ಕೊರೊನಾ ಮಧ್ಯೆ ಸಂಸದೆ ಪ್ರಜ್ಞಾ ಠಾಕೂರ್ ಅನುಪಸ್ಥಿತಿಯನ್ನು ಸಮರ್ಥಿಸಿಕೊಂಡ ಬಿಜೆಪಿ…

ಭೋಪಾಲ್ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾಣೆಯಾದ ಹಲವಾರು ಪೋಸ್ಟರ್‌ಗಳನ್ನು ಮಧ್ಯಪ್ರದೇಶದ ರಾಜಧಾನಿಯ ವಿವಿಧ ಭಾಗಗಳಲ್ಲಿ ಹಾಕಿದ ನಂತರ ಭಾರತೀಯ ಜನತಾ ಪಕ್ಷ ಪ್ರಜ್ಞಾ ಠಾಕೂರ್ ಅನುಪಸ್ಥಿತಿಯನ್ನು ಶುಕ್ರವಾರ ಸಮರ್ಥಿಕೊಂಡಿದೆ.

ಅನಾಮಧೇಯ ಪೋಸ್ಟರ್‌ಗಳು ಹೀಗಿವೆ: “ಕೊರೋನವೈರಸ್ ನಿಂದಾಗಿ ಭೋಪಾಲ್ ನಿವಾಸಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸಂಸದೆ ಪ್ರಜ್ಞಾ ಠಾಕೂರ್ ಎಲ್ಲಿ ಕಾಣೆಯಾಗಿದ್ದಾರೆ?” “ಗುಮ್ಶುಡಾ ಕಿ ತಲಾಶ್” (ಕಾಣೆಯಾದವರನ್ನು ಹುಡುಕಿ). ಭೋಪಾಲ್ ನೈಋತ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಪಿಸಿ ಶರ್ಮಾ ಮಾತನಾಡಿ, ಈ ಸಂಕಟದ ಸಮಯದಲ್ಲಿ ಬಿಜೆಪಿ ಸಂಸದರು ಇರುವ ಸ್ಥಳದ ಬಗ್ಗೆ ಜನರಿಗೆ ತಿಳಿಯುವ ಹಕ್ಕಿದೆ ಎಂದಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಠಾಕೂರ್ ವಿರುದ್ಧ ಸ್ಪರ್ಧಿಸಿ 3.60 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನು ಎದುರಿಸಿದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ನಗರದಲ್ಲಿದ್ದರು. ಲಾಕ್ ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಆದರೆ ಪ್ರಜ್ಞಾ ಠಾಕೂರ್ ಅವರ ಅನುಪಸ್ಥಿತಿಯನ್ನು ಬಿಜೆಪಿ ಸಮರ್ಥಿಸುತ್ತದೆ.

ಬಿಜೆಪಿ ಸಂಸದರು ಕಾಣೆಯಾಗಿಲ್ಲ. ಆದರೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಆಕೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾರ್ಯಕರ್ತ ಉಮಕಾಂತ್ ದೀಕ್ಷಿತ್ ಹೇಳಿದ್ದಾರೆ.

ಠಾಕೂರ್ ಅವರು ಫೋನ್‌ನಲ್ಲಿ ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೊರೋನವೈರಸ್ ಲಾಕ್ ಡೌನ್ ಮಧ್ಯೆ ವಲಸಿಗರು, ವಿದ್ಯಾರ್ಥಿಗಳು ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ದೆಹಲಿಯ ಏಮ್ಸ್ನಲ್ಲಿ ಠಾಕೂರ್ ಕ್ಯಾನ್ಸರ್ ಮತ್ತು  ಕಣ್ಣಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಹೇಳಿದ್ದಾರೆ.

ಠಾಕೂರ್ ಕ್ಷೇತ್ರದಾದ್ಯಂತ ಆಹಾರ, ದಿನಸಿ ಇತ್ಯಾದಿಗಳ ವಿತರಣೆ ನಡೆಯುತ್ತಿದೆ ಎಂದು ಕೊಥಾರಿ ಹೇಳಿದರು, ದಿಗ್ವಿಜಯ ಸಿಂಗ್ ಅವರ ಸಾರ್ವಜನಿಕ ಪ್ರದರ್ಶನಗಳು “ರಾಜಕೀಯ” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights