ದಕ್ಷಿಣ ಅಮೆರಿಕಾದಲ್ಲಿ ಭಾರೀ ಹಿಮಪಾತ : ಭೀತಿಯಲ್ಲೇ ರಾತ್ರಿ ದೂಡುವ ಜನ!

ಮನುಷ್ಯ ಬದಲಾದಂತೆ ಹವಮಾನ ಕೂಡ ಬದಲಾಗುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗುತ್ತಿಲ್ಲ. ಕಾಲವಲ್ಲದ ಕಾಲದಲ್ಲಿ ಮಳೆ,ಚಳಿ, ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ.

ಇದಕ್ಕೆ ಸಾಕ್ಷಿ ಅಂದರೆ ಸದ್ಯ ಎರಡು ದಿನಗಳಿಂದ ರಾಜ್ಯದ ಕೆಲವೆಡೆ ಆಗುತ್ತಿರುವ ಮಳೆ. ರಾಜ್ಯದಲ್ಲೇ ಹೀಗಾದರೆ ಹಿಮದಲ್ಲೇ ಬದುಕುವ ಜನರ ಪರಿಸ್ಥಿತಿ ಹೇಗಿರಬೇಡ. ಅಮೆರಿಕಾದ ದಕ್ಷಿಣದ ರಾಜ್ಯಗಳ ಹೀನಾಯ ಪರಿಸ್ಥಿತಿ ನೋಡಿದರೆ ನಿಜಕ್ಕೂ ದಂಗಾಗಿ ಹೋಗ್ತೀರಾ.

ಸುಮಾರು 20 ಲಕ್ಷ ವರ್ಷದ ಹಿಂದೆ ಭೂಮಿ ಮೇಲೆ ಎದುರಾದ ಅತ್ಯಂತ ಭೀಕರ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಹಿಮಯುಗದ ಭೀತಿ ಎದುರಾಗಿದೆ.

ಕೆಲ ದಿನಗಳಿಂದ ಕುದಿಯುವ ನೀರು ಕೂಡ ಹೆಪ್ಪುಗಟ್ಟುವ ನೀರು ಕೂಡ ಹಿಮಗಟ್ಟುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಹೀಗಾಗಿ ಜನ ಹೊರಬರುವುದಿರಲಿ ಮನೆಯೊಳಗೆ ಕುಳಿತು ಜೀವ ಉಳಿಸಿಕೊಳ್ಳುವುದು ಕಷ್ಟ ಇದೆ. ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಲು ಹೊರಬರುವುದು ಕಷ್ಟವಾಗಿದೆ. ಇನ್ನೂ ಇದರ ಮಧ್ಯೆ ಕರೆಂಟ್ , ನೀರು ಇಲ್ದೆ ಇರುವುದು ಕೂಡ ದೊಡ್ಡ ಸಮಸ್ಯೆಗಳಾಗಿವೆ. ಇನ್ನೂ ರೋಗಿಗಳ ಸ್ಥಿತಿ ಅಂತೂ ಹೇಳತೀರದ್ದು, ಅವರಿಗಾಗಿ ಔಷದಗಳನ್ನು ಸಂಗ್ರಹ ಮಾಡುವುದು ಕಷ್ಟವಾಗಿ ಹೋಗಿದೆ. ಕತ್ತಲಾದ್ರೆ ಸಾಕು ಜೀವ ಕೈಯಲ್ಲಿಟ್ಟುಕೊಂಡು ಬೆಳಗಾಗುವುದನ್ನ ಕಾಯಬೇಕು.

ಟೆಕ್ಸಾಸ್ ಸೇರಿದಂತೆ ಅಮೇರಿಕಾದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಭೀಕರ ಶೀತಮಾರುತಗಳು ಆವರಿಸಿವೆ. ವಿಪರೀತ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. 15 ಡಿಗ್ರಿವರೆಗೆ ವಾತಾವರಣದ ತಾಪಮಾನ ಕುಸಿಯುತ್ತಿದೆ. ಹೀಗಾಗಿ ಜನರಿಗೆ ಹಿಮಯುಗದ ಭೀತಿ ಕಾಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights