ದೇಶದಲ್ಲಿ ಕೊರೊನಾ ಏರಿಳಿಕೆ : 31,222 ಹೊಸ ಕೇಸ್ ಪತ್ತೆ – 290 ಜನ ಬಲಿ!
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 31,222 ಹೊಸ ಕೇಸ್ ಪತ್ತೆಯಾಗಿವೆ. ಜೊತೆಗೆ 290 ಜನ ಬಲಿಯಾಗಿದ್ಧಾರೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 31,222 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 290 ಸಾವುಗಳನ್ನು ದಾಖಲಾಗಿವೆ. ಇದು ನಿನ್ನೆಗಿಂತ ಶೇಕಡಾ 19.8 ರಷ್ಟು ಕಡಿಮೆ ಪ್ರಕರಣವಾಗಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳದಲ್ಲಿ 19,688 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,626 ಪ್ರಕರಣಗಳು, ತಮಿಳುನಾಡು 1,556 ಪ್ರಕರಣಗಳು, ಮಿಜೋರಾಂ 1,468 ಪ್ರಕರಣಗಳು ಮತ್ತು ಕರ್ನಾಟಕ 973 ಪ್ರಕರಣಗಳು ದಾಖಲಾಗಿವೆ.
ಇನ್ನೂ ಹೊಸದಾಗಿ ದಾಖಲಾದ 290 ಸಾವಿನ ಪ್ರಕರಣಗಳಲ್ಲಿ 135 ಜನ ಮಹಾರಾಷ್ಟ್ರದಲ್ಲಿ 37 ಸಾವುಗಳು ಸಂಭವಿಸಿವೆ.
ದೇಶದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,30,58,843 ರಷ್ಟಿದ್ದರೆ ಒಟ್ಟಾರೆ ಸಾವಿನ ಸಂಖ್ಯೆ 4,41,042 ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 42,942 ರೋಗಿಗಳು ಚೇತರಿಸಿಕೊಂಡಿದ್ದರೆ ದೇಶಾದ್ಯಂತ ಒಟ್ಟು 3,22,24,937 ಚೇತರಿಸಿಕೊಂಡಿದ್ದಾರೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 3,92,864 ರಷ್ಟಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 1,13,53,571 ಡೋಸ್‌ಗಳನ್ನು ನೀಡಲಾಗಿದ್ದು, ಈವರೆಗೆ ಒಟ್ಟು 69,90,62,776 ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 15,26,056 ಮಾದರಿಗಳನ್ನು ಪರೀಕ್ಷಿಸಲಾಗಿದೆ.