ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೋದರ ಹೃದಯ ಅಪಘಾತದಿಂದ ನಿಧನ..
ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೋದರ ಎಂ.ಎಚ್ ಆನಂದ್ ಕುಮಾರ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಅಪಘಾತದಿಂದ ನಿಧನವಾಗಿದ್ದಾರೆ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಓರ್ವ ಪುತ್ರ ವಿದೇಶದಲ್ಲಿರುವ ಕಾರಣ ಅಂತ್ಯಕ್ರಿಯೆಯು ಸೋಮವಾರ ಮೈಸೂರಿನಲ್ಲಿ ಜರುಗಲಿದೆ.
ಮೂವರು ಸಹೋದರರು ವರ್ಷಕೊಬ್ಬರಂತೆ ಸಾವನ್ನಪ್ಪಿದ್ದಂತಾಗಿದೆ. ಅಂಬರೀಶ್ ಅವರ ಅಣ್ಣ ಡಾ. ಹರೀಶ್ (69) 2017 ನವೆಂಬರ್ 24ರಂದು ಸಾವನ್ನಪ್ಪಿದ್ದರು. ಸಹೋದರನನ್ನು ಕಳೆದುಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಅದೇ ದಿನಾಂಕದಂದು ಅಂಬರೀಶ್ ಕೂಡ ಕೊನೆಯುಸಿರೆಳೆದಿದ್ದರು.