ಬಿಜೆಪಿ ಪದಾಧಿಕಾರಿ ಬಾಂಗ್ಲಾದೇಶಿಗ; ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ: ಅನಿಲ್ ದೇಶ್ಮುಖ್

ಬಿಜೆಪಿಯ ಪದಾಧಿಕಾರಿ ಬಾಂಗ್ಲಾದೇಶಿ ಮತ್ತು ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಶನಿವಾರ ಹೇಳಿದ್ದಾರೆ.

ಬಿಜೆಪಿಯ ಉತ್ತರ ಮುಂಬೈ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ರುಬೆಲ್ ಜೋನು ಶೇಖ್ ಅವರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪಡೆದಿದ್ದಾರೆ. ಆದರೆ, ಅವರು ನೀಡಿರುವ ಪಶ್ಚಿಮ ಬಂಗಾಳದ 24 ಉತ್ತರ ಪರಗಣಗಳ ವಿಳಾಸ ಮತ್ತು ಶಾಲೆಯ ವಿವರಗಳು ನಕಲಿ ಎಂದು ಮುಂಬೈ ಪೊಲೀಸರು ಕಂಡುಹಿಡಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಅವರ ದಾಖಲೆಗಳನ್ನು ಪರಿಶೀಲಿಸದೆ ಅಥವಾ ಅವರ ರುಜುವಾತುಗಳನ್ನು ಪರಿಶೀಲಿಸದೆ, ಬಿಜೆಪಿ ಅವರನ್ನು ಹೇಗೆ ಪದಾಧಿಕಾರಿಗಳನ್ನಾಗಿ ಮಾಡಿದೆ ಎಂದು ನಾನು ಆಶ್ಚರ್ಯಗೊಂಡಿದ್ದೇನೆ” ಎಂದು ದೇಶಮುಖ್ ಹೇಳಿದ್ದಾರೆ.

ಏತನ್ಮಧ್ಯೆ, ನಮ್ಮ ಪಕ್ಷವು ಶೇಖ್ ಅವರ ಯಾವುದೇ ತಪ್ಪನ್ನು ರಕ್ಷಿಸುವುದಿಲ್ಲ. ಅಂತೆಯೇ, ವಿಎಂಎ ಸರ್ಕಾರವು ಎನ್‌ಸಿಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಲ್ಲಿಯೂ ಇದೇ ರೀತಿಯ ಪ್ರಕರಣಗಳನ್ನು ಕಂಡುಹಿಡಿಯಲು ಉತ್ಸಾಹ ತೋರಿಸಬೇಕು ಎಂದು ಬಿಜೆಪಿ  ಎಂವಿಎ ಸರ್ಕಾರವು “ಇದೇ ರೀತಿಯ ಉತ್ಸಾಹ” ತೋರಿಸಬೇಕು ಎಂದು ಉಪಾಧ್ಯಕ್ಷ ಚಿತ್ರಾ ವಾಘ್ ಅವರು ಹೇಳಿದ್ದಾರೆ.

ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights