ನೆಹರು ದೂಷಿಸುವವರು ತಮ್ಮ ಅತ್ಮಾವಲೋಕನ ಮಾಡಿಕೊಳ್ಳಬೇಕು: ಮೋದಿಗೆ ವಿರುದ್ಧ ಶಿವಸೇನೆ ಟೀಕೆ

ನೆಹರು ಅವರನ್ನು ದೂಷಿಸುತ್ತಿರುವವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೆ, 20 ಭಾರತೀಯ ಯೋಧರ ಪ್ರಾಣ ತ್ಯಾಗ ಅರ್ಥವಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನೆಯು ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿದೆ.

ಮೊದಲ ಆ್ಯಕ್ಸಿಡೆಂಟಲ್‌ ಪ್ರೈಮ್‌ ...

ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಭಾರತೀಯ ಯೋಧರನ್ನು ಸುತ್ತುವರೆದಿದ್ದು, ಕಬ್ಬಿಣದ ರಾಡ್ ಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಯೋಧರನ್ನು ಅಪಹರಣ ಮಾಡಿದ್ದಾರೆ.  ಈ ಹಿಂದೆ ಪಾಕಿಸ್ತಾನ ಕೂಡ ಭಾರತೀಯ ಯೋಧರ ಶಿರಚ್ಛೇದ ಮಾಡಿತ್ತು. ಆಗೆಲ್ಲಾ ನಾವು ಕಿರುಚಾಡುತ್ತಿದ್ದೆವು. ಈ ವೇಳೆ ಹೇಳಿಕೆ ನೀಡಿದ್ದ ಅಧಿಕಾರಿಗಳು ಒಂದು ತಲೆಗೆ ಹತ್ತು ತಲೆಗಳನ್ನು ತರುತ್ತೇವೆಂದು ಹೇಳಿದ್ದರು.

ಇದೀಗ ಚೀನೀಯರು ನಮ್ಮ 20 ಯೋಧರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಲ್ಲದೆ, 150ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೋದಿಯವರು ಈಗ ಎಚ್ಚೆತ್ತುಕೊಂಡಿದ್ದು, ಅವಸರದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದೆ.

ಭಾರತ-ಚೀನಾ ಗಡಿ ಮುಖಾಮುಖಿ; ಭಾರತೀಯ 20 ...

ಈ ಹಿಂದೆ ಹೇಳಿಕೆ ನೀಡಿದ್ದ ಮೋದಿಯವರು, ಭಾರತ ಎಂದಿಗೂ ಸಮಗ್ರತೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಯಾರಾದರೂ ನಮ್ಮನ್ನು ಪ್ರಚೋದಿಸಲು ಯತ್ನಿಸಿದರೆ ಸೂಕ್ತ ಉತ್ತರ ನೀಡುತ್ತೇವೆಂದು ಹೇಳಿದ್ದರು. ಭಾರತ ಸ್ವಾಭಿಮಾನವನ್ನು ಹೊಂದಿದ್ದು, ಪ್ರತಿ ಇಂಚು ಭೂಮಿಯನ್ನು ರಕ್ಷಣೆ ಮಾಡುತ್ತದೆ ಎಂದಿದ್ದರು. ಹಾಗಾದರೆ, ಈಗ ನಡೆದಿರುವ  20 ಯೋಧರ ಹತ್ಯೆ ಪ್ರಚೋದನೆಯಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಚೋದನೆ ನೀಡುವವರಿಗೆ ತಕ್ಕ ಉತ್ತರ ನೀಡುತ್ತವೆಂದು ಹೇಳಿದ್ದ ಮೋದಿಯವರು,ಆ ಕುರಿತು ಮಾತನಾಡುವ ಬದಲಾಗಿ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ. ಚೀನಾ ನಡೆಸಿರುವ ದಾಳಿ ದೇಶದ ಸ್ವಾಭಿಮಾನ ಮತ್ತು ಸಮಗ್ರತೆಯ ಮೇಲಿನ ಅತೀದೊಡ್ಡ ದಾಳಿಯಾಗಿದೆ.

ಪಾಕಿಸ್ತಾನಕ್ಕಷ್ಟೇ ನಾವು ಬೆದರಿಕೆ ಹಾಕಬಹುದು. ಚೀನಾದೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದರ ಕುರಿತು ದೇಶದಲ್ಲಿರುವ ಭ್ರಮೆಯನ್ನು ಹೇಗೆ ಹೊರತರುತ್ತೀರಿ?… ನಮ್ಮ ಯೋಧರು ಇಂದಿಗೂ 1962ರ ಸನ್ನಿವೇಶವನ್ನೇ ಎದುರಿಸುತ್ತಿದ್ದಾರೆ. ಈಗಲೂ ನಾವು 20 ಯೋಧರನ್ನು ಕಳೆದುಕೊಂಡಿದ್ದೇವೆ. ಇಂದು ನಮ್ಮ ಬಳಿ ಎಲ್ಲವೂ ಇದ್ದರೂ ಚೀನಾ ನಮ್ಮ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ. ಪಂಡಿತ್ ನೆಹರು ಅವರನ್ನು ದೂಷಿಸುವವರು ಮೊದಲು ತಮ್ಮ ಆತ್ಮಾವಲೋಕನ ಮಾಡಿಕೊಂಡರೆ, 20 ಯೋಧರ ತ್ಯಾಗ ಅರ್ಥವಾಗುತ್ತದೆ ಎಂದು ಶಿವಸೇನೆ ಬರೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights