮ್ಮುಖದಲ್ಲೇ ಕ್ರೂರವಾಗಿ ಥಳಿಸಿದ್ದಾರೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

“ಹಿಂದೂ ಬಾಲಕನನ್ನು ಆರೋಪಿಗಳು ಮುಸ್ಲಿಂ ಎಂದು ಭಾವಿಸಿದ್ದು, ಆತನನ್ನು ಅಮಾನವೀಯವಾಗಿ ಬಾಲಕನನ್ನು ಥಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಹುಡುಗಿ ಮತ್ತು ಹುಡುಗ ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ” ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಇಬ್ಬರೂ ಹಿಂದೂ ಸಮುದಾಯದವರು ಎಂದು ನಾವು ಅವರಿಗೆ ನಿರಂತರವಾಗಿ ಹೇಳುತ್ತಿದ್ದೆವು. ಆದರೆ ಅವರು ನಮ್ಮ ಮಾತನ್ನು ಕೇಳಿಸಿಕೊಳ್ಳದೇ ಬಾಲಕನ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು. ನಾವು ಆತನನ್ನು ರಕ್ಷಿಸದಿದ್ದರೆ, ಆತ ಸಾವಿಗೀಡಾಗುತ್ತಿದ್ದ” ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಜನತಾಕಾ ರಿಪೋರ್ಟರ್‌ ವರದಿ ಮಾಡಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ನೃತ್ಯವನ್ನು ‘ಡಾನ್ಸ್‌ ಜಿಹಾದ್‌’ ಎಂದ ಸಂಘಿಗಳು; ಕೇರಳ ತಿರುಗೇಟು ಕೊಟ್ಟಿದ್ದು ಹೀಗೆ!

ಉತ್ತರ ಪ್ರದೇಶದ ಬಲಿಯಾದಿಂದ ತಪ್ಪಿಸಿಕೊಂಡು ಬಂದಿದ್ದ ಈ ಅಪ್ರಾಪ್ತ ಹುಡುಗ ಮತ್ತು ಹುಡುಗಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಇಬ್ಬರನ್ನು ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲು ಸ್ಥಳೀಯ ಪೋಲಿಸರಿಗೆ ಕೇಳಲಾಗಿತ್ತು. ಹೀಗಾಗಿ, ಪೊಲೀಸ್ ತಂಡವು ಬೌಂರಸಾ ಟೋಲ್‌ ಗೇಟ್‌ನಲ್ಲಿ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿಸುತ್ತಿದ್ದರು.

ಉತ್ತರ ಪ್ರದೇಶದಿಂದ ಅಹಮದಾಬಾದ್‌‌ಗೆ ಹೋಗುವ ಬಸ್ ತಪಾಸಣೆಯ ವೇಳೆ ಈ ಇಬ್ಬರು ಅಪ್ರಾಪ್ತರು ಪತ್ತೆಯಾಗಿದ್ದಾರೆ. ಬಾಲಕನನ್ನು ಬಸ್ಸಿನಿಂದ ಇಳಿಸುತ್ತಿದ್ದಂತೆ, ಕಾರಿನಲ್ಲಿದ್ದ ಗುಂಪೊಂದು ಪೊಲೀಸರ ಸಮ್ಮುಖದಲ್ಲೆ ಬಾಲಕನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದೆ. ಗುಂಪಿನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ತಂಡವು ಪೊಲೀಸ್ ಠಾಣೆಗೆ ಕಳುಹಿಸಿದೆ ಎಂದು ಅವರು ಹೇಳಿದ್ದಾರೆ. ಅದೇ ಸಮಯದಲ್ಲಿ, ಹುಡುಗಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಸೊಂಕಾಚ್ ಉಪ-ವಿಭಾಗೀಯ ಪೊಲೀಸ್ ಪ್ರಶಾಂತ್ ಸಿಂಗ್ ಸೆಂಗಾರ್ ಹೇಳಿದ್ದಾರೆ.

ಬಾಲಕನು ಆರೋಪಿಯಿಂದ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಸೆಂಗಾರ್ ಹೇಳಿದ್ದಾರೆ. ವೈರಲ್ ಆದ ವಿಡಿಯೋ ಆಧಾರದ ಮೇಲೆ, ಬೌಂರಸಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 147, 323 ಮತ್ತು 294 ರ ಅಡಿಯಲ್ಲಿ ನಾಲ್ವರು ಆರೋಪಿಗಳ ಸಹಿತ 15 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಪಟ್ಟ ಕಟ್ಟಿದ ನ್ಯೂಸ್‌ 18 ಮತ್ತು ಜೀ ನ್ಯೂಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights