ದೇಶದ ಮೊಟ್ಟಮೊದಲ ಕಸ ಕೆಫೆ ಛತ್ತೀಸ್‌ಗಢದಲ್ಲಿ,1 ಕೆಜಿ ಪ್ಲಾಸ್ಟಿಕ್ ಕೊಟ್ಟರೇ ಊಟ ಉಚಿತ!

ಹೋಟೆಲುಗಳಿಗೆ ನಾನಾ ಹೆಸರು ಕೇಳಿದ್ದೇವೆ. ಆದರೆ ಇಲ್ಲೊಂದು ಹೊಸ ಹೋಟೆಲ್ ತೆರೆಯಲಾಗಿದ್ದು ಅದರ ಹೆಸರು ’ಕಸ ಕೆಫೆ’ ಎಂದು ಇಡಲಾಗಿದೆ! ಏನಿದು ಕಸ ಕೆಫೆ ಎಂದರೆ ಅದಕ್ಕೆ ಇಲ್ಲಿದೆ ಉತ್ತರ.
ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ಸ್ತಬ್ದಗೊಳಿಸುವ ನಿಟ್ಟನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಈ ಕೆಫೆ ತೆರೆಯಲಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಈ ಕಸ ಕೆಫೆ ತಲೆಎತ್ತಿದೆ. ಪಾಲಿಕೆಯ ಶ್ರೀರಕ್ಷೆ ಇದಕ್ಕಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದೇ ಇದರ ಮೂಲ ಉದ್ದೇಶ.

ಇನ್ನು ಕಸ ಕೆಫೆ ಹೇಗೆ ಅಂದರೆ ಇಲ್ಲಿ ಒಂದು ಕೆಜಿ ಪ್ಲಾಸ್ಟಿಕ್ ತಂದಲ್ಲಿ ಊಟ ಉಚಿತ, ಅರ್ಧ ಕೆಜಿ ಪ್ಲಾಸ್ಟಿಕ್ ತಂದರೆ ತಿಂಡಿ ಉಚಿತ! ಪ್ರದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರನ್ನು ಉತ್ತೇಜಿಸುವ ಸಲುವಾಗಿ ಈ ಐಡಿಯಾ ಮಾಡಲಾಗಿದೆ.

ದಶದ ಎರಡನೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಹೊಂದಿರುವ ಅಂಬಿಕಾಪುರವನ್ನು ಈಗ ಪ್ಲಾಸ್ಟಿಕ್ ಮುಕ್ತಗೊಳಿಸುವುದೇ ಈ ಕಸಕೆಫ್ ಹಿಂದಿನ ಉದ್ದೇಶ ಎಂದು ಅಲ್ಲಿನ ಆರೋಗ್ತ ಸಚಿವ ಸಿಂಗ್ ದೇವ್ ಅವರು ಹೇಳಿದ್ದಾರೆ.

’ಹೆಚ್ಚು ಕಸ, ಹೆಚ್ಚು ರುಚಿ’ ಎಂಬ ಕಿರುನಾಮ ಸಹ ಹೊಂದಿರುವ ಈ ಕಸ ಕೆಫೆಗೆ ಈಗಾಗಲೇ ಜನರು ಮಾರುಹೋಗಿದ್ದಾರೆ. ಮನೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳನ್ನು ಊಟಕ್ಕೆ ವಿನಿಮಯ ಮಾಡಿಕೊಳ್ಳಲು ಸುತ್ತಮುತ್ತಲಿನ ಜನ ಪೈಪೊಟಿಯಲ್ಲಿ ತೊಡಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights